Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:26 - ದೆವಾಚಿ ಖರಿ ಖಬರ್

26 ತನ್ನಾ ಪಾವ್ಲುನ್ ತ್ಯಾ ಚಾರ್ ಜನಾಕ್ನಿ ಅಪ್ನಾಂಚ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಗೆಲ್ಯಾನ್, ದುಸ್ರೆ ದಿಸಿ ಪಾವ್ಲುನ್ ಶುದ್ಧಾಚಾರಾಚ್ಯಾ ವ್ರತಾತ್ ಭಾಗ್ ಘೆಟ್ಲ್ಯಾನ್, ಮಾನಾಸರ್ ತೆನಿ ದೆವಾಚ್ಯಾ ಗುಡಿಕ್ ಜಾವ್ನ್ ಶುದ್ದಾಚಾರಾಚಿ ನೆಮಾ ಸಗ್ಳಿ ಸಾರ್‍ತಲೆ ದಿಸಾ ಪರ್ಗಟ್ ಕರ್‍ಲ್ಯಾನ್, ಆಕ್ರಿಚ್ಯಾ ದಿಸಾತ್ನಿ ಹರ್ ಎಕ್ಲೊ ಮಾನುಸ್ ಬಲಿ ದಿತಲ್ಲೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆಗ ಪೌಲನು ಮರುದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದ ವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ದೇವಾಲಯದೊಳಗೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅಂತೆಯೇ ಪೌಲನು ಮಾರನೆಯ ದಿನ ಆ ನಾಲ್ವರೊಡನೆ ಹೋಗಿ ಶುದ್ಧಾಚಾರದವಿಧಿಯನ್ನು ನೆರವೇರಿಸಿದನು. ಅನಂತರ ಶುದ್ಧಾಚಾರ ಮುಗಿಯುವ ದಿನವನ್ನು ತಿಳಿಸುವುದಕ್ಕಾಗಿ ಮಹಾದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಬಲಿಯರ್ಪಣೆಯಾಗುವುದೆಂದು ಅಲ್ಲಿ ಸೂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆಗ ಪೌಲನು ಆ ಮನುಷ್ಯರನ್ನು ಕರೆದುಕೊಂಡು ಮರುದಿನ ಅವರೊಡನೆ ತನ್ನನ್ನು ಶುದ್ಧಿಮಾಡಿಕೊಂಡು ವ್ರತದ ದಿವಸಗಳು ಮುಗಿದವೆಂದು ತಿಳಿಸುವವನಾಗಿ ದೇವಾಲಯದೊಳಗೆ ಹೋದನು. ಪ್ರತಿಯೊಬ್ಬನಿಗೋಸ್ಕರ ಮಾಡಬೇಕಾದ ಅರ್ಪಣೆಯನ್ನು ಮುಂದೆ ಅರ್ಪಿಸಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:26
6 ತಿಳಿವುಗಳ ಹೋಲಿಕೆ  

ಮಿಯಾ ಹೆ ಕಾಮಾ ಕರಿತ್ ರಾತಾನಾ ಥೊಡ್ಯಾ ಲೊಕಾನಿ ಮಾಕಾ ದೆವಾಚ್ಯಾ ಗುಡಿತ್ ಬಗ್ಲ್ಯಾನಿ, ಕಶೆ ನಿತಳ್ ರಾವ್ಚೆ ಮನುನ್ ಮಿಯಾ ಸಾಂಗಲೊ ಕಸ್ಲೊ ಧಾಂದಲ್ ಬಿ ಕರುಕ್ ನತ್ತೊ. ಮಾಜ್ಯಾ ಅಜುಭಾಜುಕ್ ಖಲಿಬಿ ಲೊಕಾ ನತ್ತಿ.


ಜುದೆವಾಕ್ನಿ ಕಮ್ವುನ್ ಘೆವ್‍ಸಾಟ್ನಿ ಜುದೆವಾಂಚ್ಯಾ ಮದ್ದಿ ಮಿಯಾ ಜುದೆವ್ ಹೊಲೊ; ಖಾಯ್ದ್ಯಾಂಚ್ಯಾ ಖಾಯ್ಲೆ ಹೊತ್ತ್ಯಾಕ್ನಿ ಕಮ್ವುನ್ ಘೆವ್‍ಸಾಟ್ನಿ ಖಾಯ್ದ್ಯಾಂಚ್ಯಾ ಖಾಯ್ಲೆ ನತ್ತೊ ಸಾರ್ಕೊ ಹೊಲೊ.


ತಿಯಾ ತೆಂಕಾ ಬಲ್ವುನ್ ಘೆವ್ನ್ ಜಾವ್ನ್ ತೆಂಚ್ಯಾ ವಾಂಗ್ಡಾ ತುಕಾಬಿ ನಿತಳ್ ಕರುನ್ಗೆತ್ ತೆಂಚೆ ಹರಕೆ ಪಾವ್ಸು, ಅಶೆ ಕರ್‍ತಾನಾ ತುಜ್ಯಾ ವಿಶಯಾತ್ ತೆನಿ ಆಯ್ಕಲಿ ಖಬ್ರಿಯಾ ಖರೆ ನ್ಹಯ್ ಮನುನ್, ಅನಿ ತಿಯಾ ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾರ್ಕೆ ಚಲ್ತೈಯ್ ಮನುನ್ ಕಳ್ವುನ್ ಘೆತಾತ್.


ಪಾಸ್ಕಾಚೊ ಸನ್ ತೊಂಡಾರ್ ಯೆತಲೊ ಹೊತ್ತೊ , ತೆಚೆಸಾಟ್ನಿ ಲೊಕಾ ಗಾವಾ ಗಾವಾನಿತ್ನಾ ಸನಾಚ್ಯಾ ಅದ್ದಿ ಶುದ್ದಾಚಾರಾಚಿ ಶಾಸ್ತರಾ ಕರುನ್ ಘೆವಸಾಟ್ನಿ ಮನುನ್ ಜೆರುಜಲೆಮಾಕ್ ಗೆಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು