ರೋಮಾಪುರದವರಿಗೆ 2:12 - ದೆವಾಚಿ ಖರಿ ಖಬರ್12 ಜುದೆವ್ ನ್ಹಯ್ ಹೊತ್ತ್ಯಾಕ್ನಿ ಮೊಯ್ಜೆಚೆ ಖಾಯ್ದೆ ನಾತ್; ತೆನಿ ಪಾಪ್ ಕರ್‍ಲ್ಯಾನಿ ಅನಿ ಖಾಯ್ದ್ಯಾನಿತ್ನಾ ಚುಕ್ವುನ್ ಘೆಟ್ಲ್ಯಾನಿ. ಜುದೆವಾಕ್ನಿ ಖಾಯ್ದೆ ಹಾತ್; ತೆನಿ ಪಾಪ್ ಕರ್‍ಲ್ಯಾನಿ ಅನಿ ಖಾಯ್ದ್ಯಾ ಸರ್ಕೆ ತೆಂಚಿ ಝಡ್ತಿ ಕರುನ್ ಹೊತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಧರ್ಮಶಾಸ್ತ್ರವಿಲ್ಲದೆ ಪಾಪಮಾಡಿದವರು ಧರ್ಮಶಾಸ್ತ್ರವಿಲ್ಲದವರಾಗಿ ನಾಶಹೊಂದುವರು; ಮತ್ತು ಧರ್ಮಶಾಸ್ತ್ರಕ್ಕನುಸಾರವಾಗಿದ್ದು ಪಾಪಮಾಡಿದವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಮೋಶೆಯ ಧರ್ಮಶಾಸ್ತ್ರದ ಅರಿವಿಲ್ಲದೆ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಒಳಗಾಗದೆಯೋ ನಾಶವಾಗುತ್ತಾರೆ. ಆ ಧರ್ಮಶಾಸ್ತ್ರದ ಅರಿವಿದ್ದೂ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಗುರಿಯಾಗುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ನಿಯಮವಿಲ್ಲದವರಾಗಿ ಪಾಪಮಾಡಿದವರು ನಿಯಮವಿಲ್ಲದೆಯೇ ನಾಶಹೊಂದುವರು. ನಿಯಮಕ್ಕೆ ಅಧೀನರಾಗಿದ್ದು ಪಾಪಮಾಡಿದವರು ನಿಯಮದ ಮೂಲಕವಾಗಿ ತೀರ್ಪನ್ನು ಹೊಂದುವರು. ಅಧ್ಯಾಯವನ್ನು ನೋಡಿ |