ಗಲಾತ್ಯದವರಿಗೆ 5:11 - ದೆವಾಚಿ ಖರಿ ಖಬರ್11 ಖರೆ ಭಾವಾನು ಅನಿ ಭೆನಿಯಾನು, ಮಿಯಾ ಅಜುನ್‍ಬಿ ಸುನ್ನತಿಚ್ಯಾ ವಿಶಯಾತ್ ಪರ್ಗಟ್ ಕರ್‍ತಾ ಹೊಲ್ಯಾರ್; ಮಿಯಾ ಅಜುನ್‍ಬಿ ತರಾಸ್ ಸೊಸುಕ್ ಪಾಜೆ? ತೆ ಖರೆ ಹೊಯ್ ಹೊಲ್ಯಾರ್, ಮಿಯಾ ಕ್ರಿಸ್ತಾಚ್ಯಾ ಕುರ್ಸಾಚ್ಯಾ ವಿಶಯಾತ್ ಪರ್ಗಟ್ ಕರ್‍ತಲೆ ಕಸ್ಲ್ಯಾಬಿ ತರಾಸಾಕ್ ಕಾರನ್ ಹೊಯ್ನಾ ಮನುನ್ ಹೊಲೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಸಹೋದರರೇ, ನಾನಾದರೋ ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ನನಗೆ ಹಿಂಸೆಯಾಗುವುದಾದರೂ ಯಾಕೆ? ಹಾಗಿದ್ದ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾಗುವ ತೊಂದರೆಗಳು ನೀಗಿ ಹೋಯಿತಲ್ಲಾ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಸಹೋದರರೇ, ಸುನ್ನತಿಮಾಡಿಸಿಕೊಳ್ಳುವುದು ಅವಶ್ಯಕವೆಂದು ನಾನು ಇನ್ನೂ ಬೋಧಿಸುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರಲ್ಲವೇ? ಹಾಗೆ ಬೋಧಿಸುತ್ತಿರುವುದಾದರೆ ನಾನೇಕೆ ಹೀಗೆ ಹಿಂಸೆಬಾಧೆಗಳನ್ನು ಅನುಭವಿಸಬೇಕಾಗುತ್ತಿತ್ತು? ನಾನು ಹಾಗೇನಾದರೂ ಬೋಧಿಸಿದ್ದರೆ, ಶಿಲುಬೆಯ ಸಂದೇಶದಿಂದ ಯಾವ ಅಡ್ಡಿ ಆತಂಕವೂ ಉಂಟಾಗುತ್ತಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ನಾನಾದರೆ ಸಹೋದರರೇ, ಸುನ್ನತಿಯಾಗಬೇಕೆಂದು ಇನ್ನೂ ಸಾರುವವನಾಗಿದ್ದರೆ ಇನ್ನು ನನಗೆ ಹಿಂಸೆಯಾಗುವದು ಯಾಕೆ? ಆ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾದ ಆಕ್ಷೇಪವು ಹೋಯಿತಲ್ಲಾ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ನನ್ನ ಸಹೋದರ ಸಹೋದರಿಯರೇ, ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನು ಬೋಧಿಸುವುದಿಲ್ಲ. ಸುನ್ನತಿಯ ಅಗತ್ಯತೆಯನ್ನು ಕುರಿತು ಉಪದೇಶಿಸುವವನಾಗಿದ್ದರೆ, ನಾನಿನ್ನೂ ಹಿಂಸೆಗೆ ಒಳಗಾಗಿರುವುದೇಕೆ? ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನಿನ್ನೂ ಉಪದೇಶಿಸುವುದಾಗಿದ್ದರೆ, ಶಿಲುಬೆಯ ವಿಷಯವಾದ ನನ್ನ ಬೋಧನೆಗೆ ಅಡ್ಡಿಯಾಗುವುದೇ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಆದರೆ ಪ್ರಿಯರೇ, ನಾನು ಸುನ್ನತಿಯಾಗಬೇಕೆಂದು ಇನ್ನೂ ಬೋಧಿಸುವವನಾಗಿದ್ದರೆ, ಈಗಲೂ ನನಗೆ ಹಿಂಸೆಯಾಗುತ್ತಿರುವುದು ಏಕೆ? ಹಾಗಾದರೆ ಶಿಲುಬೆಯ ಸಂದೇಶ ಸಾರುವುದರಿಂದ ಯಾವ ಆತಂಕವೂ ಉಂಟಾಗುತ್ತಿರಲಿಲ್ಲವಲ್ಲಾ? ಅಧ್ಯಾಯವನ್ನು ನೋಡಿ |
“ಜುದೆವಾಂಚ್ಯಾ ಲೊಕಾನು, ಮಾಕಾ ಮಜ್ಜತ್ ಕರಾ! ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಅಮ್ಚ್ಯಾ ಲೊಕಾಕ್ನಿ, ಅನಿ ಹ್ಯಾ ಗುಡಿಕ್ ವಿರೊದ್ ಹೊವ್ನ್ ಸಗ್ಳ್ಯಾ ಜಾಗ್ಯಾರ್ನಿ ಲೊಕಾಕ್ನಿ ಶಿಕಾಪಾ ಕರಿತ್ ಹೊತ್ತೊ ಹ್ಯೊಚ್, ಅತ್ತಾ ಹೆನಿ ಉಲ್ಲಿ ಲೊಕಾ ಗ್ರಿಕಾಕ್ನಿ ದೆವಾಚ್ಯಾ ಗುಡಿಕ್ ಬಲ್ವುನ್ ಹಾನ್ಲಾ! ಹ್ಯೊ ಪವಿತ್ರ್ ಜಾಗೊ ಹೆನಿ ಅಶುದ್ದ್ ಕರ್‍ಲಾ!” ಮನುನ್ ಬೊಬ್ ಮಾರುನ್ ಗದ್ದಲ್ ಉಟ್ವುಲ್ಯಾನಿ.