ಪ್ರಕಟನೆ 1:11 - ದೆವಾಚಿ ಖರಿ ಖಬರ್11 ತೆನಿ, “ತಿಯಾ ಕಾಯ್ ಬಗುಲೆ ತೆ ಸಗ್ಳೆ ಎಕ್ ಪುಸ್ತಕಾತ್ ಲಿವ್ನ್ ಘೆ, ಅನಿ ಹ್ಯಾ ಸಾತ್ ಶಾರಾನಿತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ತೆ ಧಾಡುನ್ ದಿ.” ಮಟ್ಲ್ಯಾನ್. ತಿ ಶಾರಾ ಹಿ - ಎಫೆಜ್, ಸ್ಮಿರ್‍ನಾ, ಪೆರ್‍ಗಾಮನ್, ಥೈಟಿರಾ, ಸಾರ್ದಿಸ್, ಫಿಲಾದಾಲ್ಫಿಯಾ, ಅನಿ ಲವೊದಿಸಿಯಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಅದು, “ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು” ಎಂದು ನುಡಿಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಅದು ಹೀಗೆಂದು ನುಡಿಯಿತು: “ನೀನು ಕಾಣುತ್ತಿರುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಪಟ್ಟಣಗಳಲ್ಲಿರುವ ಏಳು ಸಭೆಗಳಿಗೆ ಕಳುಹಿಸು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಅದು - ನೀನು ನೋಡುವದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ ಎಂಬೀ ಏಳು ಪಟ್ಟಣಗಳ ಸಭೆಗಳಿಗೆ ಕಳುಹಿಸಬೇಕೆಂದು ನುಡಿಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಅದು, “ಕಾಣುತ್ತಿರುವುದನ್ನು ಸುರುಳಿಯಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸಬೇಕು,” ಎಂದು ನುಡಿಯಿತು. ಅಧ್ಯಾಯವನ್ನು ನೋಡಿ |
ಮಾನಾ ಸರ್‍ಗಾ ವೈನಾ ಎಕ್ ಅವಾಜ್,“ ಹೆ ಲಿವ್ ಹಿತ್ನಾ ಫಿಡೆ ಧನಿಯಾಚ್ಯಾ ಕಾಮಾತ್ ರಾವ್ನ್ ಮರಲ್ಲೆ ಕವ್ಡೆ ಸುಖಿ!” ಮನ್ತಲೆ ಮಿಯಾ ಆಯಿಕ್ಲೊ, ತನ್ನಾ ಪವಿತ್ರ್ ಆತ್ಮ್ಯಾನ್,“ಹೊಯ್ ಖರೆಚ್ ತೆ! ತೆನಿ ತೆಂಚ್ಯಾ ಮೊಟ್ಯಾ ರಾಬ್ನುಕಿತ್ನಾ ಆರಾಮ್ ಘೆವ್ನ್ ಖುಶಿ ಕರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆಂಚಿ ಬರಿ ಕಾಮಾ ತೆಂಚ್ಯಾ ಬರ್ಯಾ ಕಾಮಾಚೆ ಪ್ರತಿಫಳ್ ತೆಚ್ಯಾ ವಾಂಗ್ಡಾಚ್ ಜಾತಾ”. ಮಟ್ಲ್ಯಾನ್.