ರೋಮಾಪುರದವರಿಗೆ 4:11 - ದೆವಾಚಿ ಖರಿ ಖಬರ್11 ಮಾನಾ ತೆಚಿ ಸುನ್ನತ್ ಕರುನ್ ಹೊಲಿ, ಅನಿ ತೆಚಿ ಸುನ್ನತ್ ದೆವಾನ್ ತೆಕಾ ಸುನ್ನತ್ ಹೊವ್ಚ್ಯಾ ಅದ್ದಿಚ್ ತೆಚ್ಯಾ ವಿಶ್ವಾಸಾಕ್ ಲಾಗುನ್ ತೊ ಖರ್ಯ್ಯಾ ವಾಟೆನ್ ಚಲ್ತಲೊ ಮನುನ್ ಎಚುನ್ ಕಾಡಲ್ಲ್ಯಾಚಿ ಎಕ್ ವಳಕ್ ಹೊಲ್ಲಿ. ತೆಚೆ ಸಾಟ್ನಿ ಅಬ್ರಾಹಾಮ್ ಸುನ್ನತ್ ಕರುನ್ ಘೆಯ್ ನಸಲ್ಲೆ ರ್‍ಹಾಲ್ಯಾರ್‍ಬಿ ದೆವಾನ್ ತೆಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆಟಲ್ಲ್ಯಾ, ಅನಿ ದೆವಾಚ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾ ಲೊಕಾಂಚೊ ಆತ್ಮಿಕ್ ಬಾಬಾ ಹೊವ್ನ್ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಅನಂತರ ಸುನ್ನತಿಯನ್ನು, ಮೊದಲೇ ಅವನಿಗಿದ್ದ ನಂಬಿಕೆಯ ಗುರುತಾಗಿಯೂ, ಮುದ್ರೆಯಾಗಿಯೂ ಹೊಂದಿದನು. ಹೀಗಿರುವುದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾಗಿದಾಗ್ಯೂ ಮೂಲಪಿತೃವಾದನು; ಇದರಿಂದ ಅವರು ನೀತಿವಂತರೆಂದು ಎಣಿಸಲ್ಪಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ತಾನು ಸುನ್ನತಿಮಾಡಿಸಿಕೊಳ್ಳುವ ಮೊದಲೇ ಅಬ್ರಹಾಮನು ಇಟ್ಟ ವಿಶ್ವಾಸದಿಂದಾಗಿ ದೇವರು ಆತನನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡರು. ಅನಂತರವೇ ಆತನು ಸುನ್ನತಿಯನ್ನು ಗುರುತಾಗಿಯೂ ಮುದ್ರೆಯನ್ನಾಗಿಯೂ ಪಡೆದನು. ಹೀಗೆ, ಸುನ್ನತಿ ಮಾಡಿಸಿಕೊಳ್ಳದಿದ್ದರೂ ವಿಶ್ವಾಸಿಸುವ ಎಲ್ಲರಿಗೆ ದೇವರೊಡನೆ ಸತ್ಸಂಬಂಧ ದೊರಕುವಂತೆ ಅಬ್ರಹಾಮನು ಮೂಲಪಿತನಾದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಆಮೇಲೆ ಸುನ್ನತಿಯೆಂಬ ಸಂಸ್ಕಾರವನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾದ ನೀತಿಗೆ ಮುದ್ರೆಯಾಗಿತ್ತು. ಹೀಗಿರುವದರಿಂದ ಅವನು ನಂಬುವವರೆಲ್ಲರಿಗೂ, ಅವರು ಸುನ್ನತಿಯಿಲ್ಲದವರಾದಾಗ್ಯೂ ಮೂಲತಂದೆಯಾದನು; ಅವರೂ ನೀತಿವಂತರೆಂದು ಎಣಿಸಲ್ಪಡುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಹೌದು, ಸುನ್ನತಿಯಾಗುವ ಮೊದಲೇ ಅಬ್ರಹಾಮನಿಗಿದ್ದ ನಂಬಿಕೆಯಿಂದ ಅವನು ನೀತಿಯ ಮುದ್ರೆಯನ್ನು ಹೊಂದಿದನು. ಹೀಗಿರುವಲ್ಲಿ, ಸುನ್ನತಿಯಿಲ್ಲದೆ ನಂಬುವವರೆಲ್ಲರಿಗೂ ಅಬ್ರಹಾಮನು ತಂದೆಯಾಗಿರುತ್ತಾನೆ. ಹೀಗೆ ಅವರಿಗೆ ನೀತಿಯು ಎಣಿಕೆಯಾಗುವುದು. ಅಧ್ಯಾಯವನ್ನು ನೋಡಿ |