ಕೊಲೊಸ್ಸೆಯವರಿಗೆ 4:3 - ದೆವಾಚಿ ಖರಿ ಖಬರ್3 ತುಮಿ ಅಮ್ಚ್ಯಾಸಾಟ್ನಿಬಿ ಮಾಗ್ನಿ ಕರಾ. ಲೊಕಾಕ್ನಿ ಸಗ್ಳಿ ದೆವಾಚಿ ಬರಿ ಖಬರ್ ಸಾಂಗುಕ್; ಬರೊ ಅವಕಾಸ್ ತೊ ತುಮ್ಕಾ ದಿ ಸಾರ್ಕೆ ಮಾಗ್ನಿ ಕರಾ, ದೆವಾನ್ ಕ್ರಿಸ್ತಾಚ್ಯಾ ವಿಶಯಾತ್ ಅಮ್ಕಾ ಕಳ್ವಲ್ಲೆ ಘುಟ್ಟ್ ಅಮಿ ಶಿಕ್ವುಕ್ ಹೊಯ್ ಸಾರ್ಕೆ ಮಾಗ್ನಿ ಕರಾ. ಮಿಯಾ ಹೆ ಖರೆ ಪರ್ಗಟ್ ಕರಲ್ಲ್ಯಾಸಾಟ್ನಿಚ್ ಅತ್ತಾ ಬಂಧಿಖಾನ್ಯಾತ್ ಹಾಂವ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಕ್ರಿಸ್ತನ ಮರ್ಮವನ್ನು ಅಂದರೆ ಸುರ್ವಾತೆಯನ್ನು ನಾವು ಸಾರುವುದಕ್ಕೆ ದೇವರು ನಮಗೆ ಬಾಗಿಲನ್ನು ತೆರೆದು ಕೊಡುವುದಕ್ಕಾಗಿ ನಮಗೋಸ್ಕರವಾಗಿ ಪ್ರಾರ್ಥಿಸಿರಿ. ಈ ಸುರ್ವಾತೆಯ ನಿಮಿತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3-4 ಕ್ರಿಸ್ತಯೇಸುವಿನ ರಹಸ್ಯವನ್ನು ಪ್ರಚುರಪಡಿಸಲು ನಮಗೆ ಅವಕಾಶ ದೊರಕುವಂತೆ ಪ್ರಾರ್ಥಿಸಿರಿ. ಈ ಶುಭಸಂದೇಶದ ನಿಮಿತ್ತವೇ ನಾನು ಸೆರೆಯಲ್ಲಿ ಇದ್ದೇನೆಂಬುದು ನಿಮಗೆ ತಿಳಿದಿದೆ. ನಾನು ಶುಭಸಂದೇಶವನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ಸಾರುವಂತೆ ಪ್ರಾರ್ಥಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3-4 ಇದಲ್ಲದೆ ನಮಗೋಸ್ಕರವೂ ಪ್ರಾರ್ಥನೆ ಮಾಡಿರಿ. ಕ್ರಿಸ್ತನ ವಿಷಯದಲ್ಲಿ ದೇವರು ತಿಳಿಯಪಡಿಸಿದ ಸತ್ಯಾರ್ಥವನ್ನು ಪ್ರಸಂಗಿಸುವದಕ್ಕೆ ಆತನು ಅನುಕೂಲವಾದ ಸಂದರ್ಭವನ್ನು ನಮಗೆ ದಯಪಾಲಿಸಿ ನಾನು ಅದನ್ನು ಹೇಳಬೇಕಾದ ರೀತಿಯಲ್ಲಿ ತಿಳಿಸುವಂತೆ ಅನುಗ್ರಹಮಾಡಬೇಕೆಂದು ಬೇಡಿಕೊಳ್ಳಿರಿ; ಆ ಸತ್ಯಾರ್ಥದ ನಿವಿುತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ. ಅಧ್ಯಾಯವನ್ನು ನೋಡಿ |