Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 9:5 - ದೆವಾಚಿ ಖರಿ ಖಬರ್

5 ತಸೆಮನುನ್ ತುಮಿ ಸಾಂಗಲ್ಲೆ ದಾನ್ ಗೊಳಾ ಕರುಕ್, ಭಾವಾ ಭೆನಿಯಾನು ಜಬರ್ದಸ್ತಿ ಕರ್‍ತಲೆ ಬರೆ ಮನುನ್ ಮಾಕಾ ದಿಸ್ಲೆ. ಹೆಚ್ಯಾ ವೈನಾ ಜೆ ಕಾಯ್ ಗೊಳಾ ಕರ್ಲ್ಯಾಶಿ, ತೆ ಧಾರಾಳ್ ಮನಾಚೆ ದಾನ್ ಹೊತಾ, ತೆ ತುಮ್ಚ್ಯಾಕ್ನಾ ಜಬರ್ದಸ್ತಿನ್ ಕಾಡುನ್ ಘೆಟಲ್ಲೆ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಹೀಗಿರಲಾಗಿ ಈ ಸಹೋದರರು ಮುಂಚಿತವಾಗಿ ನಿಮ್ಮ ಬಳಿಗೆ ಬಂದು ನೀವು ಮೊದಲೇ ವಾಗ್ದಾನಮಾಡಿದ ಕೊಡುಗೆಯನ್ನು ಸಿದ್ಧಪಡಿಸಲು ನಿಮಗೆ ಸಹಾಯಮಾಡುವಂತೆ ಇವರನ್ನು ಬೇಡಿಕೊಳ್ಳುವುದು ಅವಶ್ಯವೆಂದು ನನಗೆ ತೋಚಿತು. ಹೀಗೆ ಈ ದಾನ ಒತ್ತಾಯದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ದಾನ ಆಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆದ್ದರಿಂದಲೇ, ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಏರ್ಪಾಡನ್ನು ಮಾಡುವಂತೆ ಈ ಸಹೋದರರನ್ನು ನಮಗೆ ಮುಂಚಿತವಾಗಿಯೇ ನಿಮ್ಮ ಬಳಿಗೆ ಕಳುಹಿಸುವುದು ಉಚಿತವೆಂದು ನನಗೆ ತೋಚಿತು. ಹೀಗೆ ಈ ಕೊಡುಗೆ ಬಲಾತ್ಕಾರವಾದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ನಿಧಿ ಆಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹೀಗಿರಲಾಗಿ ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಕೊಡುತ್ತೇವೆಂದು ನೀವು ಮೊದಲು ಹೇಳಿದ ಧರ್ಮದ್ರವ್ಯವನ್ನು ಸಿದ್ಧಪಡಿಸಬೇಕೆಂಬದಾಗಿ ಇವರನ್ನು ಬೇಡಿಕೊಳ್ಳುವದು ಅವಶ್ಯವೆಂದು ನನಗೆ ತೋಚಿತು. ಹೀಗೆ ಆ ಹಣವು ಸುಲಿಗೆಯಂತೆ ಬಾರದೆ ಧರ್ಮಾರ್ಥವಾಗಿಯೇ ಸಿದ್ಧವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದ್ದರಿಂದ ಸಹೋದರರನ್ನು ಮುಂಚಿತವಾಗಿ ಹೋಗುವುದಕ್ಕೆ ನಾನು ಏರ್ಪಾಡು ಮಾಡಬೇಕಾಯಿತು. ಅವರು ಬಂದು ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮುಗಿಸುವರು. ಹೀಗೆ ಈ ಉದಾರವಾಗಿರುವ ದಾನವು ಬಲಾತ್ಕಾರದ ವಸೂಲಿಯಾಗಿರದೆ ಮನಃಪೂರ್ವಕವಾಗಿ ಕೊಟ್ಟಿರುವ ಸಹಾಯ ಧನವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 9:5
11 ತಿಳಿವುಗಳ ಹೋಲಿಕೆ  

ಖರೆಚ್ಬಿ ತುಮ್ಚ್ಯಾಕ್ನಾ ದಾನ್ ಕರ್ವುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ ನ್ಹಯ್ ಖರೆ ಅಶೆ ತುಮ್ಚ್ಯಾ ಖಾತ್ಯಾಕ್ ಸಗ್ಳ್ಯಾ ಥರಾಚೆ ಫಳ್ ಗಾವ್ಚೆ ಮನುನ್ ಮಿಯ್ಯಾ ಆಶ್ಯಾ ಕರ್‍ತಾ.


ತೆಚೆಸಾಟ್ನಿ ತಿತಾನ್ ಪಯ್ಲೆಚ್ ತುಮ್ಚ್ಯಾ ಮದ್ದಿ ಸುರು ಕರಲ್ಲೆ ತೆ ದಾನ್ ಗೊಳಾ ಕರ್‍ತಲೆ ಕಾಮ್ ತೆನಿಚ್ ಜಾವ್ನ್ ಪುರಾ ಕರುಚೆ ಮನುನ್ ತೆಕಾ ಜಬರ್ದಸ್ತಿ ಕರ್‍ಲಾ.


ಹರ್ ಎಕ್ ಆಯ್ತಾರ್‍ಚೆ ತುಮ್ಚ್ಯಾತ್ಲೊ ಹರಿ ಎಕ್ಲೊ ಅಪ್ನಾಚ್ಯಾನ್ ಹೊತಾ ತೌಡೆ ಉಲ್ಲೆ ಪೈಸೆ ಕಡೆಕ್ ಕಾಡುನ್ ಥಂವ್ದಿತ್; ಅಶೆ ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಪೈಸೆ ಉಸುಲಿ ಕರ್‍ತಲೆ ಲಾಗಿನಾ.


ಜಾಲ್ಯಾರ್ಬಿ ತುಮ್ಚ್ಯಾ ವಿಶಯಾತ್ಲೆ ಅಮ್ಚೆ ಹೊಗ್ಳಾಪ್ ಪೊಕಳ್ ನ್ಹಯ್ ಮನುನ್ ದಾಕ್ವುನ್ ದಿವ್‌ಸಾಟ್ನಿ ಮಿಯಾ ಭಾವಾ ಭನಿಯಾಕ್ನಿ ತುಮ್ಚ್ಯಾಕ್ಡೆ ಧಾಡುನ್ ದಿಲಾ. ತಸೆಮನುನ್ ಮಿಯಾ ಸಾಂಗಟಲ್ಲ್ಯಾ ಸಾರ್ಕೆ; ತುಮಿ ಅತ್ತಾ ತಯಾರ್ ರ್‍ಹಾವ್ಕ್ ಪಾಜೆ.


ಎವ್ಡೆ ಮನಾತ್ ಥವ್ನ್ ಘೆವಾ, ಜೊ ಕೊನ್ ಉಲ್ಲೆಸೆಚ್ ಪೆರ್ತಾ ತೊ ಉಲ್ಲೆಸೆಚ್ ಕಾತರ್‍ತಾ, ಜೊ ಕೊನ್ ಲೈ ಪೆರ್ತಾ, ತೊ ಲೈ ಕಾತರ್‍ತಾ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು