ಇಬ್ರಿಯರಿಗೆ 7:13 - ದೆವಾಚಿ ಖರಿ ಖಬರ್13 ಅಮಿ ಕ್ರಿಸ್ತಾಚ್ಯಾ ವಿಶಯಾತ್ ಹೆ ಸಾಂಗುಕ್ ಲಾಗ್ಲಾಂವ್ ತೊ ದುಸ್ರ್ಯಾಚ್ ಘರಾನಾಕ್ನಾ ಯೆಲ್ಲೊ ಹಾಯ್, ತ್ಯಾ ಘರಾನಾತ್ ಕೊನುಚ್ ಹೊಲ್ಯಾರ್ಬಿ ಕನ್ನಾಬಿ ಯಾಜಕ್ ಹೊವ್ನ್ ಸೆವಾ ಕರಲ್ಲೆ ನತ್ತೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಆದರೆ ಇವು ಯಾರ ಕುರಿತಾಗಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಒಬ್ಬನೂ ಯಜ್ಞವೇದಿಯ ಬಳಿ ಸೇವೆಮಾಡಿದ್ದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಇದನ್ನೆಲ್ಲಾ ಯಾರನ್ನು ಕುರಿತು ಹೇಳಲಾಗಿದೆಯೋ ಆ ವ್ಯಕ್ತಿ ಹುಟ್ಟಿದ್ದು ಬೇರೊಂದು ಕುಲದಲ್ಲಿ. ಆ ಕುಲದಲ್ಲಿ ಎಂದೂ ಯಾರೂ ಬಲಿಪೀಠದ ಸೇವೆ ಮಾಡಿದವರಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಮೇಲ್ಕಂಡ ಮಾತು ಯಾವಾತನ ವಿಷಯದಲ್ಲಿ ಹೇಳಿದೆಯೋ ಆತನು ಬೇರೊಂದು ಕುಲದಲ್ಲಿ ಹುಟ್ಟಿದವನು; ಆ ಕುಲದವರಲ್ಲಿ ಒಬ್ಬರೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ನಾವು ಕ್ರಿಸ್ತನನ್ನು ಕುರಿತು ಇವುಗಳನ್ನು ಹೇಳುತ್ತಿರುವೆವು. ಆತನು ಬೇರೊಂದು ಕುಲಕ್ಕೆ ಸೇರಿದವನು. ಆ ಕುಲದವರಲ್ಲಿ ಯಾರೇ ಆಗಲಿ ಎಂದೂ ಯಾಜಕರಾಗಿ ಸೇವೆ ಮಾಡಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಇವು ಯಾರ ವಿಷಯದಲ್ಲಿ ಹೇಳಿದೆಯೋ ಆ ವ್ಯಕ್ತಿ ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಎಂದೂ ಯಾರೂ ಬಲಿಪೀಠದ ಬಳಿ ಸೇವೆ ಮಾಡಿದವರಲ್ಲ. ಅಧ್ಯಾಯವನ್ನು ನೋಡಿ |