ಅಪೊಸ್ತಲರ ಕೃತ್ಯಗಳು 10:3 - ದೆವಾಚಿ ಖರಿ ಖಬರ್3 ಎಕ್ ದಿಸಿ ದೊಪರಾಕ್ಡೆ ಸುಮಾರ್ ತಿನ್ ಗಂಟೆ ಹೊಲ್ಲ್ಯಾ ತನ್ನಾ ಕೊರ್ನೆಲಾಕ್ ಎಕ್ ದರ್ಶನ್ ದಿಸ್ಲೆ, ದೆವಾಚೊ ದುತ್ ಎಕ್ಲೊ ತೆಚ್ಯಾ ಜಗ್ಗೊಳ್ ಯೆವ್ನ್ “ಕೊರ್ನೆಲಾ” ಮನುನ್ ಬಲ್ವುತಲೆ ತೆಕಾ ಚೊಕ್ಕ್ ದಿಸ್ಲೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಒಂದು ದಿನ ಮಧ್ಯಾಹ್ನ ಸುಮಾರು ಮೂರು ಘಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು; “ಕೊರ್ನೆಲ್ಯನೇ” ಎಂದು ಕರೆಯುವುದನ್ನು ಅವನು ಪ್ರತ್ಯಕ್ಷವಾಗಿ ಕಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಅದೊಂದು ಮಧ್ಯಾಹ್ನ, ಸುಮಾರು ಮೂರು ಗಂಟೆಯ ಸಮಯ, ಅವನಿಗೊಂದು ದಿವ್ಯದರ್ಶನವಾಯಿತು: ದೇವದೂತನೊಬ್ಬನು ತನ್ನ ಮನೆಯೊಳಗೆ ಬಂದು, “ಕೊರ್ನೇಲಿಯಾ,” ಎಂದು ಕರೆಯುವುದನ್ನು ಸ್ಪಷ್ಟವಾಗಿ ಕಂಡನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಮಧ್ಯಾಹ್ನದ ಮೇಲೆ ಸುಮಾರು ಮೂರು ಗಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು - ಕೊರ್ನೇಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಒಂದು ಮಧ್ಯಾಹ್ನ ಸುಮಾರು ಮೂರು ಗಂಟೆಯಲ್ಲಿ ಕೊರ್ನೇಲಿಯನಿಗೆ ಒಂದು ದರ್ಶನವಾಯಿತು. ಅವನು ಅದನ್ನು ಸ್ಪಷ್ಟವಾಗಿ ಕಂಡನು. ಆ ದರ್ಶನದಲ್ಲಿ ದೇವದೂತನೊಬ್ಬನು ಅವನ ಬಳಿಗೆ ಬಂದು, “ಕೊರ್ನೇಲಿಯನೇ” ಎಂದು ಕರೆದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಒಂದು ದಿನ ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ ಅವನಿಗೆ ಒಂದು ದರ್ಶನವಾಯಿತು. ತನ್ನ ಬಳಿಗೆ ಒಬ್ಬ ದೇವದೂತನು ಬಂದು, “ಕೊರ್ನೇಲ್ಯನೇ!” ಎಂದು ಕರೆಯುವ ದೇವದೂತನನ್ನು ಸ್ಪಷ್ಟವಾಗಿ ಕಂಡನು. ಅಧ್ಯಾಯವನ್ನು ನೋಡಿ |