3 ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಆಕೆ ಆ ನಿಯಮದಿಂದ ಬಿಡುಗಡೆಯಾದ್ದರಿಂದ, ಆಕೆ ಮತ್ತೊಬ್ಬ ಗಂಡನನ್ನು ಮದುವೆ ಮಾಡಿಕೊಂಡರೂ ವ್ಯಭಿಚಾರಿಣಿ ಎಂದೆನಿಸಿಕೊಳ್ಳುವುದಿಲ್ಲ.
3 ಪತಿ ಬದುಕಿರುವಾಗಲೇ ಸತಿಯು ಇನ್ನೊಬ್ಬನೊಡನೆ ಸಂಬಂಧ ಬೆಳೆಸಿದರೆ ಆಕೆ ವ್ಯಭಿಚಾರಿಣಿ ಎನಿಸಿಕೊಳ್ಳುತ್ತಾಳೆ. ಪತಿಯು ಸತ್ತುಹೋದರೆ ಆಕೆ ವಿವಾಹಬಂಧನದಿಂದ ಮುಕ್ತಳು. ಅಂಥವಳು ಇನ್ನೊಬ್ಬನನ್ನು ಮದುವೆ ಆದರೂ ವ್ಯಭಿಚಾರಿಣಿ ಎನಿಸಿಕೊಳ್ಳುವುದಿಲ್ಲ.
3 ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಅವನ ಹಂಗು ತಪ್ಪಿದ್ದರಿಂದ ಆಕೆ ಮತ್ತೊಬ್ಬ ಗಂಡನನ್ನು ಮಾಡಿಕೊಂಡರೂ ವ್ಯಭಿಚಾರಿಣಿಯಲ್ಲ.
3 ಆದರೆ ತನ್ನ ಗಂಡನು ಜೀವದಿಂದಿರುವಾಗಲೇ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುತ್ತಾಳೆಂದು ಧರ್ಮಶಾಸ್ತ್ರವು ಹೇಳುತ್ತದೆ. ಆದರೆ ಆಕೆಯ ಗಂಡನು ಸತ್ತುಹೋದರೆ ಆಕೆಯು ವಿವಾಹದ ಹಂಗಿನಿಂದ ಬಿಡುಗಡೆಯಾಗಿದ್ದಾಳೆ. ಹೀಗಿರಲಾಗಿ, ತನ್ನ ಗಂಡನು ತೀರಿಕೊಂಡ ಮೇಲೆ ಮತ್ತೊಬ್ಬನನ್ನು ಮದುವೆ ಮಾಡಿಕೊಂಡರೆ ಆಕೆಯು ವ್ಯಭಿಚಾರವೆಂಬ ಅಪರಾಧಕ್ಕೆ ಗುರಿಯಾಗುವುದಿಲ್ಲ.
3 ಹೀಗಿರುವಾಗ, ಅವಳ ಪತಿಯು ಜೀವಂತನಾಗಿರುವಾಗ ಆಕೆಯು ಇನ್ನೊಬ್ಬನನ್ನು ಮದುವೆಯಾದರೆ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವಳು. ಆದರೆ ಪತಿಯು ಸತ್ತರೆ, ಆಕೆಯು ಬೇರೊಬ್ಬನನ್ನು ಮದುವೆಯಾದರೂ ಆ ಕಾನೂನಿನಿಂದ ಅವಳು ಬಿಡುಗಡೆ ಆಗಿರಲಾಗಿ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವುದಿಲ್ಲ.