14 ಮೊದಲನೆಯ ಮೃಗದ ಎದುರಿನಲ್ಲಿ ಪವಾಡಗಳನ್ನೆಸಗುವ ಅನುಮತಿ ಇದ್ದುದರಿಂದ ಅದು ಭೂನಿವಾಸಿಗಳನ್ನು ಮರುಳುಗೊಳಿಸಿತು. ಖಡ್ಗದಿಂದ ಗಾಯಗೊಂಡಿದ್ದರೂ ಸಾಯದೆ ಬದುಕಿದ್ದ ಮೃಗದ ಗೌರವಾರ್ಥ ಒಂದು ವಿಗ್ರಹವನ್ನು ನಿರ್ಮಿಸಬೇಕೆಂದು ಭೂನಿವಾಸಿಗಳಿಗೆ ಅದು ವಿಧಿಸಿತು.
14 ಈ ಎರಡನೆಯ ಮೃಗವು ಅದ್ಭುತಗಳನ್ನು ಮಾಡಲು ತನಗೆ ನೀಡಿರುವ ಶಕ್ತಿಯಿಂದ ಭೂಮಿಯ ಮೇಲೆ ವಾಸಿಸುವ ಜನರನ್ನು ಮರುಳು ಗೊಳಿಸುತ್ತದೆ. ಮೊದಲನೆಯ ಮೃಗದ ಸೇವೆಯನ್ನು ಮಾಡಲು ಅದು ಈ ಅದ್ಭುತಗಳನ್ನು ಮಾಡುತ್ತದೆ. ಕತ್ತಿಯಿಂದ ಗಾಯಗೊಂಡಿದ್ದೂ ಸಾಯದೆ ಬದುಕಿದ ಮೊದಲನೆಯ ಮೃಗಕ್ಕೆ ಗೌರವ ತೋರಲು ವಿಗ್ರಹವನ್ನು ನಿರ್ಮಿಸುವಂತೆ ಅದು ಜನರಿಗೆ ಆಜ್ಞಾಪಿಸಿತು.
14 ಆ ಮೊದಲನೆಯ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಕೊಡಲಾಗಿದ್ದರಿಂದ ಭೂನಿವಾಸಿಗಳನ್ನು ಮೋಸಗೊಳಿಸುತ್ತದೆ. ಭೂಮಿಯ ಮೇಲೆ ವಾಸಿಸುವವರು, ಕತ್ತಿಯಿಂದ ಗಾಯಹೊಂದಿ, ಸಾಯದೆ ಬದುಕಿದ ಮೃಗದ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಹೇಳುತ್ತದೆ.