Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:2 - ದೆವಾಚಿ ಖರಿ ಖಬರ್

2 ಪಾವ್ಲುಕ್ ತಾಂಡ್ಯಾತ್ ಬಲ್ವುನ್ ಹಾನಲ್ಯಾ ತನ್ನಾ ತೆರ್ತುಲ್ಲಾ ಮನ್ತಲೊ ಅಪ್ಲಿ ಚಾಡಿಯಾ ಸಾಂಗುಕ್ ಲಾಗ್ಲೊ; ಮೊಟೊ ರಾಜಾ ಹೊಲ್ಲ್ಯಾ ಫೆಲಿಕ್ಸಾ ತುಜ್ಯಾ ವೈನಾ ಅಮ್ಚಿ ಲೊಕಾ ಸಗ್ಳ್ಯಿ ಶಾಂತ್ ಪಾನಾನ್ ಜಿವನ್ ಕರುಲ್ಲಾತ್ ತಿಯಾ ಬುದ್ದ್ ವಾಪ್ರುನ್ ಅಮ್ಚ್ಯಾ ದೆಶ್ಯಾತ್ಲಿ ಹಾಳ್ ಹೊಲ್ಲಿ ಸಗ್ಳ್ಯಿ ಪರಿಸ್ಥಿತಿ ಸಮಾ ಕರ್‍ಲೆಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಪೌಲನನ್ನು ಕರೆಯಿಸಿದನಂತರ ತೆರ್ತುಲ್ಯನು ಅವನ ಮೇಲೆ ತಪ್ಪುಹೊರಿಸುವುದಕ್ಕೆ ಪ್ರಾರಂಭಿಸಿ ಹೀಗಂದನು; “ಮಹಾ ಶ್ರೇಷ್ಠನಾದ ಫೇಲಿಕ್ಸನೇ, ನಿನ್ನ ಮೂಲಕವಾಗಿ ನಮಗೆ ಬಹು ಸಮಾಧಾನ ಉಂಟಾಗುವುದರಿಂದಲೂ, ನಿನ್ನ ಮುಂದಾಲೋಚನೆಯಿಂದ ಈ ದೇಶದ ಜನರಿಗೆ ಎಲ್ಲಾ ವಿಧದಲ್ಲಿಯೂ, ಎಲ್ಲಾ ಸ್ಥಳಗಳಲ್ಲಿಯೂ, ಸುಧಾರಣೆಗಳು ಆಗುವುದರಿಂದಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಪೌಲನನ್ನು ಕರೆದುತಂದು ನಿಲ್ಲಿಸಿದಾಗ ತೆರ್ತುಲ್ಲನು ಅವನ ವಿರುದ್ಧ ಹೀಗೆಂದು ವಾದಿಸಲಾರಂಭಿಸಿದನು: “ಮಹಾಪ್ರಭುವೇ, ನಿಮ್ಮ ಮುಖಂಡತ್ವದಲ್ಲಿ ನಾವು ಶಾಂತಿ ಸೌಭಾಗ್ಯವನ್ನು ಸವಿಯುತ್ತಿದ್ದೇವೆ. ದೇಶ ಪ್ರಗತಿಗಾಗಿ ಆಗುತ್ತಿರುವ ಸುಧಾರಣೆಗಳಿಗೆ ತಮ್ಮ ಪರಾಮರಿಕೆಯೇ ಕಾರಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಪೌಲನನ್ನು ಕರೆಯಿಸಿದ ನಂತರ ತೆರ್ತುಲ್ಲನು ಅವನ ಮೇಲೆ ತಪ್ಪುಹೊರಿಸುವದಕ್ಕೆ ಪ್ರಾರಂಭಿಸಿ ಹೀಗಂದನು - ಶ್ರೀಮತ್ ಮಹಾ ಫೇಲಿಕ್ಸನೇ, ನಿನ್ನ ಮೂಲಕವಾಗಿ ನಮಗೆ ಬಹು ಸಮಾಧಾನ ಉಂಟಾಗುವದರಿಂದಲೂ ನಿನ್ನ ಪರಾಂಬರಿಕೆಯಿಂದ ಈ ದೇಶದ ಜನರಿಗೆ ಎಲ್ಲಾ ವಿಧದಲ್ಲಿಯೂ ಎಲ್ಲಾ ಸ್ಥಳದಲ್ಲಿಯೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಪೌಲನನ್ನು ಸಭೆಗೆ ಕರೆಸಲಾಯಿತು. ಆಗ ತೆರ್ತುಲ್ಲನು ತನ್ನ ಆಪಾದನೆಗಳನ್ನು ಹೊರಿಸಲಾರಂಭಿಸಿದನು: “ಮಹಾರಾಜಶ್ರೀಗಳಾದ ಫೇಲಿಕ್ಸನೇ, ನಿನ್ನ ದೆಸೆಯಿಂದಾಗಿ ನಮ್ಮ ಜನರು ಶಾಂತಿಯಿಂದ ಜೀವಿಸುತ್ತಿದ್ದಾರೆ. ನಿನ್ನ ವಿವೇಕದ ಸಹಾಯದಿಂದ ನಮ್ಮ ದೇಶದ ಅನೇಕ ದೋಷಗಳನ್ನು ಸರಿಪಡಿಸಿ ಸುಧಾರಣೆಗಳನ್ನು ಮಾಡಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಪೌಲನನ್ನು ಒಳಗೆ ಕರೆದುಕೊಂಡು ಬಂದಾಗ, ಟೆರ್ಟುಲಸನು ಫೇಲಿಕ್ಸನ ಮುಂದೆ ತಪ್ಪು ಹೊರಿಸಲು ಪ್ರಾರಂಭಿಸಿ, “ಸನ್ಮಾನಿತ ಫೇಲಿಕ್ಸರೇ, ನಿಮ್ಮ ಮೂಲಕ ಬಹಳ ದಿನಗಳಿಂದ ಶಾಂತಿಯನ್ನು ಅನುಭವಿಸುತ್ತಿದ್ದೇವೆ. ನಿಮ್ಮ ಮುಂದಾಲೋಚನೆಯಿಂದ ದೇಶಗಳಿಗೆ ಅನೇಕ ಸುಧಾರಣೆಗಳನ್ನು ತಂದಿರುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:2
8 ತಿಳಿವುಗಳ ಹೋಲಿಕೆ  

ಹಿ ಚುಕ್ ಶಿಕಾಪಾ ಶಿಕ್ವುತಲಿ ಲೊಕಾ ದುಸ್ರ್ಯಾಕ್ನಿ ದೊಶ್ ದಿತ್ಯಾತ್, ತೆನಿ ಅಪ್ನಾಚ್ಯಾ ಬುರ್ಶ್ಯಾ ಆಶಾಂಚ್ಯಾ ಸಾರ್ಕೆ ಚಲ್ತಾತ್ ಅನಿ ಅಪ್ನಾಚ್ಯಾ ಫಾಯ್ದ್ಯಾ ಸಾಟ್ನಿ ದುಶ್ರ್ಯಾಂಚಿ ಬಡಾಯ್ ಬೊಲುನ್ ದಾಕ್ವುತ್ಯಾತ್.


ಪಾಚ್ ದಿಸಾ ಕಳದ್ದ್ಯಾ ಮಾನಾ ಮುಖ್ಯ್ ಯಾಜಕ್ ಅನನಿಯಾ, ಜುದೆವಾಂಚ್ಯಾ ಜಾನ್ತ್ಯಾ ಮುಖಂಡಾಕ್ನಿ ಉಲ್ಲ್ಯಾ ಲೊಕಾಕ್ನಿ ಅನಿ ತೆರ್ತುಲ್ ಮನ್ತಲ್ಯಾ ವಕಿಲಾಕ್ ಬಲ್ವುನ್ ಘೆವ್ನ್ ರಾಜ್ಯ್ ಪಾಲಾಕ್ಡೆ ಪಾವ್ಲುಚೆರ್ ಚುಕ್ ಸಾಂಗುಚೆ ಮನುನ್ ಯೆಲ್ಯಾನಿ.


ಅಮಿ ಹೆ ಸಗ್ಳೆ ಲೈ ಧನ್ಯಾವಾದಾಚೆ ಮನುನ್ ಸಗ್ಳ್ಯಾ ಜಾಗ್ಯಾರ್ಬಿ ಸಗ್ಳ್ಯಾ ಯೆಳಾರ್ಬಿ ಒಪ್ಪುನ್ ಘೆತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು