ಲೂಕ 3:7 - ದೆವಾಚಿ ಖರಿ ಖಬರ್7 ತಾಂಡ್ಯಾನಿ ಲೊಕಾ ಜುವಾಂವಾಕ್ಡೆ ಯೆಲಿ, ಅನಿ ತೆನಿ ತೆಂಕಾ ಬಾಲ್ತಿಮ್ ದಿಲ್ಯಾನ್. ಜುವಾಂವಾಕ್ ತೆಂಕಾ “ತುಮಿ ಕುಸ್ಡ್ಯಾಸಾಪಾಚ್ಯಾ ಪಿಳ್ಗಿ ಸಾರ್‍ಕೆ ಹಾಸಿ! ದೆವಾನ್ ದಿತಲ್ಯಾ ಶಿಕ್ಷಾತ್ನಾ ಚುಕ್ವುನ್ ಘೆವ್ಕ್ ಹೊತಾ, ಮನುನ್ ತುಮ್ಕಾ ಕೊನ್ ಉಶಾರ್ಕಿ ದಿಲಿ?” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಯೊವಾನ್ನನ ಬಳಿಗೆ ಸ್ನಾನದೀಕ್ಷೆ ಪಡೆಯಲು ಜನರು ಗುಂಪುಗುಂಪಾಗಿ ಬರುತ್ತಿದ್ದರು. ಆತನು ಅವರಿಗೆ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆಕೊಟ್ಟವರಾರು? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಹೀಗಿರಲಾಗಿ ಅವನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವದಕ್ಕಾಗಿ ಹೊರಟುಬಂದ ಜನರ ಗುಂಪುಗಳಿಗೆ - ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೂ ಉಪದೇಶ ಮಾಡಿದವರಾರು? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಆಗ ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ, ಯೋಹಾನನು, “ಎಲೈ ಸರ್ಪಸಂತತಿಯವರೇ! ಮುಂದೆ ಬರುವ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಚ್ಚರಿಸಿದವರು ಯಾರು? ಅಧ್ಯಾಯವನ್ನು ನೋಡಿ |
ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.