ಯೋಹಾನ 14:26 - ದೆವಾಚಿ ಖರಿ ಖಬರ್26 ಮಾಜ್ಯಾ ನಾವಾನ್ ಬಾಬಾನ್ ಧಾಡುನ್ ದಿಲ್ಲೊ ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಮಿಯಾ ತುಮ್ಕಾ ಸಾಂಗಲ್ಲೆ ಸಗ್ಳೆ ಯಾದ್ ಕರುನ್ ದಿತಾ ಅನಿ ತುಮ್ಕಾ ಸಗ್ಳೆ ಶಿಕ್ವುತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಸಹಾಯಕ ‘ಪವಿತ್ರಾತ್ಮರು’ ಎಲ್ಲವನ್ನೂ ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವರು. ಅಧ್ಯಾಯವನ್ನು ನೋಡಿ |
ತೆಂಚೆಸಾಟ್ನಿ ನ್ಹಯ್, ತುಮ್ಚ್ಯಾಸಾಟ್ನಿ ತೆಂಕಾ ಪ್ರವಾದ್ ಕರುನ್ ಸಾಂಗ್ತಲೆ ಕಾಮ್ ದಿಲ್ಲೆ ಹಾಯ್ ಮನುನ್ ದೆವಾನ್ ಪ್ರವಾದ್ಯಾಕ್ನಿ ಕಳ್ವುನ್ ದಿಲ್ಲ್ಯಾನ್. ತೆನಿ ಸಾಂಗಟಲ್ಲ್ಯಾ ತ್ಯಾಚ್ ಸಂಗ್ತಿಯಾ ಅತ್ತಾ ಸರ್ಗಾ ವೈನಾ ಯೆಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ತಾಕ್ತಿನ್ ತುಮ್ಕಾ ಬರಿ ಖಬರ್ ಪರ್ಗಟ್ ಕರಲ್ಲೆ ತುಮ್ಕಾ ಕಳ್ವುಲ್ಯಾನಿ, ತೆ ಸಗ್ಳ್ಯೆ ದಿಸುನ್ ಯೆತಲೆ ಬಗುಕ್ ದೆವಾಚಿ ದುತಾ ಸಯ್ತ್ ರಾಕುನ್ ಹಾತ್.