1 ಅರಸುಗಳು 11:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ದಾವೀದನು ಪೂರ್ವಿಕರ ಬಳಿಗೆ ಸೇರಿದನೆಂದೂ ಸೇನಾಧಿಪತಿಯಾದ ಯೋವಾಬನು ಮೃತನಾದನೆಂದೂ ಐಗುಪ್ತದಲ್ಲಿದ್ದ ಹದದನು ಕೇಳಿ ಫರೋಹನನಿಗೆ, “ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ, ನನಗೆ ಅಪ್ಪಣೆ ಕೊಡು” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ದಾವೀದನು ಸತ್ತು ಪಿತೃಗಳ ಬಳಿಗೆ ಸೇರಿದನೆಂದೂ ಸೇನಾಪತಿಯಾದ ಯೋವಾಬನು ಮೃತನಾದನೆಂದೂ ಈಜಿಪ್ಟಿನಲ್ಲಿದ್ದ ಹದದನು ಕೇಳಿದನು. ಫರೋಹನಿಗೆ ಅವನು, “ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ; ಅಪ್ಪಣೆಕೊಡಿ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ದಾವೀದನು ಪಿತೃಗಳ ಬಳಿಗೆ ಸೇರಿದನೆಂದೂ ಸೇನಾಪತಿಯಾದ ಯೋವಾಬನು ಮೃತನಾದನೆಂದೂ ಐಗುಪ್ತದಲ್ಲಿದ್ದ ಹದದನು ಕೇಳಿ ಫರೋಹನಿಗೆ - ನಾನು ಸ್ವದೇಶಕ್ಕೆ ಹೋಗಬೇಕೆಂದಿರುತ್ತೇನೆ; ನನಗೆ ಅಪ್ಪಣೆಕೊಡು ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ದಾವೀದನು ಸತ್ತುಹೋದನೆಂಬುದು ಹದದನಿಗೆ ಈಜಿಪ್ಟಿನಲ್ಲಿ ತಿಳಿಯಿತು. ಸೈನ್ಯದ ಸೇನಾಪತಿಯಾದ ಯೋವಾಬನು ಸತ್ತನೆಂಬುದೂ ಅವನಿಗೆ ತಿಳಿಯಿತು. ಆದ್ದರಿಂದ ಹದದನು ಫರೋಹನಿಗೆ, “ಸ್ವದೇಶದ ನನ್ನ ಮನೆಗೆ ನನಗೆ ಹೋಗಲು ಬಿಡು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಆದರೆ ದಾವೀದನು ಮರಣ ಹೊಂದಿದನೆಂದೂ, ಸೇನಾಧಿಪತಿಯಾದ ಯೋವಾಬನು ಸತ್ತು ಹೋದನೆಂದೂ, ಹದದನು ಈಜಿಪ್ಟಿನಲ್ಲಿ ಕೇಳಿದಾಗ, ಹದದನು ಫರೋಹನಿಗೆ, “ನಾನು ನನ್ನ ದೇಶಕ್ಕೆ ಹೋಗುವಹಾಗೆ ನನ್ನನ್ನು ಕಳುಹಿಸು,” ಎಂದನು. ಅಧ್ಯಾಯವನ್ನು ನೋಡಿ |