ಮತ್ತಾಯ 26:24 - ದೆವಾಚಿ ಖರಿ ಖಬರ್24 ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ ಮಾನ್ಸಾಚೊ ಲೆಕ್ ಮರುಕುಚ್ ಮಾಜೆ, ಅನಿ ತೊ ಮರ್‍ತಾಚ್ ಖರೆ ಮಾನ್ಸಾಚ್ಯಾ ಲೆಕಾಕ್ ವಿಶ್ವಾಸ್ ಘಾತ್ ಕರ್‍ತಲ್ಯಾಚಿ ಗತ್ ಕಾಯ್ ಸಾಂಗು! ತೊ ಉಪ್ಜುಕುಚ್ ನಸ್ಲ್ಯಾರ್ ತ್ಯಾ ಮಾನ್ಸಾಕುಚ್ ಬರೆ ಹೊತ್ತೆ!” ಮನುನ್ ಜಬಾಬ್ ದಿಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201924 ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)24 ನರಪುತ್ರನೇನೋ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)24 ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ; ಹಾಗೆ ಆತನ ವಿಷಯವಾಗಿ ಬರೆದದೆಯಲ್ಲಾ. ಆದರೆ ಯಾವನು ಮನುಷ್ಯಕುಮಾರನನ್ನು ಹಿಡುಕೊಡುವನೋ ಅವನ ಗತಿಯನ್ನು ಏನು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್24 ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಒಪ್ಪಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ24 ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದರು. ಅಧ್ಯಾಯವನ್ನು ನೋಡಿ |
ತಸೆ ಹೊವ್ನ್, ತೆನಿ ಪಾವ್ಲುಚ್ಯಾ ವಾಂಗ್ಡಾ ಬೈಟೆಕ್ ಕರುಕ್ ಎಕ್ ದಿಸ್ ಗೊತ್ತ್ ಕರ್‍ಲ್ಯಾನಿ, ಅನಿ ತ್ಯಾ ದಿಸಿ ಜುದೆವಾಂಚಿ ಲೊಕಾ ತಾಂಡೊ ಹೊವ್ನ್ ಗೊಳಾ ಹೊವ್ನ್ ಪಾವ್ಲುಚ್ಯಾ ಘರಾತ್ ಯೆಲಿ, ಸಕ್ಕಾಳಾಕ್ನಾ ರಾತ್ ಪತರ್ಬಿ ತೆನಿ ತೆಂಕಾ, ದೆವಾಚ್ಯಾ ರಾಜಾಚ್ಯಾ ವಿಶಯಾತ್ಲಿ ಬರಿ ಖಬರ್ ಸೊಡ್ಸುನ್ ಸಾಂಗ್ಲ್ಯಾನ್, ಅನಿ ಮೊಯ್ಜೆಚೆ ಖಾಯ್ದ್ಯಾಂಚೆ ಪುಸ್ತಕ್ ಅನಿ ಪ್ರವಾದ್ಯಾಂಚಿ ಬರ್ವನ್ಗಿ ವಾಪ್ರುನ್ ಜೆಜುಚ್ಯಾ ವಿಶಯಾತ್ ತೆಂಚೊ ಮನ್ ಪರ್ತುಕ್ ಕಟ್ಪಟ್ ಕರ್‍ಲ್ಯಾನ್.