ಮತ್ತಾಯ 21:16 - ದೆವಾಚಿ ಖರಿ ಖಬರ್16 ತೆಚೆಸಾಟ್ನಿ ತೆನಿ ಜೆಜುಕ್,“ತೆನಿ ಕಾಯ್ ಮನುಲ್ಯಾತ್ ತುಕಾ ಆಯ್ಕೊ ಯೆವ್ಲಾ ಕಾಯ್?” ಮನುನ್ ಇಚಾರ್‍ಲ್ಯಾನಿ. ತನ್ನಾ ಜೆಜುನ್, “ಮಿಯಾ ಕಾಯ್ ಕರುಕ್ ಹೊತಾ. ಪವಿತ್ರ್ ಪುಸ್ತಕಾತ್, ತುಮಿ ಪೊರಾಕ್ನಿ ಅನಿ ದುದ್ ಫಿತಲ್ಯಾ ಬಾಳ್‌ಶ್ಯಾಕ್ನಿ ಎಗ್ದಮ್ ಸಮಾ ರಿತಿನ್ ಹೊಗ್ಳಾಪ್ ದಿವ್ಚೆ ಮನುನ್ ಶಿಕ್ವುಲ್ಯಾಶಿ; ಮನುನ್ ವಾಚ್ವುಕ್‍ನ್ಯಾಶಿ ಕಾಯ್?” ಮನುನ್ ಜಬಾಬ್ ದಿಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 “ಮಕ್ಕಳು ಹೇಳುವುದು ನಿನಗೆ ಕೇಳಿಸುತ್ತಿದೆಯೋ?” ಎಂದು ಕೋಪಾವೇಶದಿಂದ ಯೇಸುವನ್ನು ಪ್ರಶ್ನಿಸಿದರು. “ಹೌದು, ಕೇಳಿಸುತ್ತದೆ; ‘ಬಾಲಬಾಲೆಯರ ಬಾಯಿಂದಲೂ ಮೊಲೆಗೂಸುಗಳ ನಾಲಿಗೆಯಿಂದಲೂ ನಿಮಗೆ ಸರ್ವಸ್ತುತಿ ಸಲ್ಲುವಂತೆ ಮಾಡಿದ್ದೀರಿ’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಎಂದೂ ಓದಿಲ್ಲವೆ?” ಎಂದು ಉತ್ತರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಆತನಿಗೆ - ಇವರು ಹೇಳುವದನ್ನು ಕೇಳುತ್ತೀಯಾ ಎಂದು ಹೇಳಲು ಯೇಸು - ಹೌದು, ಕೇಳುತ್ತೇನೆ, ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ? ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು. ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’ ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 “ಮಕ್ಕಳು ಹೇಳುವುದೇನೆಂದು ನಿನಗೆ ಕೇಳಿಸುತ್ತಿದೆಯೋ?” ಎಂದು ಯೇಸುವನ್ನು ಕೇಳಿದರು. ಯೇಸು, “ಹೌದು,” ಎಂದು ಉತ್ತರಿಸಿ ಅವರಿಗೆ, “ ‘ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಬಾಯಿಂದ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ,’ ಎಂಬುದನ್ನು ಓದಲಿಲ್ಲವೋ?” ಎಂದರು. ಅಧ್ಯಾಯವನ್ನು ನೋಡಿ |