ಗಲಾತ್ಯದವರಿಗೆ 3:11 - ದೆವಾಚಿ ಖರಿ ಖಬರ್11 ಖಾಯ್ದ್ಯಾಂಚ್ಯಾ ವೈನಾ ಕೊನ್‍ಬಿ ನಿತಿವಂತ್ ಹೊಯ್ನಾ ಮನ್ತಲೆ ಕಳುನ್ ಯೆಲೆ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ದೆವಾಚ್ಯಾ ವಾಂಗ್ಡಾ ನಿತಿವಂತ್ ಮನುನ್ ಥವಲ್ಲೊ ಮಾನುಸ್, ಫಕತ್ ವಿಶ್ವಾಸಾ ವೈನಾ ಯೆವ್ಡೆಚ್ ಝಿತ್ತೊ ರ್‍ಹಾತಾ”. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಇದಲ್ಲದೆ ಧರ್ಮಶಾಸ್ತ್ರದಿಂದ ಯಾರೂ ದೇವರ ಸನ್ನಿಧಿಯಲ್ಲಿ ನೀತಿವಂತರಾಗಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿದೆ, ಏಕೆಂದರೆ “ನೀತಿವಂತನು ನಂಬಿಕೆಯಿಂದಲೇ ಬದುಕುವನು” ಎಂದು ಪ್ರಕಟವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಇದಲ್ಲದೆ, ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು ಎಂಬುದು ಸಹ ಸ್ಪಷ್ಟವಾಗಿದೆ. ಏಕೆಂದರೆ, “ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಇದಲ್ಲದೆ ಕರ್ಮಮಾರ್ಗದಿಂದ ಯಾವನೂ ದೇವರ ಸನ್ನಿಧಿಯಲ್ಲಿ ನೀತಿವಂತನಾಗುವದಿಲ್ಲವೆಂಬದು ಸ್ಪಷ್ಟವಾಗಿದೆ. ಯಾಕಂದರೆ ನೀತಿವಂತನು ನಂಬಿಕೆಯಿಂದಲೇ ಬದುಕುವನೆಂದು ಬರೆದದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಆದ್ದರಿಂದ ಧರ್ಮಶಾಸ್ತ್ರದ ಮೂಲಕ ಯಾವನೂ ನೀತಿವಂತನಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಪವಿತ್ರ ಗ್ರಂಥವು ಹೇಳುವಂತೆ, “ನಂಬಿಕೆಯ ಮೂಲಕ ನೀತಿವಂತನಾದವನು ಸದಾಕಾಲ ಜೀವಿಸುವನು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಇದಲ್ಲದೆ ನಿಯಮದಿಂದ ದೇವರ ಮುಂದೆ ಯಾರೂ ನೀತಿವಂತರೆಂಬ ನಿರ್ಣಯವನ್ನು ಹೊಂದುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಏಕೆಂದರೆ, “ನೀತಿವಂತನು ನಂಬಿಕೆಯಿಂದಲೇ ಬದುಕುವನು.” ಅಧ್ಯಾಯವನ್ನು ನೋಡಿ |
ಹೊಲ್ಯಾರ್ಬಿ ಖಾಯ್ದೆ ಪಾಳುನ್ ನ್ಹಯ್, ಜೆಜು ಕ್ರಿಸ್ತಾಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಮಾನುಸ್ ನಿತಿವಂತ್ ಹೊತಾ, ಮನುನ್ ಅಮ್ಕಾ ಗೊತ್ತ್ ಹಾಯ್, ತಸೆ ಮನುನ್ ಖಾಯ್ದೆ ನ್ಹಯ್ ಕ್ರಿಸ್ತಾತ್ ವಿಶ್ವಾಸ್ ದಿತಾ ತೆ ನಿತಿವಂತ್ಪಾನ್ ಅಮ್ಚೆ ಕರುನ್ ಘೆವ್‌ಸಾಟ್ನಿ ಕ್ರಿಸ್ತ್ ಜೆಜು ವರ್‍ತಿ ಅಮಿ ವಿಶ್ವಾಸ್ ಕರ್ತಾಂವ್, ಕಶ್ಯಾಕ್ ಮಟ್ಲ್ಯಾರ್ ಖಾಯ್ದೆ ಪಾಳುನ್ ಖಲ್ಯಾಬಿ ಮಾನ್ಸಾಕ್ ನಿತಿವಂತ್ಪಾನ್ ಜೊಡುನ್ ಘೆವ್ಕ್ ಹೊಯ್ನಾ.