ಪ್ರಕಟನೆ 10:7 - ದೆವಾಚಿ ಖರಿ ಖಬರ್7 ಖರೆ ಸತ್ತ್ವೆಚ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುತಾನಾ, ದೆವ್ ಅಪ್ನಾಚ್ಯಾ ಸೆವಕಾಕ್ನಿ ಪ್ರವಾದ್ಯಾಕ್ನಿ ದಾಕ್ವುನ್ ದಿಲ್ಲ್ಯಾ ಸರ್ಕೆ ಅಪ್ನಾಚ್ಯಾ ಘುಟಾಚ್ಯಾ ಯವ್ಜನ್ಯಾ ಪುರಾ ಕರ್ತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಏಳನೆಯ ದೇವದೂತನು ಶಬ್ದಮಾಡುವ ದಿನಗಳಲ್ಲಿ ಅಂದರೆ ಅವನು ತುತ್ತೂರಿಯನ್ನು ಊದುವುದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ದೇವರ ಮರ್ಮವನ್ನು ತನ್ನ ದಾಸರಾದ ಪ್ರವಾದಿಗಳಿಗೆ ತಿಳಿಸಿದ್ದ ಪ್ರಕಾರ ನೆರವೇರುವುದು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಏಳನೆಯ ದೇವದೂತನು ತುತೂರಿಯನ್ನು ಊದುವನು. ಆಗ ದೇವರು ಇದುವರೆಗೆ ನಿಗೂಢವಾಗಿಟ್ಟಿದ್ದ ತಮ್ಮ ಯೋಜನೆಯನ್ನು ತಮ್ಮ ದಾಸರಾದ ಪ್ರವಾದಿಗಳಿಗೆ ಮುಂತಿಳಿಸಿದ್ದ ಪ್ರಕಾರ ಈಡೇರಿಸುವರು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ಆಣೆಯಿಟ್ಟು - ಇನ್ನು ಸಾವಕಾಶವಿರುವದಿಲ್ಲ; ಏಳನೆಯ ದೇವದೂತನು ಶಬ್ದ ಮಾಡುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ಸಂಕಲ್ಪವನ್ನು ತನ್ನ ದಾಸರಾದ ಪ್ರವಾದಿಗಳಿಗೆ ಶುಭವರ್ತಮಾನವಾಗಿ ತಿಳಿಸಿದ್ದ ಪ್ರಕಾರ ನೆರವೇರಿಸುವನು ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯು ನೆರವೇರುವುದು. ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ತೆಯೇ ಈ ಯೋಜನೆ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಆದರೆ ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಬೇಕೆಂದಿರುವ ದಿನಗಳಲ್ಲಿ ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ಪ್ರಕಟಿಸಿದಂತೆಯೇ, ದೇವರ ರಹಸ್ಯವು ನೆರವೇರುವುದು.” ಅಧ್ಯಾಯವನ್ನು ನೋಡಿ |
ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕ್ ಘುಟಾನ್ ಹೊತ್ತೆ ಖರೆ ಹಾಯ್ ತೆ ತುಮ್ಕಾ ಗೊತ್ತ್ ರ್‍ಹಾವ್ಕ್ ಪಾಜೆ ಮನ್ತಲಿ ಎಕ್ ಮಾಜಿ ಆಶಾ, ಅನಿ ಹೆ ತುಮ್ಕಾ ತುಮಿ ಕವ್ಡೆ ಶಾನೆ ಹಾಸಿ ಮನುನ್ ಚಿಂತಲ್ಯಾತ್ನಾ ಧುರ್ ಥವ್ತಾ. ತೆ ಕಾಯ್ ಮಟ್ಲ್ಯಾರ್ , ಇಸ್ರಾಯೆಲಾಚ್ಯಾ ಲೊಕಾಂಚೆ ಮಂಡ್‍ಪಾನ್ ತಸೆಚ್ ರ್‍ಹಾಯ್ನಾ, ಜುದೆವ್ ನ್ಹಯ್ ಹೊತ್ತಿ ಸಗ್ಳಿ ಲೊಕಾ ದೆವಾಕ್ಡೆ ಯೆಯ್ ಪತರ್ ತೆ ರ್‍ಹಾತಾ ಮಾನಾ ಸರುನ್ ಜಾತಾ.