ಕೊಲೊಸ್ಸೆಯವರಿಗೆ 2:20 - ದೆವಾಚಿ ಖರಿ ಖಬರ್20 ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ಮರುನ್, ಹ್ಯಾ ಜಗಾಚ್ಯಾ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾತ್ನಾ ಸುಟ್ಕಾ ಹೊಲ್ಯಾಸಿ. ಅಶೆ ರ್‍ಹಾಲ್ಯಾರ್‍ಬಿ, ತುಮಿ ಹ್ಯಾ ಜಗಾಕ್ ಸಮಂದ್ ಪಡಲ್ಯಾಂಚ್ಯಾ ಸಾರ್ಕೆ ಚಲ್ತ್ಯಾಸಿ? ಕಶ್ಯಾಕ್ ತುಮಿ ಹ್ಯಾ ನೆಮಾಚ್ಯಾ ಸಾರ್ಕೆ ಚಲ್ತ್ಯಾಸಿ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಪ್ರಾಪಂಚಿಕವಾದ ಪ್ರಥಮಬೋಧನೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದರೆ, ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯಕಲ್ಪಿತ ಆಜ್ಞೆಗಳನ್ನು ಮತ್ತು ಉಪದೇಶಗಳನ್ನು ಅನುಸರಿಸಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ನೀವು ಕ್ರಿಸ್ತಯೇಸುವಿನೊಡನೆ ಮೃತರಾಗಿರುವ ಕಾರಣ, ಪ್ರಾಕೃತ ಶಕ್ತಿಗಳ ಬಂಧನದಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿರುವಲ್ಲಿ, ಪ್ರಾಪಂಚಿಕ ವಿಧಿನಿಯಮಗಳಿಗೆ ಒಳಪಟ್ಟು ಬಾಳುತ್ತಿರುವುದೇಕೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಪ್ರಾಪಂಚಿಕ ಬಾಲಬೋಧೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದ ಮೇಲೆ ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯ ಕಲ್ಪಿತ ಆಜ್ಞೆಗಳನ್ನೂ ಉಪದೇಶಗಳನ್ನೂ ಅನುಸರಿಸಿ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಪ್ರಾಪಂಚಿಕ ಬಾಲಬೋಧನೆಗಳಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದೀರಿ. ಹಾಗಾದರೆ ನೀವು ಇನ್ನೂ ಪ್ರಾಪಂಚಿಕ ನಿಯಮಗಳಿಗೆ ಅಧೀನರಾಗಿರುವುದೇಕೆ? ಅಧ್ಯಾಯವನ್ನು ನೋಡಿ |