ಮತ್ತಾಯ 23:5 - ದೆವಾಚಿ ಖರಿ ಖಬರ್5 ಲೊಕಾಕ್ನಿ ದಾಕ್ವುಸಾಟ್ನಿ ಮನುನ್ ತೆನಿ ಸಗ್ಳೆ ಕರುನ್ ದಾಕ್ವುತ್ಯಾತ್. ತೆಂಚ್ಯಾ ಕಪಾಳಾ ವೈನಿ ಅನಿ ರಟ್ಟ್ಯಾಕ್ನಿ ಭಾಂದಲ್ಲ್ಯಾ ಪವಿತ್ರ್ ಪುಸ್ತಕಾತ್ಲ್ಯಾ ಗೊಸ್ಟಿಯಾ ಲಿವಲ್ಲ್ಯಾ ಪಟ್‍ಯಾ ಬಗಾ, ತ್ಯಾ ಕವ್ಡ್ಯಾ ಮೊಟ್ಯಾ-ಮೊಟ್ಯಾ ಹಾತ್ ಮನುನ್ ಉಲ್ಲೆ ತರಕ್ ದಿವ್ನ್ ಬಗಾ! ತೆಂಚ್ಯಾ ಝಗ್ಯಾಕ್ನಿ ಹೊತ್ತೆ ಘೊಂಡೆ ಬಗಾ ಕವ್ಡೆ ಲಾಂಬ್-ಲಾಂಬ್ ಹಾತ್! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಅವರು ತಮ್ಮ ಕೆಲಸಗಳನ್ನೆಲ್ಲಾ ಜನರು ನೋಡಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಿಗಳನ್ನು ಅಗಲಮಾಡುತ್ತಾರೆ. ತಮ್ಮ ವಸ್ತ್ರಗಳ ಗೊಂಡೆಗಳನ್ನು ಉದ್ದಮಾಡಿಕೊಳ್ಳುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಅವರು ತಮ್ಮ ಕೆಲಸಗಳನ್ನೆಲ್ಲಾ ಜನರಿಗೆ ಕಾಣಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕ ಪಟ್ಟಿಗಳನ್ನು ಅಗಲಮಾಡುತ್ತಾರೆ, ಗೊಂಡೆಗಳನ್ನು ಉದ್ದಮಾಡುತ್ತಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 “ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 “ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡುತ್ತಾರೆ. ಅವರು ತಮ್ಮ ಬಾಹುಗಳ ಮೇಲೆ ದೇವರ ವಾಕ್ಯವುಳ್ಳ ಡಬ್ಬಿಗಳನ್ನು ಮತ್ತು ಹಣೆಯ ಮೇಲೆ ಅಗಲ ಪಟ್ಟಿಗಳನ್ನು ಮಾಡಿ ಉಡುಪುಗಳ ಅಂಚುಗಳನ್ನು ಉದ್ದಮಾಡುತ್ತಾರೆ. ಅಧ್ಯಾಯವನ್ನು ನೋಡಿ |