Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 14:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನೀನು ಹತ್ತು ರೊಟ್ಟಿಗಳನ್ನೂ, ಒಂದಷ್ಟು ಸಿಹಿಪದಾರ್ಥವನ್ನೂ ಮತ್ತು ಒಂದು ಕುಪ್ಪೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಹುಡುಗನಿಗೆ ಏನಾಗುವುದೆಂದು ಅವನು ತಿಳಿಸುವನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನೀನು ಹತ್ತು ರೊಟ್ಟಿಗಳನ್ನೂ ಸಿಹಿಪದಾರ್ಥಗಳನ್ನೂ ಒಂದು ಕುಪ್ಪಿ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು; ಹುಡುಗನಿಗೆ ಏನಾಗುವುದೆಂದು ಅವನು ತಿಳಿಸುವನು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನೀನು ಹತ್ತು ರೊಟ್ಟಿಗಳನ್ನೂ ವಿುಠಾಯಿಯನ್ನೂ ಒಂದು ಕುಪ್ಪಿ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು; ಹುಡುಗನಿಗೆ ಏನಾಗುವದೆಂದು ಅವನು ತಿಳಿಸುವನು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪ್ರವಾದಿಗೆ ಹತ್ತು ರೊಟ್ಟಿಗಳನ್ನು, ಕೆಲವು ಸಿಹಿ ಪದಾರ್ಥಗಳನ್ನು ಮತ್ತು ಜೇನುತುಪ್ಪ ಜಾಡಿಯನ್ನು ಕೊಡು. ನಂತರ ನಮ್ಮ ಮಗನಿಗೆ ಏನಾಗುತ್ತದೆಂಬುದನ್ನು ಕೇಳು. ಪ್ರವಾದಿಯಾದ ಅಹೀಯನು ನಿನಗೆ ತಿಳಿಸುತ್ತಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ, ಭಕ್ಷ್ಯಗಳನ್ನೂ, ಒಂದು ಮಡಕೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವುದನ್ನು ನಿನಗೆ ತಿಳಿಸುವನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 14:3
11 ತಿಳಿವುಗಳ ಹೋಲಿಕೆ  

ಒಂದು ದಿನ ಬಾಳ್ ಷಾಲಿಷಾ ಊರಿನ ಒಬ್ಬ ಮನುಷ್ಯನು ಇಪ್ಪತ್ತು ಜವೆಗೋದಿಯ ರೊಟ್ಟಿಗಳನ್ನೂ, ಒಂದು ಚೀಲದ ತುಂಬಾ ಹಸೀ ತೆನೆಗಳನ್ನೂ, ಪ್ರಥಮಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೇವರ ಮನುಷ್ಯನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ, “ಇದನ್ನು ಜನರಿಗೆ ಕೊಡು ಅವರು ಊಟಮಾಡಲಿ” ಎಂದು ಹೇಳಿದನು.


ಆಗ ಅರಸನು ಅವನಿಗೆ, “ನನ್ನ ಮನೆಗೆ ಬಾ, ಸ್ವಲ್ಪ ಊಟ ಮಾಡಿ ವಿಶ್ರಾಂತಿ ಪಡೆದುಕೋ. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ” ಎಂದನು.


ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.


ಅನಂತರ, ನಾಮಾನನು ತನ್ನ ಪರಿವಾರದವರೊಡನೆ, ಹಿಂದಿರುಗಿ ದೇವರ ಮನುಷ್ಯನ ಹತ್ತಿರ ಹೋಗಿ, ಅವನ ಮುಂದೆ ನಿಂತು, “ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವುದೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು. ನೀನು ದಯವಿಟ್ಟು ಕಾಣಿಕೆಯನ್ನು ಅಂಗೀಕರಿಸಬೇಕು” ಎಂದು ಹೇಳಿದನು.


ಅರಾಮ್ಯರ ಅರಸನು ಅವನಿಗೆ, “ನೀನು ಅಲ್ಲಿಗೆ ಹೋಗಿ ಬಾ. ನಾನು ನಿನ್ನ ಕೈಯಲ್ಲಿ ಇಸ್ರಾಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ” ಎಂದನು. ನಾಮಾನನು ಹತ್ತು ತಲಾಂತು ಬೆಳ್ಳಿ, (ಮೂವತ್ತು ಸಾವಿರ) ಆರು ಸಾವಿರ ತೊಲೆ ಬಂಗಾರ, ಹತ್ತು ಜೊತೆ ಬಟ್ಟೆಗಳು ಇವುಗಳನ್ನು ತೆಗೆದುಕೊಂಡು ಸಮಾರ್ಯಕ್ಕೆ ಹೋಗಿ,


ಅಹಜ್ಯನು ಸಮಾರ್ಯದಲ್ಲಿ ತನ್ನ ಮೇಲುಪ್ಪರಿಗೆಯ ಕಿಟಿಕಿಯಿಂದ ಬಿದ್ದು ಅಸ್ವಸ್ಥನಾದಾಗ ತನ್ನ ಸೇವಕರನ್ನು ಕರೆದು ಅವರಿಗೆ, “ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಸನ್ನಿಧಿಗೆ ಹೋಗಿ ನಾನು ಈ ಅಸ್ವಸ್ಥತೆಯಿಂದ ವಾಸಿಯಾಗುವೆನೋ ಇಲ್ಲವೋ ಎಂಬುದನ್ನು ವಿಚಾರಿಸಿರಿ” ಎಂದು ಹೇಳಿಕಳುಹಿಸಿದನು.


ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು