ಪ್ರಕಟನೆ 14:3 - ದೆವಾಚಿ ಖರಿ ಖಬರ್3 ಸುಟ್ಕಾ ಘಾವಲ್ಯಾ ಹ್ಯಾ ಜಿಮ್ನಿರ್ ಲೊಕಾನಿ ಸೊಡುನ್ ಎಕ್‍ಲಾಕ್ ಚಾಳಿಸಾರ್ ಚಾರ್ ಹಜಾರ್ ಲೊಕಾನಿ, ಸಿವಾಸನ್, ಚಾರ್ ಝಿತ್ತಿ ಸಾವ್ಜಾ, ಅನಿ ಜಾನ್ತ್ಯಾ ಲೊಕಾಂಚ್ಯಾ ಇದ್ರಾಕ್ ಇಬೆ ರ್‍ಹಾವ್ನ್ ಅನಿ ತೆನಿ ಎವ್ಡೆಚ್ ಶಿಕುಕ್ ಹೊತಾ ತಸ್ಲಿ ಎಕ್ ನ್ಹವಿ ಗಿತ್ ಗಾವ್ಲ್ಯಾನಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರು. ಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇ. ಇವರನ್ನುಳಿದು ಬೇರೆ ಯಾರಿಂದಲೂ ಆ ಹಾಡನ್ನು ಕಲಿಯಲಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲಾದ ಆ ಒಂದು ಲಕ್ಷ ನಲವತ್ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. ಅಧ್ಯಾಯವನ್ನು ನೋಡಿ |
“ತುಕಾ ಕಾನಾ ರ್‍ಹಾಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಕಾಯ್ ಸಾಂಗುಕ್ ಲಾಗ್ಲಾ ಮನುನ್ ಆಯ್ಕ್!” “ಜೆ ಕೊನ್ ಜಿಕುನ್ ಜಯ್ ಹೊವ್ನ್ ಯೆತಾತ್ ತೆಂಕಾ ಮಿಯಾ ನಿಪ್ವುನ್ ಥವಲ್ಲ್ಯಾತ್ಲೆ ಉಲ್ಲೆ ಮನ್ನಾ ದಿತಾ, ಅನಿ ಮಿಯಾ ತೆಂಕಾ ಎಕ್ ಫಾಂಡ್ರೊ ಗುಂಡೊ ದಿತಾ ತ್ಯೆಚ್ಯಾ ವರ್ತಿ ಎಕ್ ನ್ಹವೆ ನಾಂವ್ ಲಿವಲ್ಲೆ ರ್‍ಹಾತಾ. ಜೆ ಕೊನಾಕ್ ತೆ ಗಾವ್ತಾ ತೆಂಕಾ ಸೊಡುನ್ ಕೊನಾಕ್‍ಬಿ ತೆ ಗೊತ್ತ್ ರ್‍ಹಾಯ್ನಾ”.