2 ಕೊರಿಂಥದವರಿಗೆ 8:19 - ದೆವಾಚಿ ಖರಿ ಖಬರ್19 ತವ್ಡೆಚ್ ನ್ಹಯ್ ದೆವಾಚ್ಯಾ ಮಹಿಮೆಕ್ ಫುರಾ ಮನಾನ್ ಅಮಿ ಕರ್ತಾಂವ್ ತ್ಯಾ ದಯಾಳ್ ಕಾಮಾತ್ನಿ, ಅಮ್ಚ್ಯಾ ಫಿರಾಟಾತ್ನಿ ಅಮ್ಚೊ ವಾಂಗ್ಡಿ ಕರುನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾನಿ ತೆಕಾ ನೆಮಲ್ಲೆ ಹಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಇದು ಮಾತ್ರವಲ್ಲದೆ, ಕರ್ತನ ಮಹಿಮೆಗಾಗಿ ಮತ್ತು ನಮ್ಮ ಸಿದ್ಧ ಮನಸ್ಸನ್ನು ತೋರಿಸುವುದಕ್ಕಾಗಿ ನಾವು ನಡಿಸುವ ಧರ್ಮಕಾರ್ಯದ ಸಂಬಂಧವಾಗಿ ನಮ್ಮ ಸಂಗಡ ಪ್ರಯಾಣಮಾಡುವಂತೆ ಸಭೆಗಳಿಂದ ಇವನು ಆರಿಸಲ್ಪಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಇದಷ್ಟೇ ಅಲ್ಲದೆ, ಪ್ರಭುವಿನ ಮಹಿಮೆ ಬೆಳಗುವಂತೆಯೂ ಇತರರಿಗೆ ನೆರವಾಗಬೇಕೆಂಬ ಸದುದ್ದೇಶದಿಂದಲೂ ನಾವು ಕೈಗೊಂಡಿರುವ ಸೇವಾಕಾರ್ಯದಲ್ಲಿ ನಮ್ಮ ಸಂಗಡ ಪ್ರಯಾಣಮಾಡಲೆಂದು ಸಭೆಯವರು ಈತನನ್ನು ನೇಮಕಮಾಡಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಇದು ಮಾತ್ರವಲ್ಲದೆ ನಾವು ನಡಿಸುವ ಈ ಧರ್ಮಕಾರ್ಯ ಸಂಬಂಧವಾಗಿ ಸಭೆಗಳವರು ಈತನನ್ನು ನಮ್ಮ ಸಂಗಡ ಪ್ರಯಾಣಮಾಡುವಂತೆ ಗೊತ್ತುಮಾಡಿದ್ದಾರೆ. ಅವರು ಹೀಗೆ ಮಾಡಿದ್ದರಿಂದ ಕರ್ತನಿಗೆ ಘನವೂ ನಮ್ಮಲ್ಲಿ ಸಿದ್ಧಮನಸ್ಸೂ ಉಂಟಾಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಅಲ್ಲದೆ, ಕರ್ತ ಯೇಸುವಿನ ಮಹಿಮೆಗಾಗಿಯೂ ಸಹಾಯಮಾಡಬೇಕೆಂಬ ಸದುದ್ದೇಶ ತೋರಿಸುವುದಕ್ಕಾಗಿಯೂ ನಾವು ಸೇವೆಯನ್ನು ನಿರ್ವಹಿಸುತ್ತೇವೆ. ಇದಕ್ಕಾಗಿಯೇ, ನಮ್ಮ ಜೊತೆ ಬಂದು ಸಹಾಯಮಾಡಲು ಸಭೆಗಳಿಂದ ಆಯ್ಕೆಯಾದವನು ಆ ಸಹೋದರನು. ಅಧ್ಯಾಯವನ್ನು ನೋಡಿ |
ಅಪೊಸ್ತಲಾನಿ, ಜಾಂನ್ತ್ಯಾ ಲೊಕಾನಿ ಅನಿ ಸಗ್ಳ್ಯಾ ತಾಂಡ್ಯಾಚ್ಯಾ ಲೊಕಾನಿ ಪಾವ್ಲು ಅನಿ ಬಾರ್ನಾಬಾಸಾಚ್ಯಾ ವಾಂಗ್ಡಾ ಥೊಡ್ಯಾ ಲೊಕಾಕ್ನಿ ಅಂತಿಯೊಕಾಕ್ ಧಾಡುಚೆ ಮನುನ್ ಚಿಂತ್ಲ್ಯಾನಿ, ಅಪ್ಲ್ಯಾ ಉಲ್ಲ್ಯಾ ಲೊಕಾಕ್ನಿ ಎಚುನ್ ಘೆವ್ಚೆ ಮನುನ್ ನಿರ್ಧಾರ್ ಕರ್‍ಲ್ಯಾನಿ, ತೆನಿ ಬಾರ್ಸಬ್ ಮನ್ತಲ್ಯಾ ಜುದಾಕ್ ಅನಿ ಸಿಲಾಸ್ ಮನ್ತಲ್ಯಾಕ್ ಎಚುನ್ ಘೆಟ್ಲ್ಯಾನಿ, ಹೆನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಪ್ರಮುಖ್ ಹೊವ್ನ್ ಹೊತ್ತೆ.