ಯೂದನು 1:9 - ದೆವಾಚಿ ಖರಿ ಖಬರ್9 ಮುಖ್ಯ್ ದೆವಾಚ್ಯಾ ದುತಾ ಮಿಂಗೆಲಾನ್ ಮೊಯ್ಜೆಚ್ಯಾ ಮಡ್ಯಾಚ್ಯಾ ವಿಶಯಾತ್ ಸೈತಾನಾಚ್ಯಾ ವಾಂಗ್ಡಾ ವಾದ್ ಖೆಳ್ತಾನಾ, ತೆನಿ ತೆಕಾ ಬರೆ ಬುರ್ಶೆ ಬೊಲುನ್ ತೆಕಾ ತೆಚಿ ಮರ್ಯಾದ್ ಕಾಡುಕ್ ಧೈರೊ ಕರುಕ್ ನಾ, ತೆನಿ ತೆಕಾ,“ಧನಿ ತುಕಾ ಗದ್ಮುಂದಿತ್,” ಮಟ್ಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನಾಡದೆ, “ಕರ್ತನು ನಿನ್ನನ್ನು ಗದರಿಸಲಿ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಪ್ರಧಾನ ದೇವದೂತ ಮಿಕಾಯೇಲನೂ ಇಂಥ ದೂಷಣೆಯನ್ನು ಆಡಲಿಲ್ಲ. ಮೋಶೆಯ ಪಾರ್ಥಿವ ಶರೀರದ ವಿಷಯದಲ್ಲಿ ಸೈತಾನನೊಡನೆ ವಾಗ್ವಾದ ಮಾಡಿದಾಗಲೂ ಅಂಥ ದೂಷಣೆಯನ್ನು ಆಡಲು ಧೈರ್ಯಗೊಳ್ಳದೆ, “ಸರ್ವೇಶ್ವರ ನಿನ್ನನ್ನು ಖಂಡಿಸಲಿ,” ಎಂದಷ್ಟೇ ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆದರೆ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದಮಾಡಿದಾಗ ಅವನು ಸೈತಾನನ ಮೇಲೆ ದೂಷಣಾಭಿಪ್ರಾಯವನ್ನು ಹೇಳುವದಕ್ಕೆ ಧೈರ್ಯಗೊಳ್ಳದೆ - ಕರ್ತನು ನಿನ್ನನ್ನು ಖಂಡಿಸಲಿ ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು, ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ, ಅವನು ಸೈತಾನನನ್ನು ದೂಷಿಸುವುದಕ್ಕೆ ಧೈರ್ಯಗೊಳ್ಳದೆ, “ಕರ್ತದೇವರು ನಿನ್ನನ್ನು ಗದರಿಸಲಿ!” ಎಂದನು. ಅಧ್ಯಾಯವನ್ನು ನೋಡಿ |