Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 2:4 - ದೆವಾಚಿ ಖರಿ ಖಬರ್

4 ತಸೆ ಮನುನ್ ತರಾಸಾತ್ನಾ ಅನಿ ಮನಾಕ್ ಬೆಜಾರ್ ಹೊವ್ನ್ ಅನಿ ಡೊಳ್ಯಾನಿತ್ನಾ ದುಕ್ಕಾ ಗಳ್ವುನ್ ತಿ ಚಿಟಿ ಮಿಯಾ ತುಮ್ಕಾ ಲಿವಲ್ಲೊ, ತುಮ್ಕಾ ದಾಕ್ವುಚೆ ಮನುನ್ ನ್ಹಯ್ ಖಾಲಿ ತುಮ್ಚೆ ವೈರ್ ಮಾಕಾ ಅಸಲ್ಲೊ ಪ್ರೆಮ್ ಕೆವ್ಡೊ ಮನುನ್ ದಾಕ್ವುನ್ ದಿವ್ಕ್ ಮಿಯಾ ಲಿವಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಬಹಳವಾಗಿ ಕಣ್ಣೀರಿಡುತ್ತಾ ಹೃದಯದ ಬಹು ಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನೇ ಹೊರತು ನಿಮ್ಮನ್ನು ನೋಯಿಸುವುದಕ್ಕಾಗಿಯಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಮನೋವ್ಯಥೆಯಿಂದಲೂ ಹೃದಯವೇದನೆಯಿಂದಲೂ ಕಣ್ಣೀರಿಡುತ್ತಾ ನಾನು ನಿಮಗೆ ಪತ್ರ ಬರೆದೆ. ನಿಮ್ಮನ್ನು ದುಃಖಕ್ಕೀಡುಮಾಡಬೇಕೆಂದಲ್ಲ, ನಿಮ್ಮನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿರುವೆನೆಂದು ನೀವು ತಿಳಿದುಕೊಳ್ಳಬೇಕೆಂದು ಬರೆದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಮಗೆ ದುಃಖವಾಗಬೇಕೆಂತಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳುಕೊಳ್ಳಬೇಕೆಂತಲೇ ನಾನು ಬಹಳ ಕಣ್ಣೀರು ಬಿಡುತ್ತಾ ಹೃದಯದ ಬಹುಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾನು ಮೊದಲೊಮ್ಮೆ ನಿಮಗೆ ಬರೆದಾಗ, ನನ್ನ ಹೃದಯವು ಬಹಳ ಗಲಿಬಿಲಿಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಡುತ್ತಾ ನಿಮಗೆ ಬರೆದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಏಕೆಂದರೆ, ನಿಮಗೆ ದುಃಖವಾಗಬೇಕೆಂದಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಮಹಾ ದುಃಖದಿಂದಲೂ ಬಹಳ ಕಣ್ಣೀರಿನಿಂದಲೂ ಹೃದಯದ ವೇದನೆಯಿಂದಲೂ ನಿಮಗೆ ಬರೆದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 2:4
12 ತಿಳಿವುಗಳ ಹೋಲಿಕೆ  

ತಸೆಮನುನ್ ಮಿಯಾ ತುಮ್ಕಾ ಲಿವಲ್ಲಿ ಚಿಟಿ ಎಕ್ಲ್ಯಾನ್ ಅನ್ನ್ಯಾಯ್ ಕರ್‍ಲ್ಯಾನಾಯ್ ನಾಹೊಲ್ಯಾರ್ ದುಸ್ರ್ಯಾನ್ ಅನ್ನ್ಯಾಯ್ ಸೊಸ್ಲ್ಯಾನಾಯ್ ಮನುನ್ ದಾಕ್ವುನ್ ದಿತಲ್ಯಾ ಕಾರನಾನ್ ನ್ಹಯ್ ಮಾಕಾ ತುಮ್ಚ್ಯಾ ವರ್‍ತಿ ಹೊತ್ತೊ ಪ್ರೆಮ್ ಕವ್ಡೊ ಜಗ್ಗೊಳ್ಲೊ ಮನುನ್ ದೆವಾಚ್ಯಾ ಇದ್ರಾಕ್ ತುಮ್ಕಾ ಸಾಂಗ್ತಲ್ಯಾ ಉದ್ದೆಶಾನ್ ಮಿಯಾ ತೆ ಲಿವಲ್ಲೆ.


ಕಶ್ಯಾಕ್ ಮಟ್ಲ್ಯಾರ್, ಲೈ ಲೊಕಾ ಕ್ರಿಸ್ತಾಚ್ಯಾ ಖುರ್ಸಾಕ್ ವಿರೊದ್ ಹೊವ್ನ್ ಚಲುಲ್ಲಾತ್, ತೆಂಚ್ಯಾ ವಿಶಯಾತ್ ತುಮ್ಕಾ ಮಿಯಾ ಲೈಂದಾ ಸಾಂಗ್ತಲೊ ಅತ್ತಾಬಿ ರಡುನ್ಗೆತ್; ಸಾಂಗ್ತಾ.


ಮಿಯಾ ತುಮ್ಚ್ಯಾಸಾಟ್ನಿ ಮಾಜೆ ಮನುನ್ ಹೊತ್ತೆ ಸಗ್ಳೆ ಖರ್ಚ್ ಕರ್‍ತಾ ಅನಿ ಮಾಜೊ ಜಿವ್ ಸೈತ್ ತುಮ್ಚ್ಯಾಸಾಟ್ನಿ ಕರಗ್ತಾ. ಮಿಯಾ ತುಮ್ಚೊ ಎವ್ಡೊ ಪ್ರೆಮ್ ಕರ್ತನಾ ತುಮಿ ಮಾಜೊ ಕಮ್ಮಿ ಪ್ರೆಮ್ ಕರುಚೆ ಕಾಯ್?


ತುಮ್ಚ್ಯಾ ವಿಶಯಾತ್ ದೆವಾಕ್ ಹಾಯ್ ತಸ್ಲಿಚ್ ಉರ್ಬಾ ಮಾಕಾಬಿ ಹಾಯ್. ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಕಾ ಎಕ್ ಘೊಮನ್ಸಾಕ್ಡೆ ಲಗಿನ್ ಕರುನ್ ದಿಲಾ, ಎಕ್ ಖರ್‍ಯಾ ಪವಿತ್ರ್ ನಿಂಬ್ಯಾ ಚೆಡ್ವಾಚ್ಯಾ ಸರ್ಕೆ ತುಮ್ಕಾ ಕ್ರಿಸ್ತಾಚಿ ಬಾಯ್ಕೊ ಕರುನ್ ದಿಲ್ಲೆ ಹಾಯ್ .


ಮಿಯಾ ದಿಲ್ಲ್ಯಾ ಸಗ್ಳ್ಯಾ ಸಂಗ್ತಿಯಾ ತುಮಿ ಖಾಲ್ತಿ ಹೊವ್ನ್ ಪಾಳ್ತ್ಯಾಶಿ ಕಾಯ್ ನಾ ಮನುನ್ ತುಮ್ಚಿ ಪರಿಕ್ಷಾ ಕರುಕ್ ಮನುನ್ ಮಿಯಾ ತುಮ್ಕಾ ತಿ ಚಿಟ್ ಲಿವಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು