2 ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
2 ನಾನು ನಿಮ್ಮ ಬಳಿಗೆ ಬಂದಾಗ, ಕಠಿಣನಾಗಿ ವರ್ತಿಸಲು ಅವಕಾಶ ಕೊಡಬೇಡಿ. ನಾವು ಪ್ರಾಪಂಚಿಕ ರೀತಿನೀತಿಗಳಿಗೆ ಅನುಗುಣವಾಗಿ ನಡೆಯುತ್ತಿದ್ದೇವೆಂದು ದೂಷಿಸುವವರ ವಿರುದ್ಧ ಖಂಡಿತವಾಗಿಯೂ ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ.
2 ಯಾರು ನಮ್ಮನ್ನು ಲೋಕಾನುಸಾರಿಗಳೆಂದು ಎಣಿಸುತ್ತಾರೋ ಅವರಿಗೆ ದಿಟ್ಟವಾದ ಧೈರ್ಯವನ್ನು ತೋರಿಸಬೇಕೆಂದು ಯೋಚಿಸುತ್ತಾ ಇದ್ದೇನೆ. ನಾವು ನಿಮ್ಮಲ್ಲಿಗೆ ಬಂದಿರುವಾಗ ಅಂಥ ದಿಟ್ಟತನವನ್ನು ತೋರಿಸುವದಕ್ಕೆ ಅವಕಾಶ ಉಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
2 ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ.
2 ನಾನು ನಿಮ್ಮ ಬಳಿಗೆ ಬಂದಾಗ, ಕಠಿಣವಾಗಿ ವರ್ತಿಸಲು ನನಗೆ ಅವಕಾಶಕೊಡಬೇಡಿರಿ. ಏಕೆಂದರೆ ನಾವು ಪ್ರಾಪಂಚಿಕ ರೀತಿಗನುಸಾರವಾಗಿ ನಡೆಯುತ್ತಿದ್ದೇವೆಂದು ಆಕ್ಷೇಪಿಸುವ ಕೆಲವರ ವಿರುದ್ಧ ಖಂಡಿತವಾಗಿಯು ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ.