1 ಅರಸುಗಳು 20:14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಅಹಾಬನು ಅವನನ್ನು, “ಇದು ಯಾರ ಮುಖಾಂತರವಾಗಿ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರಾಗಿ ಕೆಲಸ ಮಾಡುವ ಯುವ ಅಧಿಕಾರಿಗಳ ಮುಖಾಂತರವಾಗಿ ಆಗುವುದು ಎಂದು ಯೆಹೋವನು ಅನ್ನುತ್ತಾನೆ” ಎಂದು ಉತ್ತರಕೊಟ್ಟನು. ಅಹಾಬನು ಪುನಃ ಅವನನ್ನು, “ಯುದ್ಧ ಪ್ರಾರಂಭಮಾಡತಕ್ಕವರು ಯಾರು?” ಎಂದು ಕೇಳಲು ಅವನು, “ನೀನೇ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಅಹಾಬನು, “ಇದು ಯಾರ ಮುಖಾಂತರ ಆಗುವುದು?” ಎಂದು ಕೇಳಿದ್ದಕ್ಕೆ ಅವನು, “ಪ್ರದೇಶಾಧಿಪತಿಗಳ ಸೇವಕರ ಮುಖಾಂತರ ಆಗುವುದೆಂದು ಸರ್ವೇಶ್ವರ ತಿಳಿಸುತ್ತಾರೆ,” ಎಂದು ಉತ್ತರಕೊಟ್ಟನು. ಅಹಾಬನು ಮುಂದುವರಿದು, “ಯುದ್ಧ ಪ್ರಾರಂಭಮಾಡತಕ್ಕವರಾರು?” ಎಂದು ಕೇಳಲು ಅವನು, “ನೀನೇ” ಎಂದು ಉತ್ತರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಅಹಾಬನು ಅವನನ್ನು - ಇದು ಯಾರ ಮುಖಾಂತರವಾಗಿ ಆಗುವದು ಎಂದು ಕೇಳಿದ್ದಕ್ಕೆ ಅವನು - ಪ್ರದೇಶಾಧಿಪತಿಗಳ ಸೇವಕರ ಮುಖಾಂತರವಾಗಿ ಆಗುವದೆಂದು ಯೆಹೋವನು ಅನ್ನುತ್ತಾನೆ ಎಂದು ಉತ್ತರಕೊಟ್ಟನು. ಅಹಾಬನು ತಿರಿಗಿ ಅವನನ್ನು - ಯುದ್ಧಪ್ರಾರಂಭಮಾಡತಕ್ಕವರಾರು ಎಂದು ಕೇಳಲು ಅವನು - ನೀನೇ ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಅಹಾಬನು, “ಅವರನ್ನು ಸೋಲಿಸಲು ನೀನು ಯಾರನ್ನು ಬಳಸಿಕೊಳ್ಳುವೆ?” ಎಂದನು. ಪ್ರವಾದಿಯು, “ಜಿಲ್ಲೆಗಳ ರಾಜ್ಯಪಾಲರುಗಳ ಸೇವೆಮಾಡುತ್ತಿರುವ ಯೌವನಸ್ಥರನ್ನು ಬಳಸಿಕೊಳ್ಳುತ್ತೇನೆ ಎಂದು ಯೆಹೋವನು ಹೇಳುತ್ತಾನೆ” ಎಂದು ಉತ್ತರಿಸಿದನು. ನಂತರ ರಾಜನು, “ಯುದ್ಧವನ್ನು ಆರಂಭಿಸುವವರು ಯಾರು?” ಎಂದು ಕೇಳಿದನು. “ನೀನೇ” ಎಂದು ಪ್ರವಾದಿಯು ಉತ್ತರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಅಹಾಬನು, “ಯಾರ ಕೈಯಿಂದ?” ಎಂದನು. ಅದಕ್ಕವನು, “ ‘ಪ್ರಾಂತಗಳ ಪ್ರಧಾನರ ಕಿರಿಯ ಅಧಿಕಾರಿಗಳಿಂದಲೇ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. ಆಗ ಅಹಾಬನು, “ಯುದ್ಧ ಪ್ರಾರಂಭ ಮಾಡುವವನು ಯಾರು?” ಎಂದನು. ಅದಕ್ಕೆ ಆ ಪ್ರವಾದಿಯು, “ನೀನೇ,” ಎಂದನು. ಅಧ್ಯಾಯವನ್ನು ನೋಡಿ |