Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 7:34 - ದೆವಾಚಿ ಖರಿ ಖಬರ್

34 ಇಜಿಪ್ತಾತ್ ಮಾಜಿ ಲೊಕಾ ಲೈ ತರಾಸ್ ಕರುನ್ ಘೆವ್ಕ್ ಲಾಗಲೆ ಮಿಯಾ ಬಗಟ್ಲಾ ಅನಿ ತೆಂಚೊ ವಿಳಾಪ್ ಮಿಯಾ ಆಯ್ಕ್ಲಾ, ತೆಂಕಾ ಸುಟ್ಕಾ ದಿವ್ಕ್ ಮನುನ್ ಮಿಯಾ ಉತ್ರುನ್ ಯೆಲಾ, ಮೊಯ್ಜೆ ಅತ್ತಾ ಮಿಯಾ ತುಕಾ ಇಜಿಪ್ತಾಕ್ ಧಾಡುನ್ ದಿತಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವುದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ, ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಈಜಿಪ್ಟಿನಲ್ಲಿ ನನ್ನ ಜನರ ದುರವಸ್ಥೆಯನ್ನು ನಾನು ಕಂಡಿದ್ದೇನೆ. ಅವರ ನರಳಾಟವನ್ನು ಕೇಳಿಸಿಕೊಂಡಿದ್ದೇನೆ. ಅವರನ್ನು ಬಿಡುಗಡೆ ಮಾಡಲು ನಾನಿಳಿದು ಬಂದಿದ್ದೇನೆ. ಇಲ್ಲಿ ಬಾ, ನಾನು ನಿನ್ನನ್ನು ಹಿಂದಿರುಗಿ ಈಜಿಪ್ಟಿಗೆ ಕಳುಹಿಸುತ್ತೇನೆ,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 7:34
21 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ಸರ್‍ಗಾ ವೈನಾ ಉತ್ರುನ್ ಯೆಲ್ಲ್ಯಾ ಮಾನ್ಸಾಚ್ಯಾ ಲೆಕಾಕ್ ಎಕ್ಲ್ಯಾಕ್ ಸೊಡುನ್, ಅನಿ ಕೊನ್ಬಿ ಸರ್ಗಾತ್ ಗೆಲ್ಲೊ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು