2 ಕೊರಿಂಥದವರಿಗೆ 12:9 - ದೆವಾಚಿ ಖರಿ ಖಬರ್9 ಖರೆ ತೆನಿ ಮಟ್ಲ್ಯಾನ್, "ಮಾಜಿ ಕುರ್ಪಾ ತುಕಾ ಫಿರೆ, ಕಶ್ಯಾಕ್ ಮಟ್ಲ್ಯಾರ್ ಮಾನ್ಸಾಚ್ಯಾ ಬಳ್‍ನಸಲ್ಲ್ಯಾ ಪರಿಸ್ಥಿತಿತ್ ಮಾಜೊ ಸಗ್ಳೊ ಬಳ್ ದಿಸುನ್ ಯೆತಾ," ತಸೆಮನುನ್ ಕ್ರಿಸ್ತಾಚೊ ಬಳ್ ಮಾಜ್ಯಾ ಭುತ್ತುರ್ ವಸ್ತಿ ಕರುಸಾಟಿ ಮಾಜ್ಯಾ ಬಳನಸಲ್ಲ್ಯಾ ಪರಿಸ್ಥಿತಿಚೆ ಮೊಟೆಪಾನ್ ಮಿಯಾ ಖುಶಿನ್ ಸಾಂಗ್ತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಅದಕ್ಕವರು, “ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ,” ಎಂದು ಹೇಳಿದರು. ಕ್ರಿಸ್ತಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಮತ್ತಷ್ಟು ಹೆಮ್ಮೆಪಡುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆದರೆ ಪ್ರಭುವು ನನಗೆ, “ನನ್ನ ಕೃಪೆಯೇ ನಿನಗೆ ಸಾಕು, ನೀನು ಬಲಹೀನನಾಗಿರುವಾಗ ನನ್ನ ಶಕ್ತಿಯು ನಿನ್ನಲ್ಲಿ ಪರಿಪೂರ್ಣವಾಗಿರುತ್ತದೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಅದಕ್ಕೆ ಕರ್ತ ಯೇಸು, “ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು,” ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು. ಅಧ್ಯಾಯವನ್ನು ನೋಡಿ |