Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:36 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಆಗ ಪ್ರವಾದಿಯು ಅವನಿಗೆ, “ನೀನು ಯೆಹೋವನ ಮಾತನ್ನು ಕೇಳದೆ ಹೋದುದರಿಂದ ನನ್ನನ್ನು ಬಿಟ್ಟು ಹೊರಟ ಕೂಡಲೇ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು” ಎಂದನು. ಅವನು ಅವನನ್ನು ಬಿಟ್ಟು ಹೋದ ಕೂಡಲೆ ಒಂದು ಸಿಂಹವು ಬಂದು ಅವನನ್ನು ಕೊಂದು ಹಾಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಆಗ ಆ ಪ್ರವಾದಿ ಅವನಿಗೆ, “ನೀನು ಸರ್ವೇಶ್ವರನ ಮಾತನ್ನು ಕೇಳದೆಹೋದುದರಿಂದ ನನ್ನನ್ನು ಬಿಟ್ಟು ಹೊರಟಕೂಡಲೆ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವುದು,” ಎಂದನು. ಅಂತೆಯೇ ಅವನು ಇವನನ್ನು ಬಿಟ್ಟುಹೋದ ಕೂಡಲೆ, ಒಂದು ಸಿಂಹವು ಬಂದು ಅವನನ್ನು ಕೊಂದುಹಾಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಆಗ ಪ್ರವಾದಿಯು ಅವನಿಗೆ - ನೀನು ಯೆಹೋವನ ಮಾತನ್ನು ಕೇಳದೆಹೋದದರಿಂದ ನನ್ನನ್ನು ಬಿಟ್ಟು ಹೊರಟ ಕೂಡಲೆ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವದು ಅಂದನು. ಅವನು ಇವನನ್ನು ಬಿಟ್ಟು ಹೋದ ಕೂಡಲೆ ಒಂದು ಸಿಂಹವು ಬಂದು ಅವನನ್ನು ಕೊಂದುಹಾಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಆದ್ದರಿಂದ ಮೊದಲನೆಯ ಪ್ರವಾದಿಯು, “ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಈ ಸ್ಥಳವನ್ನು ಬಿಟ್ಟು ಹೊರಟಾಗ ನಿನ್ನನ್ನು ಒಂದು ಸಿಂಹವು ಕೊಂದುಹಾಕುತ್ತದೆ” ಎಂದು ಹೇಳಿದನು. ಎರಡನೆಯ ಪ್ರವಾದಿಯು ಆ ಸ್ಥಳವನ್ನು ಬಿಟ್ಟು ಹೊರಟಾಗ ಒಂದು ಸಿಂಹವು ಅವನನ್ನು ಕೊಂದುಹಾಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಆಗ ಪ್ರವಾದಿಯು ಇವನಿಗೆ, “ನೀನು ಯೆಹೋವ ದೇವರ ಮಾತನ್ನು ಕೇಳದೆ ಹೋದದ್ದರಿಂದ, ನೀನು ನನ್ನನ್ನು ಬಿಟ್ಟು ಹೋಗುವಾಗ ಸಿಂಹವು ನಿನ್ನನ್ನು ಕೊಲ್ಲುವುದು,” ಎಂದನು. ಅವನು ಪ್ರವಾದಿಯನ್ನು ಬಿಟ್ಟು ಹೋದಾಗಲೇ ಸಿಂಹವು ಅವನನ್ನು ಕಂಡು ಕೊಂದುಹಾಕಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:36
4 ತಿಳಿವುಗಳ ಹೋಲಿಕೆ  

ಅವನನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದ ಪ್ರವಾದಿಯು ಈ ಸುದ್ದಿಯನ್ನು ಕೇಳಿ ಅವರಿಗೆ, “ಆ ಶವವು ದೇವರ ಮನುಷ್ಯನದೇ ಆಗಿರಬೇಕು. ಅವನು ಯೆಹೋವನ ಆಜ್ಞೆಗೆ ಅವೀಧೆಯನಾದ್ದರಿಂದ ಯೆಹೋವನು ಅವನ ವಿಷಯದಲ್ಲಿ ತಾನು ಹೇಳಿದ ಮಾತು ನೆರವೇರುವಂತೆ ಅವನನ್ನು ಸಿಂಹದ ಬಾಯಿಗೆ ಒಪ್ಪಿಸಿದನು. ಅದು ಅವನ ಮೇಲೆ ಹಾರಿ ಅವನನ್ನು ಕೊಂದುಬಿಟ್ಟಿತು” ಎಂದು ಹೇಳಿದನು.


ಅನಂತರ ಆ ಪ್ರವಾದಿಯು ಇನ್ನೊಬ್ಬನನ್ನು ನೋಡಿ, “ನನ್ನನ್ನು ಹೊಡಿ” ಎಂದು ಅವನನ್ನು ಬೇಡಿಕೊಂಡನು. ಅವನು ಇವನನ್ನು ಗಾಯವಾಗುವಷ್ಟು ಹೊಡೆದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು