Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ಯಾವಾಗಲೂ ನನ್ನ ದೇವರನ್ನು ಕೊಂಡಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿವಿುತ್ತ ನಾನು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರನ್ನು ಕೊಂಡಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಕ್ರಿಸ್ತ ಯೇಸುವಿನಲ್ಲಿ ನಿಮಗೆ ಕೊಟ್ಟಿರುವ ದೇವರ ಕೃಪೆಯ ಕಾರಣಕ್ಕಾಗಿ ನಾನು ಯಾವಾಗಲೂ ನಿಮಗೋಸ್ಕರ ಅವರಿಗೆ ಕೃತಜ್ಞತೆ ಹೇಳುವವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಕ್ರಿಸ್ತಾ ಜೆಜುಚ್ಯಾ ವೈನಾ ದೆವಾನ್ ತುಮ್ಕಾ ದಿಲ್ಲ್ಯಾ ಕುರ್ಪೆಕ್ ಲಾಗುನ್ ಮಿಯಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಕನ್ನಾಬಿ ಧನ್ಯವಾದ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:4
12 ತಿಳಿವುಗಳ ಹೋಲಿಕೆ  

ಮೊದಲು ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.


ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು.


ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.


ಆದರೆ ನೀವು ಮೊದಲು ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಿಕೊಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದ್ದರಿಂದಲೂ,


ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು.


ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು, ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕಳುಹಿಸಿ ಕೊಡುವನು.


ನಮ್ಮ ತಂದೆಯಾಗಿರುವ ದೇವರಿಂದಲೂ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಉಂಟಾಗಲಿ.


ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.


ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ನಾನು ಅದನ್ನು ನೆರವೇರಿಸುವೆನು.


ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.


ಅವರು ಅದನ್ನು ಕೇಳಿ ದೇವರನ್ನು ಕೊಂಡಾಡಿದರು. ಆಗ ಅವರು ಅವನಿಗೆ; “ಸಹೋದರನೇ, ಯೆಹೂದ್ಯರಲ್ಲಿ ಯೇಸುವನ್ನು ನಂಬಿರುವವರು ಸಾವಿರಾರು ಮಂದಿ ಇದ್ದಾರೆಂಬುದನ್ನು ನೋಡುತ್ತಿದ್ದೀಯಲ್ಲಾ. ಅವರೆಲ್ಲರೂ ಧರ್ಮಶಾಸ್ತ್ರದ ಅಭಿಮಾನಿಗಳಾಗಿದ್ದಾರೆ.


ಆದರೆ ಯೇಸು ಅವರಿಗೆ, “ಈ ಮಾತನ್ನು ಎಲ್ಲರೂ ಅಂಗೀಕರಿಸಲಾರರು ಆದರೆ ಯಾರಿಗೆ ಆ ವರವು ಕೊಡಲ್ಪಟ್ಟಿದೆಯೋ ಅವರು ಮಾತ್ರ ಅದನ್ನು ಅಂಗೀಕರಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು