ಅಪೊಸ್ತಲರ ಕೃತ್ಯಗಳು 13:1 - ದೆವಾಚಿ ಖರಿ ಖಬರ್1 ಅಂತಿಯೊಕ್ಯ್ ಮನ್ತಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಥೊಡಿ ಲೊಕಾ ಪ್ರವಾದಿಯಾ ಅನಿ ಥೊಡೆ ಶಿಕಾಪಾ ಕರ್‍ತಲೆ ಹೊತ್ತೆ ತೆನಿ ಕೊನ್ ಮಟ್ಲ್ಯಾರ್ : ಬಾರ್ನಾಬಾಸ್, ನಿಗರ್ ಮನುನ್ ಬಲ್ವುತಲೊ ಸಿಮಾವ್, ಅನಿ ಸಿರೆನ್ ಮನ್ತಲ್ಯಾ ಶಾರಾತ್ಲೊ ಮೆನಹೆನ್ ಮನ್ತಲೊ ಅನಿ ಸಾವ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯ ಸ್ನೇಹಿತ ಮೆನಹೇನ ಮತ್ತು ಸೌಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರಂದರೆ - ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಉಪರಾಜನಾದ ಹೆರೋದನ ಸಾಕತಮ್ಮನಾದ ಮೆನಹೇನ, ಸೌಲ ಇವರೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಅಂತಿಯೋಕ್ಯದ ಸಭೆಯಲ್ಲಿ ಕೆಲವು ಪ್ರವಾದಿಗಳು ಮತ್ತು ಉಪದೇಶಕರಿದ್ದರು. ಅವರು ಯಾರೆಂದರೆ: ಬಾರ್ನಬ, ಸಿಮೆಯೋನ್ (ಇವನನ್ನು ನೀಗರ್ ಎಂತಲೂ ಕರೆಯುತ್ತಿದ್ದರು.) ಲೂಸಿಯಸ್ (ಸಿರೇನ್ ಪಟ್ಟಣದವನು) ಮೆನಹೇನ (ಹೆರೋದ ರಾಜನೊಂದಿಗೆ ಬೆಳೆದವನು) ಮತ್ತು ಸೌಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಅಂತಿಯೋಕ್ಯದ ಸಭೆಯಲ್ಲಿ, ಪ್ರವಾದಿಗಳೂ ಬೋಧಕರೂ ಇದ್ದರು. ಅವರು ಯಾರೆಂದರೆ ಬಾರ್ನಬನು, ನೀಗರ ಎಂದು ಕರೆಯಲಾಗುತ್ತಿದ್ದ ಸಿಮೆಯೋನ, ಕುರೇನೆದ ಲೂಕ್ಯ, ಚತುರಾಧಿಪತಿ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಮುಂತಾದವರೇ. ಅಧ್ಯಾಯವನ್ನು ನೋಡಿ |
ತನ್ನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚೆ ಖಾಂಬೆ ಸಾರ್ಕೆ ಹೊವ್ನ್ ಹೊತ್ತ್ಯಾ ಜಾಕೊಬಾನ್ ಪೆದ್ರುನ್ ಅನಿ ಜುವಾಂವಾನ್, ದೆವಾಕ್ನಾಚ್ ಮಾಕಾ ಗಾವಲ್ಲೆ; ಹೆ ಎಕ್ ವಿಶೆಸ್ ಭೊಮಾನ್ ಮನುನ್ ವಳ್ಕುನ್, ಮಾಕಾ ಅನಿ ಬಾರ್ನಾಬಾಸಾಕ್ ಅಪ್ನಾಚೆ ವಾಂಗ್ಡಿ ಮನುನ್ ಘೆಟ್ಲ್ಯಾನಿ , ಅನಿ ಅಮ್ಕಾ ಎಕಾಮೆಕಾಕ್ ಒಪ್ಕಿ ಹಾಯ್ ಮನುನ್ ದಾಕ್ವುಸಾಟ್ನಿ ಅಮಿ ಎಕಾಮೆಕಾಚೆ ಹಾತ್ ಮಿಳ್ವುಲಾವ್, ಮಿಯಾ ಅನಿ ಬಾರ್ನಾಬಾಸ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ, ಅನಿ ತೆನಿ ಜುದೆವ್ ಲೊಕಾಂಚ್ಯಾ ಮದ್ದಿ ಜಾವ್ಕ್ ಮನುನ್ ನಿರ್ಧಾರ್ ಕರ್ಲ್ಯಾಂವ್.