ಮಾರ್ಕ 15:21 - ದೆವಾಚಿ ಖರಿ ಖಬರ್21 ತನ್ನಾ ಸಿರೆನ್ ಮನ್ತಲ್ಯಾ ಗಾಂವಾತ್ಲೊ ಸಿಮಾವ್ ಶೆತಾಕ್ನಾ ಯೆತಾನಾ ಸಯ್ನಿಕಾನಿ ತೆಕಾ ಜೆಜುಚೊ ಕುರಿಸ್ ವಾವುನ್ ಘೆವ್ನ್ ಜಾವ್ಕ್ ಒತ್ತಾಯ್ ಕರ್‍ಲ್ಯಾನಿ ಸಿಮಾವ್, ಅಲೆಕ್ಸಾಂಡರ್ ಅನಿ ರುಫಸ್ ತೆಂಚೊ ಬಾಬಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಒತ್ತಾಯಪಡಿಸಿದರು. ಅವನು ಯಾರೆಂದರೆ, ಅಲೆಕ್ಸಾಂದ್ರ ಹಾಗೂ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ ಹಾಗೂ ರೂಫ ಎಂಬವರ ತಂದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವದಕ್ಕೆ ಬಿಟ್ಟೀಹಿಡಿದರು. ಇವನು ಯಾರಂದರೆ - ಅಲೆಕ್ಸಾಂದ್ರ ರೂಫ ಎಂಬವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ21 ಅಲೆಕ್ಸಾಂದ್ರ ಮತ್ತು ರೂಫ ಎಂಬುವರ ತಂದೆಯಾದ ಕುರೇನೆದ ಸೀಮೋನನು ಗ್ರಾಮದಿಂದ ಹಾದು ಹೋಗುತ್ತಿರುವಾಗ, ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು. ಅಧ್ಯಾಯವನ್ನು ನೋಡಿ |
ಖರೆ ಥೊಡಿ ಜುದೆವಾಂಚಿ ಲೊಕಾ ಯೆವ್ನ್ ತೆಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹಿ ಲೊಕಾ ಜುದೆವಾಂಚ್ಯಾ ಸಿನಾಗೊಗಾಕ್ ಸಮಂದ್ ಪಡಲ್ಲಿ, ತೆಕಾ ಸುಟ್ಕಾ ಹೊಲ್ಲ್ಯಾಂಚೆ ಸಿನಾಗೊಗ್ ಮನುನ್ ಬಲ್ವಿತ್, ಸಿರೆನಾತ್ನಾ ಅನಿ ಅಲೆಕ್ಸಾಂಡ್ರಿಯಾತ್ನಾ ಜುದೆವಾಂಚ್ಯಾಸಾಟ್ನಿ ಹೆ ಸಿನಾಗೊಗ್ ಹೊತ್ತೆ, ಸಿಲಿಸಿಯಾ ಅನಿ ಎಶ್ಯಾತ್ನಾ ಯೆಲ್ಲಿ ಜುದೆವಾಂಚಿ ಲೊಕಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ, ತೆನಿ ಸಗ್ಳ್ಯಾನಿ ಯೆವ್ನ್ ಸ್ತೆಪನಾಚ್ಯಾ ವಿರೊದ್ ವಾದ್ ಕರ್‍ಲ್ಯಾನಿ.