ಎಫೆಸದವರಿಗೆ 1:19 - ದೆವಾಚಿ ಖರಿ ಖಬರ್19 ಅನಿ ವಿಶ್ವಾಸ್ ಕರ್ತಲ್ಯಾ ಅಮ್ಚ್ಯಾ ಮದ್ದಿ ಕಾಮ್ ಕರ್ತಲೊ ತೆಚೊ ಬಳ್ ಕೆವ್ಡೊ ಮೊಟೊ ಹಾಯ್ ಹ್ಯೊ ಬಳ್ ಅಮ್ಚ್ಯಾ ಮದ್ದಿ ತ್ಯಾಚ್ ಲೈ ಮೊಟ್ಯಾ ಬಳಾಚ್ಯಾ ವೈನಾ ದಿಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದದ್ದೆಂಬದನ್ನೂ ನೀವು ತಿಳುಕೊಳ್ಳುವಂತೆ ಅನುಗ್ರಹಿಸಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ನಂಬಿಕೆಯಿಡುವಂಥ ನಮಗೆ ದೇವರ ಶಕ್ತಿಯು ಎಷ್ಟು ಮಹತ್ವವುಳ್ಳದ್ದಾಗಿದೆ ಎಂಬುದನ್ನೂ ಆಗ ನೀವು ತಿಳಿದುಕೊಳ್ಳುವಿರಿ. ಕ್ರಿಸ್ತನನ್ನು ಮರಣದಿಂದ ಜೀವಂತನಾಗಿ ಎಬ್ಬಿಸಲು ದೇವರು ಉಪಯೋಗಿಸಿದ ಮಹಾಶಕ್ತಿ ಅದೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಮಾತ್ರವಲ್ಲದೆ ನಂಬುವವರಾದ ನಮಗಾಗಿರುವ ಹೋಲಿಸಲಾಗದ ದೇವರ ಮಹಾಶಕ್ತಿಯನ್ನೂ ನೀವು ತಿಳಿಯುವಂತೆ ಪ್ರಾರ್ಥನೆ ಮಾಡುವವನಾಗಿದ್ದೇನೆ. ಅಧ್ಯಾಯವನ್ನು ನೋಡಿ |
ತೆಚೆಸಾಟ್ನಿ, ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ಮಾಗ್ನಿ ಕರುನ್ಗೆತುಚ್ ರ್‍ಹಾತಾಂವ್. ಖಚ್ಚ್ಯಾ ಬರ್‍ಯಾ ವಾಟೆನ್ ತುಮಿ ಚಲುಚೆ ಮನುನ್ ದೆವಾನ್ ತುಮ್ಕಾ ಬಲ್ವುಲ್ಯಾನಾಯ್ ತಸೆ ತುಮಿ ಜಿವನ್ ಕರುಕ್ ಹೊಂವ್ದಿ ಮನುನ್ ಅಮಿ ಮಾಗ್ತಾಂವ್. ಅಪ್ನಾಚ್ಯಾ ತಾಕ್ತಿನ್ ತೊ ತುಮ್ಚಿ ಸಗ್ಳೆ ಬರ್ಯಾಪಾನಾಚಿ ಉದ್ದೆಸಾ ಪುರಾ ಕರುಂದಿತ್, ಅನಿ ತುಮ್ಚೆ ವಿಶ್ವಾಸಾಚೆ ಕಾಮ್ ಪುರಾ ಕರುಂದಿತ್ ಮನುನ್ ಮಾಗ್ತಾಂವ್.