Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 6:10 - ದೆವಾಚಿ ಖರಿ ಖಬರ್

10 ಅಮಿ ದುಕ್ಕಾತ್ ಹಾಂವ್ ಜಾಲ್ಯಾರ್ ಬಿ ಸದ್ದಿಚ್ ಖುಶಿನ್ ಹಾಂವ್, ಗರಿಬ್ ರ್‍ಹಾಲ್ಯಾರ್‍ಬಿ ಕವ್ಡ್ಯಾಕಿ ಜಾನಾಕ್ನಿ ಅಮಿ ಸಾವ್ಕಾರ್ ಕರ್ತಾಂವ್. ಕಾಯ್ಬಿ ನಸಲ್ಲೆ ಹೊಲ್ಯಾರ್ಬಿ ಅಮ್ಚ್ಯಾಕ್ಡೆ ಸಗ್ಳೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ದುಃಖಪಡುತ್ತಿದ್ದರೂ ಸದಾ ಸಂತೋಷದಿಂದ ಇದ್ದೇವೆ. ದರಿದ್ರರಾಗಿದ್ದರೂ ಅನೇಕರನ್ನು ಧನವಂತರನ್ನಾಗಿಸುತ್ತಿದ್ದೇವೆ; ನಾವು ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಂತೆ ಇದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ದುಃಖಪಡುವವರಾಗಿದ್ದರೂ ಯಾವಾಗಲೂ ಸಂತೋಷಪಡುವವರೂ, ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯವನ್ನುಂಟುಮಾಡುವವರೂ, ಏನೂ ಇಲ್ಲದವರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ದುಃಖ ಪಡುವವರಾಗಿದ್ದರೂ ಹರ್ಷಿಸುತ್ತಿದ್ದೆವು, ಬಡವರಾಗಿದ್ದಾಗಲೂ ಅನೇಕರನ್ನು ಐಶ್ವರ್ಯವಂತರನ್ನಾಗಿ ಮಾಡಿದೆವು, ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 6:10
43 ತಿಳಿವುಗಳ ಹೋಲಿಕೆ  

ತಸೆಚ್ ತುಮ್ಚ್ಯಾ ವಾಂಗ್ಡಾಬಿ ಹೊತಾ, ತುಮಿ ಅತ್ತಾ ದುಕಾತ್ ಹಾಶಿ, ಖರೆ ಮಿಯಾ ಅನಿ ಎಗ್ದಾ ತುಮ್ಕಾ ಭೆಟ್ತಾನಾ ತುಮ್ಚಿ ಮನಾ ಖುಶಿನ್ ಭರಲ್ಲಿ ರ್‍ಹಾತ್ಯಾತ್. ತಿ ಕುಶಿ ಕೊನಾಕ್ಬಿ ತುಮ್ಚ್ಯಾಕ್ನಾ ಕಾಡುನ್ ನ್ಹೆವ್ಕ್ ಹೊಯ್ನಾ”.


ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಕುರ್ಪೆಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ತೊ ಸಾವ್ಕಾರ್ ರ್‍ಹಾಲ್ಯಾರ್‍ಬಿ ತುಮ್ಚ್ಯಾಸಾಟ್ನಿ ತೊ ಗರಿಬ್ ಹೊಲೊ. ಕಶ್ಯಾಕ್ ಮಟ್ಲ್ಯಾರ್ ತೆಚ್ಯಾ ಗರಿಬ್ಕಿ ವೈನಾ ಅಮ್ಕಾ ಸಾವ್ಕಾರ್ ಕರುಚೆ ಮನ್ತಲೊ ತೆಚೊ ಮನ್,


ತುಜೊ ತರಾಸ್ ಮಾಕಾ ಗೊತ್ತ್ ಹಾಯ್.ತಿಯಾ ಗರಿಬ್ ಮನುನ್ ಮಾಕಾ ಗೊತ್ತ್ ಹಾಯ್. ಖರೆ ಮಟ್ಲ್ಯಾರ್ ತಿಯಾ ಸಾವ್ಕಾರ್! ಜುದೆವ್ ನ್ಹಯ್ ಹೊಲ್ಯಾರ್ಬಿ ಅಪ್ನಿ ಜುದೆವ್ ಮನುನ್ ಸಾಂಗ್ತಲ್ಯಾ ಲೊಕಾನಿ ತುಜ್ಯಾ ವಿರೊದ್ ಬೊಲಲ್ಲ್ಯಾ ಬುರ್ಶ್ಯಾ ವಿಶಯಾಂಚ್ಯಾ ವಿಶಯಾತ್ ಮಾಕಾ ಗೊತ್ತ್ ಹಾಯ್. ತೆನಿ ಸೈತಾನಾಕ್ ಸಮಂದ್ ಪಡಲ್ಲೊ ಎಕ್ ತಾಂಡೊ!


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್ ಹ್ಯಾ ಜಗಾತ್ ಹ್ಯಾ ಗರಿಬಾಕ್ನಿ ವಿಶ್ವಾಸಾತ್ ಸಾವ್ಕಾರ್ ಹೊವ್ಕ್ ಸಾಟ್ನಿ ಅನಿ ಅಪ್ನಾಚೊ ಪ್ರೆಮ್ ಕರ್ತಲ್ಯಾಚ್ಯಾ ಸಾಟ್ನಿ ತೆನಿ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ರಾಜಾಚೊ ವಾರಿಸ್ದಾರ್ ಹೊವ್ಕ್ ಸಾಟ್ನಿ ಮನುನ್ ತೆನಿ ತೆಂಕಾ ಎಚುನ್ ಕಾಡಲ್ಲೆ ಹಾಯ್ ನ್ಹಯ್?


ಬಂಧಿಖಾನ್ಯಾತ್ ಹೊತ್ಯಾಂಚ್ಯಾ ಕಸ್ಟಾ ದುಖಾತ್ನಿ ಸೈತ್ ತುಮಿ ವಾಟೊ ಘೆಟ್ಲ್ಯಾಸಿ, ಅನಿ ತುಮ್ಚಿ ಆಸ್ತಿ, ಬದಿಕ್ ಎಚುನ್ ಘೆವ್ನ್ ಜಾವ್ಕ್ ತುಮಿ ಕುಶಿನ್ ಸೊಡ್ಲ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ತೆಜ್ಯಾನ್ಕಿ ಲೈ ಬರಿ ಅನಿ ಶಾಶ್ವತ್ ರ್‍ಹಾತಾ ತಸ್ಲಿ ಸಾವ್ಕಾರ್ಕಿ ತುಮ್ಕಾ ಹಾಯ್ ಮನುನ್ ತುಮಿ ಕಳ್ವುನ್ ಘೆಟ್ಲ್ಯಾಸಿ.


ಅಂಗಾಚಿ ಕಸರತ್ ಉಲ್ಲಿ ಫಾಯ್ದ್ಯಾಕ್ ಪಡ್ತಾ, ತೆ ಖರೆ ಹಾಯ್, ಖರೆ ಆತ್ಮಿಕ್ ರಿತಿಚಿ ಕಸ್‍ರತ್ ಸಗ್ಳ್ಯಾ ರಿತಿನ್ ಲೈ ಕಿಮ್ತಿಚಿ, ತಿ ಅತ್ತಾಚ್ಯಾ ಅನಿ ಫಿಡ್ಲ್ಯಾ ದೊನಿಬಿ ಜಿವನಾಚ್ಯಾ ಗೊಸ್ಟಿಯಾ ಮಿಳ್ವುತಾ.


ಸಗ್ಳ್ಯಾ ಯೆಳಾರ್ಬಿ ಧನಿಯಾಕ್ಡೆ ಖುಶಿನ್ ರ್‍ಹಾವಾ, ಖುಶಿ ಹೊವಾ ಮನುನ್ ಮಿಯಾ ಅನಿ ಪರ್ತುನ್ ಸಾಂಗ್ತಾ.


ತುಮಿ ಅಮ್ಚ್ಯಾ ಅನಿ ಧನಿಯಾಚ್ಯಾ ಸರ್ಕೆಚ್ ಚಲ್ಲ್ಯಾಸಿ, ಅನಿ ತುಮ್ಕಾ ತರಾಸ್ ರ್‍ಹಾಲ್ಯಾರ್‍ಬಿ ಪವಿತ್ರ್ ಆತ್ಮ್ಯಾನ್ ದಿಲ್ಲ್ಯಾ ಕುಶಿನ್ ಅಮಿ ದಿಲ್ಲಿ ಬರಿ ಖಬರ್ ಘೆಟ್ಲ್ಯಾಶಿ.


ಕ್ರಿಸ್ತಾಚೆ ಶಿಕಾಪ್ ತುಮ್ಚ್ಯಾ ಭುತ್ತುರ್ಲ್ಲ್ಯಾ ಮನಾತ್ ಲೈ ಘಟ್ಟ್ ಹೊವ್ನ್ ರ್‍ಹಾಂವ್ದಿತ್, ತುಮಿ ದೆವಾಕ್ನಾ ಶಿಕಲೆ ಶಿಕ್ವುಕ್ ಅನಿ ಎಕಾಮೆಕಾಕ್ ಬುದ್ದ್ ಸಾಂಗುಕ್ ವಾಪ್ರಾ, ತುಮ್ಚ್ಯಾ ಮನಾತ್ ದೆವಾಕ್ ಧನ್ಯವಾದ್ ದಿವ್ನ್, ಗಿತ್ ಸಾಂಗ್ತಲೆ ಅನಿ ಕಿರ್ತನ್ ಸಾಂಗ್ತಲೆ ಅನಿ ಆತ್ಮಿಕ್ ಗಿತಾ ಸಾಂಗ್ತಲೆ ಹೊವ್ನ್ ರ್‍ಹಾವಾ.


ತುಮ್ಚಿ ವಿಶ್ವಾಸಾಚಿ ಬಲಿ ದೆವಾಕ್‍ ದಿತಲ್ಯಾ ಸೆವೆತ್ ಮಾಜೆಚ್ ರಗಾತ್ ಬಲಿ ಭೆಟ್ವು‍ಲ್ಯಾರ್ಬಿ ಮಾಕಾ ಖುಶಿ, ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ಮಿಯಾಬಿ ಖುಶಿ ಹೊತಾ.


ಜುದೆವ್ ಲೊಕಾಂಚ್ಯಾ ಪಾಪಾನ್ ಜಗಾ ವರ್ತಿ ಮೊಟಿ ಆರ್ಶಿವಾದಾ ಘೆವ್ನ್ ಯೆಲ್ಯಾನ್, ಅನಿ ತೆಂಚ್ಯಾ ಆತ್ಮಿಕ್ ಗರಿಬ್ಕಿನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ವರ್‍ತಿ ಮೊಟೊ ಆಶಿರ್ವಾದ್ ಹಾನ್ಲಿನ್. ತಸೆಜಾಲ್ಯಾರ್ ಸಗ್ಳ್ಯಾ ಜುದೆವ್ ಲೊಕಾಕ್ನಿ ಧರ್ಲ್ಯಾರ್ ತಿ ಆಶಿರ್ವಾದಾ ಕವ್ಡಿ ಮೊಟಿ ರ್‍ಹಾತಿಲ್!


ಖರೆ ತುಮಿ ಕ್ರಿಸ್ತಾಚ್ಯಾ ತರಾಸಾತ್ನಿ ವಾಟೊ ಘೆವ್ಲಾಗಲ್ಲ್ಯಾ ಸಾಟ್ನಿ ಖುಶಿ ಹೊವಾ, ಕ್ರಿಸ್ತ್ ಅಪ್ಲಿ ಮಹಿಮಾ ದಾಕ್ವುತಾನಾ ತುಮಿ ಖುಶಿನ್ ಭರ್‍ತ್ಯಾಶಿ ಅನಿ ಆನಂದಿತ್ ಹೊತ್ಯಾಶಿ.


ಅನಿ ಅಶೆ, ಸಾಂಗುಕ್ ಹೊಯ್ನಾ ತಸ್ಲಿ ಪದ್ವಿ ಅಮ್ಚ್ಯಾತ್ನಾ ನ್ಹಯ್, ದೆವಾಕ್ನಾ ಯೆತಾ ಮನುನ್ ದಾಕ್ವುನ್ ದಿವ್‍ಸಾಟಿ ಹೆ ಬದಿಕ್ ಅಮಿ ಮಾಟಿಚ್ಯಾ ಆಯ್ದಾನಾತ್ನಿ ವಾವುನ್ ಘೆವ್ನ್ ಹಾಂವ್.


ತಸೆ ಮನುನ್ ತರಾಸಾತ್ನಾ ಅನಿ ಮನಾಕ್ ಬೆಜಾರ್ ಹೊವ್ನ್ ಅನಿ ಡೊಳ್ಯಾನಿತ್ನಾ ದುಕ್ಕಾ ಗಳ್ವುನ್ ತಿ ಚಿಟಿ ಮಿಯಾ ತುಮ್ಕಾ ಲಿವಲ್ಲೊ, ತುಮ್ಕಾ ದಾಕ್ವುಚೆ ಮನುನ್ ನ್ಹಯ್ ಖಾಲಿ ತುಮ್ಚೆ ವೈರ್ ಮಾಕಾ ಅಸಲ್ಲೊ ಪ್ರೆಮ್ ಕೆವ್ಡೊ ಮನುನ್ ದಾಕ್ವುನ್ ದಿವ್ಕ್ ಮಿಯಾ ಲಿವಲ್ಲೊ.


ದೆವುಚ್ ಬರೊಶ್ಯಾಚೊ ಮುಳ್, ತುಮಿ ತೆಚ್ಯಾ ವರ್‍ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ತುಮ್ಕಾ ತೊ ಪುರಾ ಸಂತೊಸಾನ್ ಅನಿ ಸಮಾದಾನಾನ್ ಭರುಂದಿತ್, ಅಶೆ ಪವಿತ್ರ್ ಆತ್ಮ್ಯಾಚ್ಯಾ ಬಳಾನ್ ತುಮ್ಚೊ ಬರೊಸೊ ವಾಡುನ್ಗೆತ್ ಜಾಂವ್ದಿತ್.


ಜೆ ಕೊನ್ ಸಂತೊಸಾನ್ ಹಾತ್ ತೆಂಚ್ಯಾ ವಾಂಗ್ಡಾ ಸಂತೊಸಾನ್ ರ್‍ಹಾವಾ, ರಡ್ತಲ್ಯಾಂಚ್ಯಾ ವಾಂಗ್ಡಾ ರಡಾ.


ಹಿ ಅಪೊಸ್ತಲಾ ನ್ಯಾಯ್ ಕರ್ತಲ್ಯಾ ಸಭೆತ್ನಾ ಬಾಯ್ರ್ ಗೆಲೆ ಜೆಜುಚ್ಯಾ ನಾಂವಾ ಸಾಟ್ನಿ ಅವಮಾನ್ ಕರುನ್ ಘೆವ್ಕ್ ಅಮಿಬಿ ಸಕ್ತಾಂವ್ ಮನುನ್ ಕುಶಿ ಹೊಲ್ಯಾನಿ.


ಅತ್ತಾ ಉಪ್ಪಾಸಿ ಹೊತ್ತ್ಯಾನೊ ತುಮಿ ಸುಖಿ; ತುಮ್ಕಾ ಭರ್‍ಪುರ್ ಗಾವ್ತಾ! ಅತ್ತಾ ರಡ್ತಲ್ಯಾನೊ ತುಮಿ ಕವ್ಡೆ ಸುಖಿ; ತುಮಿ ಹಾಸ್ತ್ಯಾಶಿ!


ಜೆ ಕೊನ್ ತರಾಸಾತ್ ಹಾತ್ ತೆನಿ ಕವ್ಡೆ ಸುಖಿ; ದೆವುಚ್ ತೆಂಕಾ ಸಮಾದಾನ್ ಕರ್‍ತಾ.


ತೆಂಕಾ ಹುಕುಮ್ ದಿ ತೆನಿ ಬರಿ ಕಾಮಾ ಕರುಂದಿತ್ ಮನುನ್ ಅನಿ ತೆಂಚ್ಯಾ ವೈನಾ ತೆನಿ ಸಾಂವ್ಕಾರ್ ಹೊಂವ್ದಿತ್. ಉದಾರ್ ಪಾನಾನ್ ರ್‍ಹಾಂವ್ದಿತ್ ಅನಿ ದುಸ್ರ್ಯಾಚ್ಯಾ ವಾಂಗ್ಡಾ ವಾಟುನ್ ಘೆಂವ್ದಿತ್.


ಖರೆ ಪೆದ್ರುನ್ ತೆಕಾ ಮಾಜ್ಯಾಕ್ಡೆ ಪೈಸೆ, ಸೊನೆ ಕಾಯ್ ನಾ, ಜಾಲ್ಯಾರ್ ಮಾಜ್ಯಾಕ್ಡೆ ಹೊತ್ತೆ ಮಿಯಾ ತುಕಾ ದಿತಾ ನಜರೆತಾಚ್ಯಾ ಜೆಜುಚ್ಯಾ ನಾಂವಾನ್ ಮಿಯಾ ಸಾಂಗ್ತಾ ಚಲುಕ್‍ಲಾಗ್,


ಮಿಯಾ ತುಮ್ಚ್ಯಾಸಾಟ್ನಿ ಸೊಸುನ್ ಘೆಟಲ್ಲ್ಯಾ ತರಾಸಾನಿ ಮಾಕಾ ಖುಶಿ ಹೊಲಾ, ಕ್ರಿಸ್ತ್ ತಾಂಡೊ ಮನ್ತಲ್ಯಾ ಅಪ್ಲ್ಯಾ ಆಂಗಾ ವೈನಾ ಅನಿ ಲೈ ತರಾಸಾ ಸೊಸುನ್ ಘೆವ್ನಗೆತುಚ್ ರ್‍ಹಾತಾ. ಹ್ಯಾ ತರಾಸಾತ್ನಿ ಮಿಯಾ ಸೊಸುನ್ ಘೆವ್ಚೆ ಹೊಲ್ಲೆ ಸಗ್ಳೆ, ತೆಚ್ಯಾ ಆಂಗಾ ಮಟ್ಲ್ಯಾರ್ ತಾಂಡ್ಯಾಸಾಟ್ನಿ ಸೊಸುನ್ ಘೆವ್ಲಾ.


ದೆವ್ ಅಪ್ನಾಚ್ಯಾ ಮಹಿಮೆಚ್ಯಾ ಬದಿಕಾತ್ನಾ ತುಮ್ಚ್ಯಾ ಭುತ್ತುರ್ಲಿ ಮನಾ ಘಟ್ ರ್‍ಹಾವ್ಕ್ ಅಪ್ನಾಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಬಳ್ ದಿಂವ್ದಿ ಮನುನ್ ಮಿಯಾ ದೆವಾಕ್ಡೆ ಮಾಗ್ತಾ.


ದೆವಾಚ್ಯಾ ಸಗ್ಳ್ಯಾ ಲೊಕಾತ್ನಿ ಮಿಯಾ ಸಗ್ಳ್ಯಾಕಿಂತಾ ಕನಿಸ್ಟ್ ಹೊಲ್ಯಾರ್ಬಿ ದೆವಾನ್ ಮಾಕಾ ಕ್ರಿಸ್ತಾಚಿ ಮೆಜುಕ್ ಹೊಯ್ನಾ ತವ್ಡಿ ಸಾವ್ಕಾರ್ಕಿಚ್ಯಾ ವಿಶಯಾತ್ಲಿ ಬರಿ ಖಬರ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿಕ್ಡೆ ಘೆವ್ನ್ ಜಾತಲೊ ಅವಕಾಸ್ ದಿಲ್ಯಾನ್.


ಬಗಾ ಹೆ ಸಗ್ಳೆ ತುಮ್ಚ್ಯಾ ಬರೆಪಾನಾ ಸಾಟ್ನಿ ಮನುನ್ ತಯಾರ್ ಕರಲ್ಲೆ ಹಾಯ್‍. ಅಶೆ ದೆವಾಚ್ಯಾ ಕುರ್ಪೆಚೊ ಪಾವ್ಸ್ ಲೈ ಅನಿ ಲೈ ಮಾನ್ಸಾಚ್ಯಾ ವರ್‍ತಿ ಉತರ್ತಾನಾ, ದೆವಾಚ್ಯಾ ಮಹಿಮೆಕ್ ಧನ್ಯವಾದ್ ಸುತ್ತಿಬಿ ಜಾಸ್ತಿ ಚಡುನ್ಗೆತ್ ಜಾತಾ.


ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಚ್ಯಾ ವೈನಾ ತುಮಿ ಸಗ್ಳ್ಯಾ ರಿತಿಚ್ಯಾ ಬೊಲ್ನ್ಯಾತ್ಲಿ ಅನಿ ಸಗ್ಳ್ಯಾ ಶಾನ್‍ಪಾನಾತ್ ಸಗ್ಳ್ಯಾ ವಾಟೆನ್ ಭರ್‍ಪುರ್ ವಾಡ್ಲ್ಯಾಸಿ.


ಮಿಯಾ ಸಾಂಗ್ತಾನಾ ಮಾಜ್ಯಾ ಲೊಕಾಂಚ್ಯಾ ಸಾಟ್ನಿ ಮಾಜ್ಯಾ ಮನಾತ್ ಹೊತಲೊ ಸಂಕಟ್ ಸರಿನಾ ತವ್ಡೊ ಹಾಯ್.


ದೆವಾನ್ ಅಪ್ನಾಚ್ಯಾ ಸ್ವತಾಚ್ಯಾ ಲೆಕಾಕ್ ಸೈತ್ ಅಪ್ನಾಸಾಟ್ನಿ ಥವ್ನ್ ಘೆಯ್ನಸ್ತಾನಾ, ಅಮ್ಚ್ಯಾಸಾಟ್ನಿ ದಿವ್ನ್ ಸೊಡ್ಲ್ಯಾನ್! ಅಪ್ಲ್ಯಾ ಲೆಕಾಕುಚ್ ದಿಲ್ಲೊ ದೆವ್ ಸಗ್ಳೆಬಿ ಅಮ್ಕಾ ಫುಕೊಟ್ ದಿ ನಸ್ತಾನಾ ರ್‍ಹಾಯ್ಲ್ ಕಾಯ್?


ಅರ್ದ್ಯಾ ರಾತ್ತಿನ್ ಪಾವ್ಲು ಅನಿ ಸಿಲಾಸ್ ಮಾಗ್ನಿ ಕರಿತ್ ದೆವಾಕ್ ಸ್ತುತಿ ಗಿತಾ ಸಾಂಗಿತ್ ಹೊತ್ತೆ, ಹುರಲ್ಲಿ ಚೊರಾ ಸಗ್ಳಿ ತೆ ಆಯ್ಕಿತ್ ಹೊತ್ತಿ.


ಕುಸಿ ಹೊವಾ ಅನಿ ಸಂತೊಸಾನ್ ರ್‍ಹಾವಾ, ಸರ್‍ಗಾತ್ ತುಮ್ಕಾ ಮೊಟೆ ಭೊಮಾನ್ ತಯಾರ್ ಕರುನ್ ಥವಲ್ಲೆ ಹಾಯ್. ತುಮ್ಚ್ಯಾನ್ಕಿ ಅದ್ದಿ ಜಿವನ್ ಕರಲ್ಲ್ಯಾ ಪ್ರವಾದ್ಯಾಕ್ನಿಬಿ ಲೊಕಾನಿ ಅಸೊಚ್ ತರಾಸ್ ದಿಲ್ಯಾನಾತ್ .


ಜೆ ಕೊನ್‍ ಜಯ್ ಹೊವ್ನ್ ಜಿಕುನ್ ಯೆತ್ಯಾತ್, ತೆನಿ ಹೆ ಮಾಜೆಕ್ನಾ ಘೆತ್ಯಾತ್ ಮಿಯಾ ತೆಂಚೊ ದೆವ್ ಹೊತಾ ಅನಿ ತೆನಿ ಮಾಜಿ ಪೊರಾ ಹೊತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು