Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 23:50 - ದೆವಾಚಿ ಖರಿ ಖಬರ್

50-51 ಜುದೆಯಾತ್ಲ್ಯಾ ಅರೆಮಾತಿಯಾ, ಮನ್ತಲ್ಯಾ ಗಾಂವಾತ್ಲೊ ಜುಜೆ ಮನ್ತಲೊ ಎಕ್ ಮಾನುಸ್ ಹೊತ್ತೊ. ತೊ ಎಕ್ ಬರೊ, ಅನಿ ಮರ್ಯಾದಿಚೊ ಮಾನುಸ್ ಹೊತ್ತೊ, ತೊ ದೆವಾಚೆ ರಾಜ್ ಯೆತಲಿ ವಾಟ್ ರಾಕುನ್ಗೆತ್ ಹೊತ್ತೊ. ಅನಿ ಜುದೆವಾಂಚ್ಯಾ ನ್ಯಾಯ್ ನಿರ್‍ನಯ್ ಕರ್‍ತಲ್ಯಾ ಬೈಟಕಿಚೊ ಮಾನುಸ್‌ಬಿ ಹೊತ್ತೊ. ತೆನಿ ಘೆಟಲ್ಲೊ ಹ್ಯೊ ನಿರ್‍ದಾರ್ ತೆಕಾ ಸಮಾ ದಿಸುಕ್ ನತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50-51 ಅರಿಮಥಾಯ ಎಂಬ ಯೆಹೂದ್ಯರದೊಂದು ಪಟ್ಟಣದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಸೇಫನ. ಆತನು ಹಿರೀಸಭೆಯವನು, ಉತ್ತಮನು, ಸತ್ಪುರುಷನು ಹಾಗೂ ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನೂ ಆಗಿದ್ದನಲ್ಲದೆ ಮಂತ್ರಿಯೂ ಆಗಿದ್ದನು. ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಗಳಿಗೂ ಅನುಮತಿಸಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50-51 ಅರಿಮತಾಯ ಎಂಬುದು ಜುದೇಯದ ಒಂದು ಪಟ್ಟಣ. ಜೋಸೆಫನು ಇದರ ನಿವಾಸಿ. ಇವನು ಸದ್ಗುಣಶೀಲನು, ಸತ್ಪುರುಷನು ಹಾಗೂ ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದವನು. ಯೆಹೂದ್ಯರ ನ್ಯಾಯಸಭೆಯ ಸದಸ್ಯರಲ್ಲಿ ಇವನೂ ಒಬ್ಬನು. ಆದರೂ ಅವರ ತೀರ್ಪಿಗೂ ಕೃತ್ಯಕ್ಕೂ ಇವನು ಅನುಮತಿಸಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50-51 ಅರಿಮಥಾಯವೆಂಬ ಯೆಹೂದ್ಯರದೊಂದು ಪಟ್ಟಣದ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಸೇಫನು. ಅವನು ಹಿರೀಸಭೆಯವನು, ಉತ್ತಮನು, ಸತ್ಪುರುಷನು, ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನು; ಅವನು ಹಿರೀಸಭೆಯವರ ಆಲೋಚನೆಗೂ ಕೃತ್ಯಕ್ಕೂ ಸಮ್ಮತಿ ಪಟ್ಟಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50-51 ಅರಿಮಥಾಯ ಎಂಬುದು ಯೆಹೂದ್ಯರ ಒಂದು ಊರು. ಯೋಸೇಫನು ಇದರ ನಿವಾಸಿ. ಇವನು ಒಳ್ಳೆಯ ಧಾರ್ಮಿಕ ವ್ಯಕ್ತಿಯಾಗಿದ್ದನು. ದೇವರ ರಾಜ್ಯದ ಆಗಮನವನ್ನು ಇವನು ನಿರೀಕ್ಷಿಸಿದ್ದನು. ಯೋಸೇಫನು ಯೆಹೂದ್ಯರ ಹಿರಿಸಭೆಯ ಸದಸ್ಯನಾಗಿದ್ದನು. ಆದರೆ ಬೇರೆ ಯೆಹೂದ್ಯ ನಾಯಕರು ಯೇಸುವನ್ನು ಕೊಲ್ಲಲು ತೀರ್ಮಾನಿಸಿದಾಗ ಇವನು ಅದಕ್ಕೆ ಒಪ್ಪಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು, ಇವನು ಆಲೋಚನಾ ಸಭೆಯವನೂ ಒಳ್ಳೆಯವನೂ ಮತ್ತು ನೀತಿವಂತನೂ ಆಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 23:50
8 ತಿಳಿವುಗಳ ಹೋಲಿಕೆ  

ಬಾರ್ನಾಬಾಸ್ ಬರೊ ಮಾನುಸ್ ಹೊಲ್ಲೊ, ತೊ ಪವಿತ್ರ್ ಆತ್ಮ್ಯಾನ್ ಭರಲ್ಲೊ ಅನಿ ಪುರಾ ವಿಶ್ವಾಸಾನ್ ಹೊತ್ತೊ ಅನಿ ಲೈ ಲೊಕಾಕ್ನಿ ಧನಿಯಾಕ್ಡೆ ಬಲ್ವುನ್ ಹಾನ್ಲ್ಯಾನ್.


ತ್ಯಾ ಲೊಕಾನಿ, ಕೊರ್ನೆಲ್ ಮನ್ತಲೊ ಎಕ್ ಶತಾದಿಪತಿ ಹೊತ್ತೊ, ತೊ ಧಾರ್ಮಿಕ್ ಮಾನುಸ್ ,ಅನಿ ದೆವಾಕ್ ಆರಾದನ್ ಕರ್‍ತಲೊ ಅನಿ ಜುದೆವಾಂಚಿ ಲೊಕಾ ಸಗ್ಳ್ಯಿ ತೆಕಾ ಮಾನ್‍ ದಿತ್ಯಾತ್, ತುಕಾ ಅಪ್ಲ್ಯಾ ಘರಾಕ್ ಬಲ್ವುನ್ ತಿಯಾ ಸಾಂಗ್ತಲಿ ಸಂಗ್ತಿಯಾ ಆಯ್ಕುಚೆ ಮನುನ್ ದೆವಾಚ್ಯಾ ದುತಾನ್ ಕೊರ್ನೆಲಾಕ್ ಕಳ್ವುಲ್ಯಾನ್, ಮನುನ್ ಸಾಂಗ್ಲ್ಯಾನಿ.


ಹ್ಯೊ ಕೊರ್ನೆಲ್ ದೆವಸ್ಪಾನಾಚೊ ಮಾನುಸ್ ಹೊವ್ನ್ ಹೊತ್ತೊ, ತೊ ಅನಿ ತೆಚ್ಯಾ ಘರಾತ್ಲಿ ಸಗ್ಳಿ ಲೊಕಾ ದೆವಾಕ್ ಆರಾದನ್ ಕರಿತ್, ತೊ ಬರ್‍ಯಾ ಮನಾನ್ ಗರಿಬಾಕ್ನಿ ದಾನ್ ಧರ್ಮ್ ಕರಿತ್ ಹೊತ್ತೊ, ಅನಿ ಕನ್ನಾಬಿ ದೆವಾಕ್ಡೆ ಮಾಗ್ನಿ ಕರಿತ್ ರ್‍ಹಾಯ್.


ತ್ಯಾ ಕಾಲಾತ್ ಸಿಮಾವ್ ಮನ್ತಲೊ ಎಕ್ ಮಾನುಸ್ ಜೆರುಜಲೆಮಾತ್ ಹೊತ್ತೊ.ತೊ ಎಕ್ ಬರೊ ಅನಿ ದೆವಾಚ್ಯಾ ಭಿಂಯಾನ್ ಚಲ್ತಲೊ ಮಾನುಸ್,ತೊ ಇಸ್ರಾಯೆಲಾಚ್ಯಾ ಸುಟ್ಕಾ ಹೊತಲ್ಯಾ ಎಳಾಕ್ ರಾಕುನ್ಗೆತ್ ಹೊತ್ತೊ. ಪವಿತ್ರ್ ಆತ್ಮೊ ತೆಚ್ಯಾ ವಾಂಗ್ಡಾ ಹೊತ್ತೊ.


ಪವಿತ್ರ್ ಪುಸ್ತಕಾತ್ ಲಿವಲ್ಯಾ ಸಾರ್ಕೆ ಜೆಜುಕ್ ಹೊವ್ಚೆ ಮನುನ್ ಹೊತ್ತೆ ಬುರ್ಶೆಪಾನ್ ಸಗ್ಳೆ ಜುದೆವಾಂಚ್ಯಾ ಲೊಕಾನಿಚ್ ತೆಕಾ ಕರ್‍ಲ್ಯಾನಿ ತೆಚ್ಯಾ ಮಾನಾ ತೆಕಾ ಕುರ್ಸಾ ವೈನಾ ಖಾಲ್ತಿ ಉತ್ರುನ್ ಸಮಾದಿತ್ ಥವ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು