2 ಕೊರಿಂಥದವರಿಗೆ 4:6 - ದೆವಾಚಿ ಖರಿ ಖಬರ್6 ಕಶ್ಯಾಕ್ ಮಟ್ಲ್ಯಾರ್ “ಕಾಳ್ಕಾತ್ನಾ ಉಜ್ವೊಡ್ ಹೊಳ್ವುಂದಿತ್” ಮಟಲ್ಲ್ಯಾ ದೆವಾನ್ ಜೆಜು ಕ್ರಿಸ್ತಾಚ್ಯಾ ತೊಂಡಾ ವರ್‍ತಿ ಹೊಳ್ವುತಲ್ಯಾ ದೆವಾಚ್ಯಾ ಮಹಿಮೆಚಿ ವಳಕ್ ಅಮ್ಕಾ ಗಾವುಕ್ ಸಾಟ್ನಿ, ಅಪ್ನಾಚೊ ಉಜ್ವೊಡ್ ಅಮ್ಚ್ಯಾ ಮನಾತ್ನಿ ಫಾಕಿ ಸರ್ಕೊ ಕರ್‍ಲ್ಯಾನಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಯಾಕೆಂದರೆ “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದ ದೇವರೇ, ತಮ್ಮ ಜ್ಯೋತಿಯಿಂದ ನಮ್ಮ ಅಂತರಂಗವನ್ನು ಬೆಳಗಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿಸ್ತಯೇಸುವಿನ ಮುಖಮಂಡಲದಲ್ಲಿ ಪ್ರಜ್ವಲಿಸುತ್ತಿರುವ ದೇವರ ಮಹಿಮೆಯ ದಿವ್ಯಜ್ಞಾನವು ನಮ್ಮಲ್ಲಿ ಉದಯಿಸುವಂತಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಯಾಕಂದರೆ ಕತ್ತಲೆಯೊಳಗಿಂದ ಬೆಳಕು ಹೊಳೆಯಲಿ ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ6 “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದು ಆಜ್ಞಾಪಿಸಿದ ದೇವರು ತಾವೇ, ತಮ್ಮ ಪ್ರಕಾಶವನ್ನು ನಮ್ಮ ಹೃದಯದ ಮೇಲೆ ಬೆಳಗಿಸಿದ್ದಾರೆ. ಹೀಗೆ ಕ್ರಿಸ್ತ ಯೇಸುವಿನ ಮುಖದಲ್ಲಿ ಪ್ರತಿಬಿಂಬಿಸುತ್ತಿರುವ ದೇವರ ಮಹಿಮೆಯ ತಿಳುವಳಿಕೆಯನ್ನು ನಮ್ಮಲ್ಲಿ ಉದಯಿಸುವಂತಾಗಿದೆ. ಅಧ್ಯಾಯವನ್ನು ನೋಡಿ |
ತೆಂಚೆಸಾಟ್ನಿ ನ್ಹಯ್, ತುಮ್ಚ್ಯಾಸಾಟ್ನಿ ತೆಂಕಾ ಪ್ರವಾದ್ ಕರುನ್ ಸಾಂಗ್ತಲೆ ಕಾಮ್ ದಿಲ್ಲೆ ಹಾಯ್ ಮನುನ್ ದೆವಾನ್ ಪ್ರವಾದ್ಯಾಕ್ನಿ ಕಳ್ವುನ್ ದಿಲ್ಲ್ಯಾನ್. ತೆನಿ ಸಾಂಗಟಲ್ಲ್ಯಾ ತ್ಯಾಚ್ ಸಂಗ್ತಿಯಾ ಅತ್ತಾ ಸರ್ಗಾ ವೈನಾ ಯೆಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ತಾಕ್ತಿನ್ ತುಮ್ಕಾ ಬರಿ ಖಬರ್ ಪರ್ಗಟ್ ಕರಲ್ಲೆ ತುಮ್ಕಾ ಕಳ್ವುಲ್ಯಾನಿ, ತೆ ಸಗ್ಳ್ಯೆ ದಿಸುನ್ ಯೆತಲೆ ಬಗುಕ್ ದೆವಾಚಿ ದುತಾ ಸಯ್ತ್ ರಾಕುನ್ ಹಾತ್.