Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 21:25 - ದೆವಾಚಿ ಖರಿ ಖಬರ್

25 ಜುದೆವ್ ನ್ಹಯ್ ಹೊತ್ತ್ಯಾ ವಿಶ್ವಾಸಿ ಲೊಕಾಕ್ನಿ ಅಮಿ ಎಕ್ ಚಿಟ್ ಅತ್ತಾ ಹಾಲಿ ಧಾಡುನ್ ಹೊಲಾ ಮುರ್ತಿಯಾಕ್ನಿ ಭೆಟ್ವಲ್ಲೊ ಖಾನ್ ಖಾವ್ನಕಾಸಿ, ರಗಾತ್ ಖಾವ್ನಕಾಸಿ, ಗಳೊ ಚಿರ್ಡುನ್ ಜಿವ್ ಕಾಡಲ್ಯಾ ಜನಾವರಾಂಚೆ ಮಾಸ್ ಖಾವ್ನಕಾಸಿ, ಕಸ್ಲೊಬಿ ಲೈಂಗಿಕ್ ಪಾಪ್ ಕರುನಕಾಸಿ, ಮನುನ್ ತ್ಯಾ ಚಿಟಿತ್ ಲಿವ್ನ್ ಹೊಲಾ ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅನ್ಯಜನರಲ್ಲಿ ಯೇಸುವನ್ನು ನಂಬಿರುವವರ ಕುರಿತಾದರೋ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕತ್ತು ಹಿಸುಕಿ ಕೊಂದದ್ದನ್ನೂ ಅನೈತಿಕತೆಯನ್ನೂ ಬಿಟ್ಟು ದೂರವಾಗಿರಬೇಕೆಂಬುದಾಗಿ ನಾವು ತೀರ್ಮಾನಿಸಿದ ನಿಯಮಗಳನ್ನು ಬರೆದು ಕಳುಹಿಸಿದೆವಲ್ಲಾ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ವಿಶ್ವಾಸಿಗಳಾಗಿರುವ ಯೆಹೂದ್ಯೇತರಿಗಾದರೋ ನಾವೀಗಲೇ ಪತ್ರವನ್ನು ಕಳುಹಿಸಿದ್ದೇವೆ. ಅದರಲ್ಲಿ ಅವರು ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ಸೇವಿಸಬಾರದು, ಅನೈತಿಕತೆಯಿಂದ ದೂರವಿರಬೇಕು, ರಕ್ತವನ್ನಾಗಲೀ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳನ್ನಾಗಲೀ ತಿನ್ನಬಾರದು, ಎಂದು ತೀರ್ಮಾನಕೊಟ್ಟಿದ್ದೇವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅನ್ಯಜನರಲ್ಲಿ ಯೇಸುವನ್ನು ನಂಬಿರುವವರ ವಿಷಯವಾದರೋ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ನಾವು ತೀರ್ಮಾನಿಸಿ ಬರೆದೆವು ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ನಾವು ಒಂದು ಪತ್ರವನ್ನು ಈಗಾಗಲೇ ಕಳುಹಿಸಿದ್ದೇವೆ. ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನಬೇಡಿ. ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ. ಯಾವ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ’ ಎಂದು ಆ ಪತ್ರದಲ್ಲಿ ಬರೆಯಲಾಗಿದೆ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಯೆಹೂದ್ಯರಲ್ಲದವರಿಂದ ಬಂದ ವಿಶ್ವಾಸಿಗಳಿಗಾದರೋ, ಅವರು ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕೆಂದು ನಾವು ಬರೆದ ನಮ್ಮ ತೀರ್ಮಾನವನ್ನು ತಿಳಿಸಿದ್ದೇವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 21:25
3 ತಿಳಿವುಗಳ ಹೋಲಿಕೆ  

ಮುರ್ತಿಯಾಕ್ನಿ ಭೆಟ್ವಲ್ಲೊ ಖಾನ್ ಖಾವ್ನಕಾಸಿ, ಅನಿ ರಗಾತ್ ಖಾವ್ನಕಾಸಿ, ಗಳೊ ಚಿರ್ಡುನ್ ಜಿವ್ ಕಾಡಲ್ಲ್ಯಾ ಜನಾವರಾಂಚೆ ಮಾಸ್ ಖಾವ್ನಕಾಸಿ, ಕಸ್ಲೊಬಿ ಅನೈತಿಕ್ ಅನಿ ಲೈಂಗಿಕ್ ಪಾಪ್ ಕರುನಕಾಸಿ, ತುಮಿ ಹ್ಯಾತುರ್ನ್ನಾ ಧುರ್ ರ್‍ಹಾಲ್ಯಾರ್ ತುಮ್ಕಾ ಬರೆ ಹೊತಾ ಅನಿ ತುಮ್ಕಾ ಬರೆಚ್ ಹೊಂವ್ದಿತ್.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ಬಾಯ್ಕೊ ವ್ಯೆಬಿಚಾರಾಚ್ಯಾ ಬುರ್ಶ್ಯಾ ಚಾಲಿತ್ ಪಡಲ್ಲೆ ಸೊಡುನ್ ಅನಿ ಕಸ್ಲ್ಯಾಬಿ ಕಾರನಾನ್ ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ಲ್ಯಾರ್ ತೊ ತಿ ಬಾಯ್ಕೊಮನುಸ್ ವ್ಯೆಬಿಚಾರಾಚ್ಯಾ ಬುರ್ಶ್ಯಾಪಾನಾತ್ ಪಡಿ ಸರ್ಕೆ ಕರ್‍ತಾ. ಜರ್‍ಕಡತ್ ತಿ ಬಾಯ್ಕೊಮನುಸ್ ಅನಿಎಕ್ಲ್ಯಾಕ್ ಲಗಿನ್ ಹೊಲ್ಯಾರ್ ತಿ ವ್ಯೆಬಿಚಾರ್ ಕರ್‍ತಾ ಅನಿ ತಿಕಾ ಲಗಿನ್ ಹೊಲ್ಲೊ ಘೊಮನುಸ್‍ಬಿ ವ್ಯೆಬಿಚಾರ್ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು