ಅಪೊಸ್ತಲರ ಕೃತ್ಯಗಳು 26:16 - ದೆವಾಚಿ ಖರಿ ಖಬರ್16 ಖರೆ ಉಟುನ್ ಇಬೆ ರ್‍ಹಾ! ತುಕಾ ಮಾಜೊ ಸೆವಕ್ ಹೊವ್ನ್ ಸಾಕ್ಷಿ ಎಚುನ್ ಘೆವ್ಕ್ ಸಾಟ್ನಿ ಅತ್ತಾ ಮಿಯಾ ತುಕಾ ದಾಕ್ವುನ್ ಘೆಟಲ್ಯಾ ವಿಶಯಾತ್ ಸಾಕ್ಷಿ ಹೊವ್ನ್ ರ್‍ಹಾತೆಯ್ ಹೆಕಾಚ್ ಮನುನ್ ಅತ್ತಾ ಮಿಯಾ ತುಕಾ ದಾಕ್ವುನ್ ಘೆಟ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಎದ್ದು ನಿಂತುಕೋ; ನಿನ್ನನ್ನು ನನ್ನ ದಾಸನನ್ನಾಗಿಯೂ ಸಾಕ್ಷಿಯನ್ನಾಗಿಯೂ ನೇಮಿಸಿಕೊಳ್ಳುವುದಕ್ಕಾಗಿ ನಿನಗೆ ದರ್ಶನವಿತ್ತಿದ್ದೇನೆ. ಈ ದರ್ಶನದಲ್ಲಿ ನನ್ನ ವಿಷಯವಾಗಿ ಕಂಡದ್ದನ್ನು ಮತ್ತು ಮುಂದಿನ ದರ್ಶನಗಳಲ್ಲಿ ನಾನು ನಿನಗೆ ತೋರಿಸಲಿರುವ ವಿಷಯಗಳನ್ನು ಕುರಿತು ಬೇರೆಯವರಿಗೆ ನೀನು ತಿಳಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ನಿನ್ನನ್ನು ನನ್ನ ಸೇವಕನಾಗಿಯೂ ಸಾಕ್ಷಿಯಾಗಿಯೂ ನೇವಿುಸುವದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ನಾನು ಈಗಲೂ ಮುಂದೆ ನಿನಗೆ ಕೊಡಲಿಕ್ಕಿರುವ ದರ್ಶನಗಳಲ್ಲಿಯೂ ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ಸಾಕ್ಷಿಯಾಗಿರಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಎದ್ದೇಳು! ನಿನ್ನನ್ನು ನನ್ನ ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಆರಿಸಿಕೊಂಡಿದ್ದೇನೆ. ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡದ್ದರ ವಿಷಯವಾಗಿಯೂ ನಾನು ನಿನಗೆ ಕೊಡಲಿರುವ ದರ್ಶನಗಳ ವಿಷಯವಾಗಿಯೂ ನೀನು ಜನರಿಗೆ ಸಾಕ್ಷಿಯಾಗಿರುವೆ. ಇದಕ್ಕಾಗಿಯೇ ಈ ಹೊತ್ತು ನಾನು ನಿನಗೆ ಕಾಣಿಸಿಕೊಂಡೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ನೀನು ಎದ್ದು ನಿಂತುಕೋ, ನೀನು ಕಂಡಿದ್ದವುಗಳಿಗಾಗಿಯೂ ನಾನು ನಿನಗೆ ತೋರಿಸುವಂಥವುಗಳಿಗಾಗಿಯೂ ನಿನ್ನನ್ನು ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ನೇಮಿಸಲು ನಾನು ನಿನಗೆ ಕಾಣಿಸಿಕೊಂಡಿದ್ದೇನೆ. ಅಧ್ಯಾಯವನ್ನು ನೋಡಿ |
ಖರೆ ಮಿಯಾ ಥೈ ಗೆಲ್ಲೆ ಕಶ್ಯಾಕ್ ಮಟ್ಲ್ಯಾರ್, ಮಾಕಾ ಗಾವಲ್ಲ್ಯಾ ದೆವಾಚ್ಯಾ ಪ್ರೆರನಾಕ್ ಖಾಲ್ತಿ ಹೊವ್ನ್ ಗೆಲ್ಲೊ, ಅನಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ಮಿಯಾ ಸಾಂಗುಕ್ ಲಾಗಲ್ಲೊ; ತ್ಯಾ ಬರ್‍ಯಾ ಖಬ್ರೆಚ್ಯಾ ವಿಶಯಾತ್ ಮಿಯಾ ಥೈತ್ಲ್ಯಾ ಮುಖಂಡಾಚ್ಯಾ ಇದ್ರಾಕ್ ಸೊಡ್ಸುನ್ ಸಾಂಗಟ್ಲೊ. ಕಶ್ಯಾಕ್ ಮಟ್ಲ್ಯಾರ್ ತವ್ಡೆ ಪತರ್ ಮಿಯಾ ಕರಲ್ಲೆ ಕಾಮ್ ಅನಿ ಅತ್ತಾ ಹೊತಲೆ ಕಾಮ್ ಪಾಯ್ದ್ಯಾಕ್ ಪಡಿನಸಲ್ಲೆ ಹೊವ್ಚೆ ನ್ಹಯ್ ಮನ್ತಲೆ ಮಾಕಾ ಪಾಜೆ ಹೊತ್ತೆ.