Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 13:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇದಲ್ಲದೆ ಅವನು, “ನನ್ನ ಮಾತು ಯೆಹೋವನದು ಎಂಬುವುದಕ್ಕೆ ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಗುವುದೇ ಗುರುತಾಗಿರುವುದು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇದಲ್ಲದೆ, “ನನ್ನ ಮಾತು ಸರ್ವೇಶ್ವರನದು ಎಂಬುದಕ್ಕೆ ಈ ಪೀಠವು ಸೀಳಿ ಅದರ ಮೇಲಿನ ಬೂದಿ ಬಿದ್ದುಹೋಗುವುದೇ ಗುರುತಾಗಿರುವುದು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಇದಲ್ಲದೆ ಅವನು - ನನ್ನ ಮಾತು ಯೆಹೋವನದೆಂಬದಕ್ಕೆ ವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದು ಹೋಗುವದೇ ಗುರುತಾಗಿರುವದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇದಲ್ಲದೆ ದೇವಮನುಷ್ಯನು ಜನರಿಗೆ, “ಯೆಹೋವನು ಇದರ ಬಗ್ಗೆ ನನಗೆ ಹೇಳಿರುವ ಗುರುತೇನೆಂದರೆ, ‘ಯಜ್ಞವೇದಿಕೆಯು ಒಡೆದುಹೋಳಾಗುವುದು, ಬೂದಿಯು ನೆಲದ ಮೇಲೆ ಚೆಲ್ಲಿಹೋಗುವುದು’” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ, “ಯೆಹೋವ ದೇವರು ಇದಕ್ಕೆ ಹೇಳಿದ ಗುರುತೇನೆಂದರೆ, ಇಗೋ, ಬಲಿಪೀಠವು ಸೀಳಿಹೋಗಿ, ಅದರ ಮೇಲೆ ಇರುವ ಬೂದಿಯು ಬಿದ್ದುಹೋಗುವುದು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 13:3
16 ತಿಳಿವುಗಳ ಹೋಲಿಕೆ  

ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ;


ಆಗ ಅಲ್ಲಿದ್ದ ಯೆಹೂದ್ಯರು ಆತನಿಗೆ “ಇದನ್ನೆಲ್ಲಾ ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.


ಅವನು ಆತನಿಗೆ, “ಕರ್ತನೇ, ದಯವಿರಲಿ; ನನ್ನೊಂದಿಗೆ ಮಾತನಾಡುತ್ತಿರುವವರು ತಾವೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು.


ನಾನು ನಿಮ್ಮನ್ನು ಈ ಸ್ಥಳದಲ್ಲಿ ದಂಡಿಸುವೆನು ಎಂಬುದಕ್ಕೆ ಒಂದು ಗುರುತು ಕಾಣುವುದು; ನನ್ನ ಮಾತುಗಳು ಈಡೇರಿ ನಿಮಗೆ ಕೇಡನ್ನು ಉಂಟುಮಾಡುವೆನು ಎಂಬುದಾಗಿ ಅದರಿಂದಲೇ ನಿಮಗೆ ತಿಳಿದುಬರುವುದು.


ಹಿಜ್ಕೀಯನು, “ನಾನು ಗುಣಹೊಂದಿ ಯೆಹೋವನ ಆಲಯವನ್ನು ಸೇರುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದ್ದನು.


ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುವನೆಂಬುವುದಕ್ಕೂ, ನಾನು ಮೂರನೆಯ ದಿನ ಆತನ ಆಲಯಕ್ಕೆ ಹೋಗುವೆನೆಂಬುವುದಕ್ಕೂ, ಇರುವ ಗುರುತು ಏನು?” ಎಂದು ಕೇಳಿದನು.


ಇದೆಲ್ಲಾ ನೆರವೇರುವುದೆಂಬುದಕ್ಕೆ ನಿನ್ನ ಮಕ್ಕಳಾದ ಹೊಫ್ನಿ ಹಾಗೂ ಫೀನೆಹಾಸರು ಒಂದೇ ದಿನದಲ್ಲಿ ಸಾಯುವುದೇ ಗುರುತಾಗಿರುವುದು.


ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಹಾಕಿದಾಗ ಅದು ಸರ್ಪವಾಯಿತು.


ಅದಕ್ಕೆ ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲ ಎಂದು ಹೇಳಬಹುದು?” ಎಂದನು.


ಬೇತೇಲಿನ ಯಜ್ಞವೇದಿಯ ಬಳಿಯಲ್ಲಿ ನಿಂತಿದ್ದ ಅರಸನು ಆ ದೇವರ ಮನುಷ್ಯನು ವೇದಿಗೆ ವಿರುದ್ಧವಾಗಿ ನುಡಿದಿದ್ದನ್ನು ಕೇಳಿ, “ಕೈಚಾಚಿ ಅವನನ್ನು ಹಿಡಿಯಿರಿ” ಎಂದು ಆಜ್ಞಾಪಿಸಿದನು. ಕೂಡಲೇ ಅವನ ಕೈ ಬತ್ತಿ ಹೋಯಿತು. ಅವನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಅಗಲ್ಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು