Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 8:45 - ದೆವಾಚಿ ಖರಿ ಖಬರ್

45 ಜೆಜುನ್ “ಮಾಕಾ ಕೊನ್ ಹಾತ್ ಲಾವ್ಲೆ?” ಮನುನ್ ಇಚಾರ್‍ಲ್ಯಾನ್. ಸಗ್ಳೆ ಜಾನಾ ಮಿಯಾ ನ್ಹಯ್- ತಿಯಾ ನ್ಹಯ್, ಮಟ್ಲ್ಯಾನಿ. ತನ್ನಾ ಪೆದ್ರುನ್ “ಗುರುಜಿ, ಲೊಕಾ ತುಜ್ಯಾ ಭೊತ್ಯಾನಿ ಹಾತ್, ಅನಿ ತೆನಿ ತುಜ್ಯಾ ಆಂಗಾರ್ ಪಡುಲ್ಯಾತ್”, ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ಆಗ ಯೇಸುವು, “ನನ್ನನ್ನು ಮುಟ್ಟಿದವರಾರು?” ಎಂದು ಕೇಳಲು ಎಲ್ಲರೂ, ನಾನಲ್ಲ, ನಾನಲ್ಲ ಅನ್ನಲು ಪೇತ್ರನು, “ಗುರುವೇ, ಎಷ್ಟೋ ಜನರು ನಿನ್ನನ್ನು ಮೈಮೇಲೆ ಬೀಳುತ್ತಾ ನೂಕುತ್ತಿದ್ದಾರಲ್ಲಾ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದರು. ಯಾರೂ ಮುಟ್ಟಲಿಲ್ಲವೆಂದು ಎಲ್ಲರು ಹೇಳುತ್ತಿರಲು ಪೇತ್ರನು, “ಪ್ರಭೂ, ಇಷ್ಟೊಂದು ಜನರು ಮೇಲೆ ಮೇಲೆ ಬೀಳುತ್ತಾ ನಿಮ್ಮನ್ನು ಒತ್ತರಿಸುತ್ತಿದ್ದಾರಲ್ಲಾ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ಆಗ ಯೇಸು - ನನ್ನನ್ನು ಮುಟ್ಟಿದವರಾರು ಎಂದು ಕೇಳಿದನು. ಎಲ್ಲರು - ನಾನಲ್ಲ ನಾನಲ್ಲ ಅನ್ನಲು ಪೇತ್ರನು - ಗುರುವೇ ಎಷ್ಟೋ ಜನರು ನಿನ್ನನ್ನು ಒತ್ತೊತ್ತಿ ಮೈ ಮೇಲೆ ಬೀಳುತ್ತಿದ್ದಾರಲ್ಲಾ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು. ಜನರೆಲ್ಲರೂ ತಾವು ಮುಟ್ಟಲಿಲ್ಲವೆಂದು ಹೇಳುತ್ತಿರಲು ಪೇತ್ರನು, “ಗುರುವೇ, ಇಷ್ಟೊಂದು ಜನರು ಮೇಲೆ ಬೀಳುತ್ತಾ ನಿನ್ನನ್ನು ನೂಕುತ್ತಿದ್ದಾರಲ್ಲಾ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದರು. ಎಲ್ಲರೂ ನಿರಾಕರಿಸಿದರು, ಪೇತ್ರನು ಯೇಸುವಿಗೆ, “ಬೋಧಕರೇ, ಇಷ್ಟೊಂದು ಜನರು ನಿಮ್ಮನ್ನು ನೂಕುತ್ತಾ ನಿಮ್ಮನ್ನು ಒತ್ತುತ್ತಿದ್ದಾರಲ್ಲಾ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 8:45
5 ತಿಳಿವುಗಳ ಹೋಲಿಕೆ  

ಖರೆ ಜೆಜುನ್ ತೆಂಕಾ “ತುಮಿಚ್ ತೆಂಕಾ ಕಾಯ್ತರ್ ಉಲ್ಲೆ ಖಾವ್ಕ್ ದಿವಾ” ಮಟ್ಲ್ಯಾನ್. ತನ್ನಾ ಶಿಸಾನಿ ತೆಕಾ “ಅಮ್ಚೆಕ್ಡೆ ಖಾಲಿ ಪಾಂಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಹಾತ್, ಹ್ಯಾ ಎವ್ಡ್ಯಾ ಮೊಟ್ಯಾ ತಾಂಡ್ಯಾಕ್ ಇಕಾತ್ ಜೆವಾನ್ ಘೆವ್ನ್ ಯೆವ್ಚೆ ಪಡ್ಲೆ, ತಸೆ ಕರುವಾ ಮಟ್ಲೆ ಕಾಯ್?” ಮಟ್ಲ್ಯಾನಿ.


ತನ್ನಾ ಸಿಮಾವಾನ್ “ಗುರುಜಿ, ಸಗ್ಳಿ ರಾತ್‍ಬರ್ ಅಮಿ ಕಾಮ್ ಕರ್ಲಾಂವ್, ಖರೆ ಅಮ್ಕಾ ಎಕ್‍ಬಿ ಮಾಸೊಳಿ ಗಾವುಕ್‍ನಾ, ಖರೆ ತಿಯಾ ಸಾಂಗುಕ್ ಲಾಗ್ಲೆ ಮನುನ್ ಮಿಯಾ ಜಾಳಿ ಘಾಲ್ತಾ” ಮಟ್ಲ್ಯಾನ್.


ತಿ ಜೆಜುಚ್ಯಾ ಫಾಟಿ ಯೆಲಿ ಅನಿ ತೆನಿ ಜೆಜುಚ್ಯಾ ಆಂಗಾ ವೈಲ್ಯಾ ಕಪ್ಡ್ಯಾಚ್ಯಾ ತುದಿಚ್ಯಾ ಘೊಂಡ್ಯಾಕ್ ತೆನಿ ಹಾತ್ ಲಾವ್ಲಿನ್,ತನ್ನಾ ರಗಾತ್ ಜಾತಲೆ ಬಂದ್ ಹೊಲೆ.


ಕಶ್ಯಾಕ್ ಮಟ್ಲ್ಯಾರ್, ಎಕ್ ಎಳ್ ಯೆತಾ ತುಜೆ ದುಸ್ಮಾನ್ ತುಜ್ಯಾ ಭೊತ್ಯಾನಿ ಯೆವ್ನ್ ಅಡ್ಗೊಲ್ ಘಾಲ್ತ್ಯಾತ್, ಅನಿ ತುಜಿ ರಸ್ತೆ ಸಗ್ಳೆ ಬಂದ್ ಕರ್‍ತ್ಯಾತ್, ಅನಿ ಸಗ್ಳ್ಯಾಕ್ನಾ ತುಕಾ ಬಂದ್ ಕರುನ್ ಸೊಡ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು