Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 9:6 - ದೆವಾಚಿ ಖರಿ ಖಬರ್

6 ಅಶೆ ಸಗ್ಳೆ ಬಿಡಾರಾತ್ ತಯಾರ್ ಕರುನ್ ಥವಲ್ಲೆ ರ್‍ಹಾಯ್, ಅನಿ ಯಾಜಕ್ ಅಪ್ನಾಚಿ ಸದ್ದಾಚಿ ಸೆವಾ ಕರುಕ್ ಬಿರಾಡಾತ್ಲ್ಯಾ ಭಾಯ್ಲ್ಯಾ ಖೊಲಿತ್ ಜಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಹೀಗೆ ಇದೆಲ್ಲಾ ವ್ಯವಸ್ಥಿತವಾಗಿರಲು, ಯಾಜಕರು ಮೊದಲನೆಯ ಭಾಗವಾದ ಪವಿತ್ರಸ್ಥಳವನ್ನು ಮಾತ್ರ ಪ್ರವೇಶಿಸಿ, ಅಲ್ಲಿ ದೇವಾರಾಧನೆಯ ವಿಧಿಗಳನ್ನು ನಿರಂತರವಾಗಿ ನೆರವೇರಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಇವುಗಳು ಹೀಗೆ ಸಿದ್ಧಮಾಡಲ್ಪಟ್ಟ ಮೇಲೆ ಯಾಜಕರು ಯಾವಾಗಲೂ ಗುಡಾರದ ಮುಂದಣ ಭಾಗದೊಳಗೆ ಹೋಗಿ ದೇವಾರಾಧನೆಯನ್ನು ನಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಾನು ನಿಮಗೆ ವಿವರಿಸಿದಂತೆಯೇ ಗುಡಾರದಲ್ಲಿ ಎಲ್ಲವನ್ನೂ ಸಿದ್ಧಮಾಡಲಾಗಿತ್ತು. ಯಾಜಕರು ಪ್ರತಿದಿನವೂ ತಮ್ಮ ಆರಾಧನೆಯ ಕರ್ತವ್ಯಗಳನ್ನು ಮಾಡಲು ಮೊದಲನೆ ಕೊಠಡಿಯ ಒಳಗಡೆ ಹೋಗುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಇವುಗಳು ಹೀಗೆ ಸಿದ್ಧವಾದ ಬಳಿಕ ಯಾಜಕರು ಯಾವಾಗಲೂ ಹೊರಗಿನ ಗುಡಾರವನ್ನು ಪ್ರವೇಶಿಸಿ ದೈವಿಕ ಆರಾಧನೆಯನ್ನು ನಡೆಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 9:6
9 ತಿಳಿವುಗಳ ಹೋಲಿಕೆ  

ತೆನಿ ದೆವಾಚಿ ಲೊಕಾ; ತೆನಿ ತೆಂಕಾ ಅಪ್ನಾಚಿ ಪೊರಾ ಕರುನ್ ಘೆಟ್ಲ್ಯಾನ್ ಅನಿ ಅಪ್ನಾಚಿ ಮಹಿಮಾ ತೆಂಕಾ ದಾಕ್ವುನ್ ದಿಲ್ಯಾನ್; ತೆನಿ ತೆಂಚ್ಯಾ ವಾಂಗ್ಡಾ ಅಪ್ನಾಚಿ ಕರಾರಾ ಕರ್ಲ್ಲ್ಯಾನ್ ಅನಿ ಅಪ್ನಾಚೊ ಖಾಯ್ದೊ ತೆಂಕಾ ದಿಲ್ಯಾನ್; ತೆಂಚೆಕ್ಡೆ ಖರೆ ಆರಾದನ್ ಹಾಯ್; ತೆನಿ ದೆವಾನ್ ಗೊಸ್ಟ್ ದಿವ್ನ್ ದಿಲ್ಲ್ಯಾ ಗೊಸ್ಟಿಯಾ ಘೆಟ್ಲ್ಯಾನಿ;


ಲೆವಿಚ್ಯಾ ಘರಾನ್ಯಾಚ್ಯಾ ಯಾಜಕ್ ಕಾಮಾಚ್ಯಾ ವೈನಾ ಲೊಕಾಕ್ನಿ ದಿವ್ನ್ ಹೊತಾ, ಹೊಲ್ಯಾರ್ಬಿ ಯಾಜಕ್ ಕಾಮಾಕ್ನಾ ಲೊಕಾಕ್ನಿ ಆತ್ಮ್ಯಾನ್ ಸಂಪುರ್ನ್ ಕರುಕ್ ಹೊವ್ಕ್ ನಾ, ತಸೆ ಹೊವ್ನ್ ದುಸ್ರ್ಯಾ ನಮನಿಚೊ ಯಾಜಕ್ ಯೆತಲೊ ತೆಂಕಾ ಪಾಜೆಚ್ ಹೊವ್ನ್ ಹೊತ್ತೊ, ತಸೆ ಮಟ್ಲ್ಯಾರ್ ಮೆಲ್ಕಿಜೆದೆಕ್ ಸಾರ್ಕೊ ಯಾಜಕುಚ್ ಪಾಜೆ ಹೊಲ್ಲೊ, ಅನಿ ಆರೊನಾ ಸಾರ್ಕೊಸೊ ನ್ಹಯ್ ಮನ್ತಲೆ ಹೆಚೊ ಅರ್ಥ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು