ಇಬ್ರಿಯರಿಗೆ 1:3 - ದೆವಾಚಿ ಖರಿ ಖಬರ್3 ತೊ ಲೆಕ್ ಅಪ್ಲ್ಯಾ ಬಾಬಾಚ್ಯಾಚ್ ಮಹಿಮೆಚೊ ಉಜ್ವೊಡ್ ಅನಿ ತೆಚ್ಯಾ ರುಪಾಚೊ ಸಗ್ಳೊ ಪ್ರತಿರುಪ್ ಹೊವ್ನ್ ಹಾಯ್; ತೊ ಅಪ್ನಾಚ್ಯಾ ಘಟ್‍ಮುಟ್ಟ್ ಗೊಸ್ಟಿಯಾನಿ ಸಗ್ಳಿ ಸೃಸ್ಟಿ ಚಾಲ್ವುನ್ ಘೆವ್ನ್ ಜಾತಾ, ಮಾನುಸ್ ಜಾತಿಚೊ ಪಾಪ್ ಧುವ್ನ್ ಕಾಡುನ್ ಹೊಲ್ಲ್ಯಾ ತನ್ನಾ ತೊ ಸರ್ಗಾರ್ ಮಹಿಮೆವಂತ್ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಈತನು ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ ತನ್ನ ಶಕ್ತಿಯ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ಪಾಪವಿಶುದ್ಧಿಮಾಡಿದ ಮೇಲೆ ಉನ್ನತಲೋಕದೊಳಗೆ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ. ಅಧ್ಯಾಯವನ್ನು ನೋಡಿ |