Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:17 - ದೆವಾಚಿ ಖರಿ ಖಬರ್

17 ತಿನ್ ದಿಸಾ ಕಳದ್ಲ್ಯಾ ಮಾನಾ ಪಾವ್ಲುನ್ ಜುದೆವಾಂಚ್ಯಾ ಪ್ರಮುಖ್ ಮಾನ್ಸಾಕ್ನಿ ಬಲ್ವುಕ್ ಲಾವ್ಲ್ಯಾನ್, ತೆನಿ ಗೊಳಾ ಹೊವ್ನ್ ಯೆಲ್ಲ್ಯಾ ತನ್ನಾ ಪಾವ್ಲುನ್ ತೆಂಕಾ, ಮಾಜ್ಯಾ ವಾಂಗ್ಡಿ ಇಸ್ರಾಯೆಲ್ ಭಾವಾನು, ಅಮ್ಚ್ಯಾ ಲೊಕಾಕ್ನಿ ಬಿ ನಾ ತರ್ ಅಮ್ಚ್ಯಾ ಪುರ್ವಜಾಂಚ್ಯಾ ಅಮ್ಕಾ ದಿಲ್ಲ್ಯಾ ಪದ್ದತಿಯಾಕ್ನಿ ವಿರೊಧ್ ಹೊವ್ನ್ ಮಿಯಾ ಕಾಯ್ಬಿ ಕರುಕ್ನಾ ಖರೆ ಮಾಕಾ ಜೆರುಜಲೆಮಾತ್ ಎಕ್ ಚೊರಾಸಾರ್ಕೆ ಧರುನ್ ರೊಮಾತ್ಲ್ಯಾ ಲೊಕಾಕ್ನಿ ಒಪ್ಸುನ್ ಹೊಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿಕೊಂಡನು. ಅವರು ಬಂದಾಗ ಅವನು ಅವರಿಗೆ; “ಸಹೋದರರೇ, ನಾನು ನಮ್ಮ ಜನರಿಗೂ, ನಮ್ಮ ಪೂರ್ವಿಕರ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇಮಿನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿದನು. ಅವರು ಕೂಡಿದ ಮೇಲೆ ಅವನು ಅವರಿಗೆ - ಸಹೋದರರೇ, ನಾನು ನಮ್ಮ ಜನರಿಗೂ ನಮ್ಮ ಪಿತೃಗಳ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇವಿುನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಧಾನರಾಗಿದ್ದವರನ್ನು ಕರೆಯಿಸಿದನು. ಅವರು ಬಂದು ಒಟ್ಟಾಗಿ ಸೇರಿದಾಗ ಪೌಲನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ನಮ್ಮ ಜನರಿಗೂ ನಮ್ಮ ಪಿತೃಗಳ ಸಂಪ್ರದಾಯಗಳಿಗೂ ವಿರುದ್ಧವಾಗಿ ನಾನೇನೂ ಮಾಡಿಲ್ಲ. ಆದರೆ ನನ್ನನ್ನು ಜೆರುಸಲೇಮಿನಲ್ಲಿ ಬಂಧಿಸಿ ರೋಮಿನವರಿಗೆ ಒಪ್ಪಿಸಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ನಾಯಕರನ್ನು ಕರೆಯಿಸಿದನು. ಅವರೆಲ್ಲರೂ ಬಂದಾಗ ಅವರಿಗೆ, “ನನ್ನ ಸಹೋದರರೇ, ನಮ್ಮ ಜನರಿಗೂ ನಮ್ಮ ಪೂರ್ವಜರಿಗೂ ವಿರೋಧವಾಗಿ ನಾನು ಏನನ್ನೂ ಮಾಡಲಿಲ್ಲ. ಆದರೂ ನನ್ನನ್ನು ಯೆರೂಸಲೇಮಿನಲ್ಲಿ ಬಂಧಿಸಿ ರೋಮನ್ನರ ವಶಕ್ಕೆ ಒಪ್ಪಿಸಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:17
11 ತಿಳಿವುಗಳ ಹೋಲಿಕೆ  

ಪಾವ್ಲುನ್ ಪರ್ತುನ್ ವಾದ್ ಕರುನ್ “ಮಿಯಾ ಜುದೆವಾಂಚ್ಯಾ ಖಾಯ್ದ್ಯಾಕ್ನಿ ಹೊಂವ್ದಿ, ದೆವಾಚ್ಯಾ ಗುಡಿಕ್ ಹೊಂವ್ದಿ, ಅನಿ ಸಿಸರಾಕ್ ಹೊಂವ್ದಿ ವಿರೊದ್ ಹೊವ್ನ್ ಕಸ್ಲಿಬಿ ಚುಕ್ ಕರುಕ್ನಾ” ಮನುನ್ ಸಾಂಗ್ಲ್ಯಾನ್.


ನಜರೆತಾತ್ಲೊ ಜೆಜು ಹಿ ಗುಡಿ ಪಾಡ್ವುನ್ ಮೊಯ್ಜೆಚೆ ಖಾಯ್ದೆ ಬದಲ್ತಾ ಮನುನ್ ಹ್ಯೊ ಮಾನುಸ್ ಸಾಂಗುಕ್ ಲಾಗಲ್ಲೆ ಅಮಿ ಆಯಿಕ್ಲಾಂವ್” ಮನುನ್ ಸಾಂಗ್ಲ್ಯಾನಿ.


ಪಾವ್ಲುನ್, “ಅತ್ತಾ ಮಿಯಾ ಸಿಸರಾಚ್ಯಾ ಝಡ್ತಿ ಕರ್‍ತಲ್ಯಾ ಜಾಗ್ಯಾಚ್ಯಾ ಫಿಡ್ಯಾತ್ ಇಬೆ ಹಾಯ್ ಮಾಕಾ ಹಿತ್ತೆಚ್ ನಿರ್ದಾರ್ ಹೊವ್ಚೆ ಮಿಯಾ ಜುದೆವಾಂಚ್ಯಾ ಲೊಕಾಕ್ನಿ ಕಾಯ್ಬಿ ಚುಕ್ ಕರುಕ್ನಾ ಹೆ ಖರೆಚ್ ಮನ್ತಲೆ ತುಕಾ ಅನಿ ತುಜ್ಯಾ ವಾಂಗ್ಡಿಯಾಕ್ನಿ ಲೈ ಬರೆ ಗೊತ್ತ್ ಹಾಯ್.


ಹೆ ಖರೆ ಮನನುಕ್ ಮುಖ್ಯ್ ಯಾಜಕ್ ಅನಿ ಜುದೆವಾಂಚ್ಯಾ ಜಾನ್ತ್ಯಾ ಲೊಕಾಂಚ್ಯಾ ತಾಂಡ್ಯಾತ್ಲಿ ಲೊಕಾ ಸಗ್ಳಿ ಸಾಕ್ಷಿ ಹೊವ್ನ್ ಹಾತ್, ಎಗ್ದಾ ಹ್ಯಾ ಮುಂಖಡಾನಿ ಮಾಕಾ ಉಲ್ಲಿ ಚಿಟಿಯಾ ದಿಲ್ಯಾನಿ, ದಮಸ್ಕಾ ಮನ್ತಲ್ಯಾ ಶಾರಾತ್ಲ್ಯಾ ಜುದೆವಾಂಚ್ಯಾ ಭಾವಾಕ್ನಿ ತಿ ಸಗ್ಳ್ಯಿ ಚಿಟಿಯಾ ಲಿವಲ್ಲಿ ಹೊತ್ತಿ ಮಿಯಾ ಜೆಜುಚ್ಯಾ ಶಿಸಾಕ್ನಿ ಬಂಧಿಕರುನ್ ಶಿಕ್ಷಾ ದಿವ್ಕ್ ಸಾಟ್ನಿ ತೆಂಕಾ ಜೆರುಜಲೆಮಾಕ್ ವಡುನ್ ಘೆವ್ನ್ ಯೆವ್ಕ್ ಥೈ ಜಾವ್ಲಾಗಲೊ.


ತನ್ನಾ ಮೊಟ್ಯಾ ಯಾಜಕಾನಿ ಅನಿ ಜುದೆವಾಂಚ್ಯಾ ಪ್ರಮುಕ್ ಮುಖಂಡಾನಿ ಪಾವ್ಲುಕ್ ವಿರೊದ್ ಹೊವ್ನ್, ಅನಿ ತೆನಿ ಪಾವ್ಲುಕ್ ಪರ್ತುನ್ ಜರುಜಲೆಮಾಕ್ ಧಾಡುಚೆ ಮನುನ್ ಫೆಸ್ತಾಕ್ಡೆ ಮಾಗುನ್ ಘೆಟ್ಲ್ಯಾನಿ.


ಘೊಡ್ಕಿಯಾಂಚ್ಯಾ ಲೊಕಾನಿ ಸೆಜೆರೆಯಾ ಶಾರಾಕ್ ಪಾವ್ನ್ ರಾಜ್ಯ್ ಪಾಲ್ ಫೆಲಿಕ್ಸಾಕ್ ಚಿಟ್ ದಿಲ್ಯಾನ್, ಮಾನಾ ತೆನಿ ಪಾವ್ಲುಕ್‍ ತೆಕಾ ಒಪ್ಸುನ್ ದಿಲ್ಯಾನಿ.


ಖರೆ ಜುದೆವಾನಿ ಥೈತ್ಲ್ಯಾ ಉಲ್ಲ್ಯಾ ಘವ್ಮಾನ್ಸಾಕ್ನಿ ಅನಿ ಬಾಯ್ಕಾ ಮಾನ್ಸಾಕ್ನಿ ಝಗ್ಡ್ಯಾಕ್ ಉಟಿ ಸಾರ್ಕೆ ಕರುನ್ ಸಮಾಜ್ಯಾತ್ ಗೌರವಾನ್ ಹೊತ್ತ್ಯಾ ಬಾಯ್ಕಾ ಮಾನ್ಸಾಕ್ನಿ ಅನಿ ಉಲ್ಲ್ಯಾ ಲೊಕಾಕ್ನಿ ಧಾಡುನ್ ಪಾವ್ಲು ಅನಿ ಬಾರ್ನಾಬಾಕ್ ವಿರೊದ್ ಬುರ್ಶೆ ಕರುನ್ ತೆಂಕಾ ಪ್ರಾಂತ್ಯಾಕ್ನಾ ಭಾಯ್ರ್ ಘಾಲಿ ಸಾರ್ಕೆ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು