ಪ್ರಕಟನೆ 1:7 - ದೆವಾಚಿ ಖರಿ ಖಬರ್7 “ಬಗಾ, ತೊ ಮೊಡಾಂಚ್ಯಾ ವರ್ತಿ ಯೆವ್‍ಲಾಲಾ! ಹರಿಎಕ್ಲೊ ತೆಕಾ ಬಗ್ತಾ, ತೆಕಾ ಭೊಚಲ್ಲೊ ಸೈತ್ ತೆಕಾ ಬಗ್ತಾ” ಹ್ಯಾ ಜಗಾತ್ನಿ ಸಗ್ಳಿ ಲೊಕಾ ತೆಕಾ ಲಾಗುನ್ ಮರಗ್ತ್ಯಾತ್, ಹೆ ಖರೆಚ್ ಖರೆ! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ನೋಡಿರಿ, ಆತನು ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಇಗೋ ನೋಡು, ಮೇಘಾರೂಢನಾಗಿ ಬರುತಿಹನು ಪ್ರತಿಯೊಂದು ಕಣ್ಣೂ ಕಾಣುವುದು ಆತನನು, ಆತನನ್ನು ಇರಿದವರೂ ವೀಕ್ಷಿಸುವರು, ಗೋಳಾಡುವರಾತನನ್ನು ಕಂಡು ಲೋಕದ ಜನರೆಲ್ಲರು. ಹೌದು, ಅದರಂತೆಯೇ ಆಗುವುದು, ಆಮೆನ್. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಇಗೋ ಮೇಘಗಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು; ಭೂವಿುಯಲ್ಲಿರುವ ಎಲ್ಲಾ ಕುಲದವರು ಆತನನ್ನು ನೋಡಿ ಎದೆಬಡುಕೊಳ್ಳುವರು. ಹೌದು, ಹಾಗೆಯೇ ಆಗುವದು. ಆಮೆನ್. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 “ಇಗೋ, ಯೇಸು ಮೇಘಗಳೊಂದಿಗೆ ಬರುತ್ತಾರೆ,” ಮತ್ತು “ಎಲ್ಲರ ಕಣ್ಣುಗಳು ಅವರನ್ನು ಕಾಣುವವು, ಅವರನ್ನು ಇರಿದವರು ಸಹ ಕಾಣುವರು.” ಭೂಲೋಕದಲ್ಲಿರುವ ಎಲ್ಲಾ ಜನರು, “ಅವರ ದೆಸೆಯಿಂದ ಗೋಳಾಡುವರು.” ಹೌದು, ಹಾಗೆಯೇ ಆಗುವುದು! ಆಮೆನ್. ಅಧ್ಯಾಯವನ್ನು ನೋಡಿ |