ಅಪೊಸ್ತಲರ ಕೃತ್ಯಗಳು 19:26 - ದೆವಾಚಿ ಖರಿ ಖಬರ್26 ಅಶೆ ಪಾವ್ಲು ಕಾಯ್ ಕರುಲ್ಲಾ ಮನ್ತಲೆ ತುಮಿ ಬಗಲ್ಲ್ಯಾಸಿ ಅನಿ ಆಯ್ಕಲ್ಲ್ಯಾಸಿ, ಮಾನ್ಸಾಚ್ಯಾ ಹಾತಿನಿ ಕರಲ್ಲೊ ದೆವ್ ನ್ಹಯ್ ಮನುನ್ ಎಸಾತ್ ಎವ್ಡೆ ನ್ಹಯ್ ಸಗ್ಳ್ಯಾ ಆಸಿಯಾ ಪ್ರಾಂತಾತ್ ಬಿ ಸಾಂಗುಲ್ಲಾ ಅನಿ ಲೈ ಲೊಕಾಂಚಿ ಮನಾ ಪರ್ತುಲ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಪೌಲ ಎಂಬವನು ಏನು ಮಾಡುತ್ತಿರುವನೆಂದು ನೀವು ನೋಡಿದ್ದೀರಿ ಹಾಗೂ ಕೇಳಿದ್ದೀರಿ; ಕೈಯಿಂದ ಮಾಡಿದ ಆಕೃತಿಗಳು ದೇವರೇ ಅಲ್ಲವೆಂದು ಇಲ್ಲಿ ಎಫೆಸದಲ್ಲೂ ಹೆಚ್ಚುಕಡಿಮೆ ಇಡೀ ಏಷ್ಯದಲ್ಲೂ ಪ್ರಚಾರಮಾಡುತ್ತಿದ್ದಾನೆ; ಮಾತ್ರವಲ್ಲ, ಅನೇಕ ಜನರನ್ನು ಮನವೊಲಿಸಿ ಮಾರ್ಪಡಿಸಿಬಿಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬದನ್ನು ನೀವು ನೋಡುತ್ತೀರಿ, ಕೇಳುತ್ತೀರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆದರೆ ಪೌಲ ಎಂಬುವನು ಏನು ಮಾಡುತ್ತಿದ್ದಾನೆಂಬುದನ್ನು ನೋಡಿರಿ! ಅವನು ಏನು ಹೇಳುತ್ತಿದ್ದಾನೆಂಬುದನ್ನು ಕೇಳಿರಿ! ಪೌಲನು ಅನೇಕ ಜನರ ಮೇಲೆ ಪ್ರಭಾವಬೀರಿ ಅವರನ್ನು ಪರಿವರ್ತಿಸಿದ್ದಾನೆ. ಅವನು ಎಫೆಸದಲ್ಲಿಯೂ ಏಷ್ಯಾ ದೇಶದ ಎಲ್ಲಾ ಕಡೆಗಳಲ್ಲಿಯೂ ಹೀಗೆಯೇ ಮಾಡಿದ್ದಾನೆ. ಮನುಷ್ಯರು ತಯಾರಿಸುವ ದೇವರುಗಳು ನಿಜವಾದ ದೇವರುಗಳಲ್ಲ ಎಂದು ಹೇಳುತ್ತಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ಪೌಲನೆಂಬ ಈ ಮನುಷ್ಯನು ಎಫೆಸದಲ್ಲಿಯೂ ಇಡೀ ಏಷ್ಯಾ ಪ್ರಾಂತದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮನವೊಲಿಸಿ, ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲ ಎಂದು ಹೇಳಿ, ಅವರನ್ನು ಮಾರ್ಪಡಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ಕೇಳಿದ್ದೀರಿ ಹಾಗೂ ಕಂಡಿದ್ದೀರಿ. ಅಧ್ಯಾಯವನ್ನು ನೋಡಿ |