ಅಪೊಸ್ತಲರ ಕೃತ್ಯಗಳು 13:34 - ದೆವಾಚಿ ಖರಿ ಖಬರ್34 ತನ್ನಾ ದೆವಾನ್ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಮಿಯಾ ದಾವಿದಾಕ್ ಕರಲ್ಲಿ ಖರ್ಯ್ಯಾಚಿ ಗೊಸ್ಟಿಯಾ ಅನಿ ಪವಿತ್ರ್ ಹೊವ್ನ್ ಹೊತ್ತಿ ಗೊಸ್ಟಿಯಾ ದಾಕ್ವುತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201934 “ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬುದರ ಕುರಿತು ದೇವರು ಹೇಳಿರುವುದು ಏನೆಂದರೆ; ‘ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೂ ಕೊಡುತ್ತೇನೆ, ಅವು ನಂಬತಕ್ಕವುಗಳೇ’ ಎಂಬುದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)34 “ಯೇಸುವನ್ನು ಸಮಾಧಿಯಲ್ಲೇ ಕೊಳೆತುಹೋಗಲು ಬಿಡದೆ ಮರಣದಿಂದ ಪುನರುತ್ಥಾನಗೊಳಿಸಿದ ದೇವರು ಹೀಗೆಂದಿದ್ದಾರೆ: ‘ನಾನು ದಾವೀದನಿಗೆ ವಾಗ್ದಾನಮಾಡಿದ ಪವಿತ್ರ ಹಾಗೂ ನಿಶ್ಚಿತ ವರಗಳನ್ನು ನಿಮಗೆ ಕೊಡುತ್ತೇನೆ.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)34 ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬದರ ವಿಷಯದಲ್ಲಿ ದೇವರು ಹೇಳಿರುವದೇನಂದರೆ - ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ, ಅವು ನಂಬಿಕೆಯಾದವುಗಳೇ ಎಂಬದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ: ‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ34 ಹೀಗೆ ಯೇಸುವನ್ನು ಸಮಾಧಿಯಲ್ಲಿ ಕೊಳೆಯಲು ಬಿಡದೇ ದೇವರು ಅವರನ್ನು ಜೀವಂತವಾಗಿ ಎಬ್ಬಿಸಿದ ಸತ್ಯವು ಈ ಮಾತುಗಳಲ್ಲಿ ಬಂದಿದೆ: “ ‘ನಾನು ದಾವೀದನಿಗೆ ವಾಗ್ದಾನ ಮಾಡಿದ ಪವಿತ್ರ ಹಾಗೂ ನಿಶ್ಚಯವಾದ ಆಶೀರ್ವಾದಗಳನ್ನು ನಿಮಗೆ ಕೊಡುವೆನು’ ಅಧ್ಯಾಯವನ್ನು ನೋಡಿ |