Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 22:38 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ದೇವದಾಸಿಯರು ಸ್ನಾನಮಾಡುವ ಸಮಾರ್ಯದ ಕೆರೆಯಲ್ಲಿ ಅವನ ರಥವನ್ನು ತೊಳೆಯುತ್ತಿದ್ದಾಗ ನಾಯಿಗಳು ಬಂದು ಅದರಲ್ಲಿದ್ದ ರಕ್ತವನ್ನು ನೆಕ್ಕಿದವು. ಹೀಗೆ ಯೆಹೋವನು ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

38 ವೇಶ್ಯೆಯರು ಸ್ನಾನಮಾಡುವ ಸಮಾರಿಯದ ಕೆರೆಯಲ್ಲಿ ಅವನ ರಥವನ್ನು ತೊಳೆಯುತ್ತಿದ್ದಾಗ, ನಾಯಿಗಳು ಬಂದು ಅದರಲ್ಲಿದ್ದ ರಕ್ತವನ್ನು ನೆಕ್ಕಿದವು, ಹೀಗೆ ಸರ್ವೇಶ್ವರ ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ದೇವದಾಸಿಯರು ಸ್ನಾನಮಾಡುವ ಸಮಾರ್ಯದ ಕೆರೆಯಲ್ಲಿ ಅವನ ರಥವನ್ನು ತೊಳೆಯುತ್ತಿದ್ದಾಗ ನಾಯಿಗಳು ಬಂದು ಅದರಲ್ಲಿದ್ದ ರಕ್ತವನ್ನು ನೆಕ್ಕಿದವು; ಹೀಗೆ ಯೆಹೋವನು ಹೇಳಿದ ಮಾತು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 ಆ ಜನರು ಅಹಾಬನ ರಥವನ್ನು ಸಮಾರ್ಯದ ಕೊಳದ ನೀರಿನಲ್ಲಿ ತೊಳೆದರು. ರಥದಲ್ಲಿದ್ದ ರಾಜನಾದ ಅಹಾಬನ ರಕ್ತವನ್ನು ನಾಯಿಗಳು ನೆಕ್ಕಿದವು. ದೇವದಾಸಿಯರು ಆ ಕೊಳದ ನೀರನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಯೆಹೋವನು ಹೇಳಿದ್ದ ರೀತಿಯಲ್ಲಿಯೇ ಈ ಸಂಗತಿಗಳು ಸಂಭವಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 ಆ ರಥವನ್ನು ವೇಶ್ಯೆಯರು ಸ್ನಾನ ಮಾಡುವ ಸಮಾರ್ಯದ ಕೆರೆಯಲ್ಲಿ ತೊಳೆಯುತ್ತಿದ್ದಾಗ, ಯೆಹೋವ ದೇವರು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 22:38
10 ತಿಳಿವುಗಳ ಹೋಲಿಕೆ  

ಅವನಿಗೆ ನೀನು ಕೊಲೆ ಮಾಡಿ ಸ್ವತ್ತನ್ನು ಸಂಪಾದಿಸಿಕೊಂಡಿಯಲ್ಲವೋ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವವು ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನಿಗೆ ಹೇಳು” ಎಂಬುದೇ.


ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ವಾಕ್ಯಗಳೋ ಅಳಿದುಹೋಗುವುದೇ ಇಲ್ಲ.


ಅರಸನು ಸಾಯಲು ಅವನನ್ನು ಸಮಾರ್ಯಕ್ಕೆ ತಂದು ಅಲ್ಲಿ ಸಮಾಧಿ ಮಾಡಿದರು.


ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ತೀರಲಿಲ್ಲ ಮತ್ತು ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.


ಯೆಹೋವನು ಎಲೀಯನ ಮುಖಾಂತರವಾಗಿ ಮುಂತಿಳಿಸಿದಂತೆ ಅರಸನು ಸತ್ತನು. ಅವನಿಗೆ ಮಗನಿಲ್ಲದೆ ಇದ್ದುದರಿಂದ ಅವನಿಗೆ ಬದಲಾಗಿ ಅವನ ತಮ್ಮನಾದ ಯೋರಾಮನೆಂಬವನು ಯೆಹೂದ್ಯರ ಅರಸನಾದ ಯೆಹೋಷಾಫಾಟನ ಮಗ ಯೆಹೋರಾಮನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಇಸ್ರಾಯೇಲರ ಅರಸನಾದನು


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು