Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:21 - ದೆವಾಚಿ ಖರಿ ಖಬರ್

21 ಖರೆ ತೆಂಕಾ ವಿಶ್ವಾಸ್ ಕರುನಕ್ಕೊ! ಪಾವ್ಲುಕ್ ಜಿವ್ ಕಾಡುಸಾಟಿ ಚಾಳಿಸಾಕ್ಕಿಂತಾಬಿ ಲೈ ಜುದೆವಾಂಚಿ ಲೊಕಾ ರಾಕುನ್ಗೆತ್ ನಿಪುನ್ ಬಸ್ಲಾತ್ ತೆಕಾ ಜಿವ್ ಕಾಡಿ ಪಾತರ್ ಕಾಯ್ಬಿ ಖಾಯ್ನಾತ್ ಅನಿ ಫಿಯ್ನಾತ್ ಮನುನ್ ಆನ್ ಥವ್ನ್ ತುಜ್ಯಾ ಒಪ್ಗಿಕ್ ವಾಟ್ ರಾಕುನ್ಗೆತ್ ಹಾತ್ ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನೀವು ಅವರ ಮಾತಿಗೆ ಬದ್ಧರಾಗಬೇಡಿ; ಏಕೆಂದರೆ ನಲವತ್ತಕ್ಕಿಂತ ಹೆಚ್ಚು ಮಂದಿ ಯೆಹೊದ್ಯರು ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥವನ್ನು ಮಾಡಿಕೊಂಡು, ಅವನಿಗೋಸ್ಕರ ಹೊಂಚುಹಾಕುತ್ತಾ ಇದ್ದಾರೆ. ಈಗ ಅವರು ನಿಮ್ಮ ಒಪ್ಪಿಗೆಯನ್ನೇ ಎದುರುನೋಡುತ್ತಾ ಸಿದ್ಧವಾಗಿದ್ದಾರೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಆದರೆ ನೀವು ಅವರ ಮಾತನ್ನು ನಂಬಬೇಡಿ. ಏಕೆಂದರೆ, ನಾಲ್ವತ್ತಕ್ಕೂ ಹೆಚ್ಚು ಮಂದಿ ಅವನಿಗಾಗಿ ಹೊಂಚುಹಾಕಿ ಕಾದುಕೊಂಡಿರುತ್ತಾರೆ. ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥಮಾಡಿದ್ದಾರೆ. ಈಗ ಅವರು ನಿಮ್ಮ ಅನುಮತಿಯನ್ನು ಎದುರು ನೋಡುತ್ತಾ ಕಾಯುತ್ತಿದ್ದಾರೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನೀನು ಅವರ ಮಾತಿಗೆ ಒಡಂಬಡಬೇಡ; ಯಾಕಂದರೆ ನಾಲ್ವತ್ತಕ್ಕಿಂತ ಹೆಚ್ಚು ಮಂದಿ ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವದಿಲ್ಲವೆಂದು ಶಪಥವನ್ನು ಮಾಡಿಕೊಂಡು ಅವನಿಗೋಸ್ಕರ ಹೊಂಚುಹಾಕುತ್ತಾ ಇದ್ದಾರೆ. ಈಗ ಅವರು ನಿನ್ನ ಅಪ್ಪಣೆಯನ್ನು ಎದುರುನೋಡುತ್ತಾ ಸಿದ್ಧವಾಗಿದ್ದಾರೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆದರೆ ಅವರನ್ನು ನಂಬಬೇಡ! ಪೌಲನನ್ನು ಕೊಲ್ಲುವುದಕ್ಕಾಗಿ ನಲವತ್ತಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಅಡಗಿಕೊಂಡು ಕಾಯುತ್ತಿದ್ದಾರೆ. ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂದು ಅವರೆಲ್ಲರೂ ಹರಕೆ ಮಾಡಿಕೊಂಡಿದ್ದಾರೆ! ಈಗ ಅವರು ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ನೀವು ಅವರ ಮಾತಿಗೆ ಒಪ್ಪಿಕೊಳ್ಳಬೇಡಿ, ಏಕೆಂದರೆ ನಾಲ್ವತ್ತಕ್ಕಿಂತಲೂ ಹೆಚ್ಚು ಜನರು ಅವನಿಗಾಗಿ ಹೊಂಚುಹಾಕಿದ್ದಾರೆ. ಅವನನ್ನು ಕೊಲ್ಲುವವರೆಗೆ ಊಟಮಾಡುವುದಿಲ್ಲ, ಪಾನ ಮಾಡುವುದಿಲ್ಲ, ಎಂದು ಅವರು ಶಪಥ ಮಾಡಿದ್ದಾರೆ. ಅವರ ಬೇಡಿಕೆಗೆ ನಿಮ್ಮ ಒಪ್ಪಿಗೆಯನ್ನೇ ಈಗ ಅವರು ಎದುರುನೋಡುತ್ತಾ ಇದ್ದಾರೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:21
11 ತಿಳಿವುಗಳ ಹೋಲಿಕೆ  

ಕವ್ಡ್ಯಾಕಿ ಮಾಜ್ಯಾ ಪ್ರವಾಸಾತ್ನಿ ಮಾಜ್ಯಾ ವರ್‍ತಿ ಯೆಲ್ಲೆ ಅಪಾಯ್ ಕವ್ಡೆ ಮನುನ್ ಮಿಯಾ ಸಾಂಗುಚೆ! ಪಾನಿ ಭರುನ್ ಯೆಲ್ಲೆ ಅಪಾಯ್, ಚೊರಾಂಚೆ ಅಪಾಯ್, ಮಾಜ್ಯಾಚ್ ದೆಸಾಚ್ಯಾ ಲೊಕಾನಿಕ್ನಾ ಅಪಾಯ್, ಡಂಗ್ಳಿಯಾತ್ನಿ ಅಪಾಯ್, ಸಮುಂದರಾತ್ ಅಪಾಯ್, ಘಾತ್ಕಿ ಭಾವಾ ಅನಿ ಭೆನಿಯಾಂಚೊ ಅಪಾಯ್, ಶಾರಾತ್ನಿ ಅಪಾಯ್.


ಮಾಜಿ ಸ್ವತಾಚಿ ಲೊಕಾ, ಮಾಜೆಚ್ ಮಾಸ್ ಅನಿ ರಗಾತ್ ಹೊವ್ನ್ ಹಾತ್ ಹಿ ಲೊಕಾ! ತೆಂಚ್ಯಾಸಾಟ್ನಿ ಮಿಯಾ ಕ್ರಿಸ್ತಾಕ್ನಾ ಮಾಕಾ ಧುರ್ ಕರುನ್ ಘೆವ್ಕ್ ಅನಿ ದೆವಾಚೊ ಸರಾಪ್ ಮಾಜೆ ವರ್‍ತಿ ಘಾಲುನ್ ಘೆವ್ಕ್ ಸೈತ್ ತಯಾರ್ ಹಾಂವ್.


ಕಶ್ಯಾಕ್ ಮಟ್ಲ್ಯಾರ್, ಪಾವ್ಲು ಜರುಜಲೆಮಾಕ್ ಜಾತಾನಾ ವಾಟೆರುಚ್ ತೆಕಾ ಜಿವ್ ಕಾಡುನ್ ಟಾಕುಚೆ ಮನುನ್ ರಾಕುನ್ಗೆತ್ ಹೊತ್ತ್ಯಾ ನಿ.


ಜುದೆವಾಂಚ್ಯಾ ಲೊಕಾನಿ ಮಾಕಾ ವಿರೊದ್ ಹೊವ್ನ್ ಕರಲ್ಲ್ಯಾ ಘುಟ್ಟಾನಿ ಡೊಳ್ಯಾತ್ನಿ ಪಾನಿ ಘಾಲುನ್ಗೆತ್ ಧನಿಯಾಚ್ಯಾ ಸೆವಕಾನ್ ಸಾರ್ಕೆ ಮಾಜೆ ಕಾಮ್ ಕರುನ್ಗೆತ್ ಹಾಯ್.


ಅನಿ ಜೆಜುಕ್ ಗೊಂದ್ಳುನ್ ಘಾಲುನ್, ತೆಕಾ ಧರುಕ್ ಮನುನ್ ಬಗುಲಾಗಲ್ಲೆ. ತೆನಿ ಕಾಯ್ ತರ್ ಚುಕ್ ಕರಿ ಸರ್ಕೆ ಕರುಕ್ ಖಟ್ಪಟುಲಾಗಲ್ಲ್ಯಾನಿ.


ತನ್ನಾ ತ್ಯಾ ಸೈನಿಕಾಂಚ್ಯಾ ಮುಖಂಡಾನ್, “ತಿಯಾ ಮಾಕಾ ಸಾಂಗಲ್ಲ್ಯಾ ಯೆವ್ಜನಿಚ್ಯಾ ವಿಶಯಾತ್ ಕೊನಾಕ್ಬಿ ಸಾಂಗುನಕ್ಕೊ” ಮನುನ್ ಸಾಂಗುನ್ ತ್ಯಾ ದಾಂಡ್ಗ್ಯಾ ಮಾನ್ಸಾಕ್ ಧಾಡುನ್ ದಿಲ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು